जिल्हास्तरीय क्रीडा स्पर्धेत ज्योती अॅथलेटिक्स स्पोर्ट्स क्लबचा घवघवीत यश! राज्यस्तरीय पातळीसाठी अनेक खेळाडूंची निवड.
बेळगाव (ता. 4 नोव्हेंबर) : सार्वजनिक शिक्षण विभाग व जिल्हा परिषद, बेळगाव यांच्या वतीने आयोजित जिल्हास्तरीय वैयक्तिक क्रीडा स्पर्धा नुकत्याच जिल्हा क्रीडांगणावर पार पडल्या. या स्पर्धेत ज्योती अॅथलेटिक्स स्पोर्ट्स क्लबच्या खेळाडूंनी उल्लेखनीय कामगिरी करत राज्यस्तरीय स्पर्धेसाठी मजल मारली आहे.
अनुज श्रीकांत हाणगोजी या खेळाडूने 14 वर्षाखालील मुलांच्या गटात 200 मी., 400 मी. आणि 600 मी. धावण्याच्या शर्यतीत अनुक्रमे तीन्ही प्रथम क्रमांक पटकावून तीन सुवर्णपदकांची कमाई केली. त्याच्या या कामगिरीबद्दल त्याला वैयक्तिक विजेतेपदाने गौरविण्यात आले.
14 वर्षाखालील मुलींच्या गटात ज्योत्सना हंगिरकर हिने 100 मी. आणि 200 मी. धावण्याच्या शर्यतीत द्वितीय क्रमांक मिळवला. 17 वर्षाखालील मुलांच्या गटात सर्वेश राजू नाईक याने 1500 मी. आणि 3000 मी. धावण्याच्या स्पर्धेत प्रथम क्रमांक पटकावला.
तर करुणा लक्ष्मण हलगेकर हिने 3000 मी. मध्ये प्रथम क्रमांक व 1500 मी. मध्ये द्वितीय क्रमांक मिळवला.
स्वयंम विनायक पाटील यांनी 200 मी. धावण्याच्या शर्यतीत द्वितीय क्रमांक, ऋतिक राजाराम पाटील याने 3000 मी. मध्ये द्वितीय क्रमांक, आणि शशिकुमार याने 400 मी. धावण्यामध्ये तृतीय क्रमांक मिळवला.
या स्पर्धेत प्रथम व द्वितीय क्रमांक मिळवलेल्या सर्व खेळाडूंची हासन येथे होणाऱ्या राज्यस्तरीय क्रीडा स्पर्धेसाठी निवड झाली आहे. या यशामुळे ज्योती अॅथलेटिक्स स्पोर्ट्स क्लबचे खेळाडू आणि प्रशिक्षक यांचे सर्वत्र कौतुक होत आहे.
या सर्व खेळाडूंना क्लबचे अध्यक्ष व ज्येष्ठ प्रशिक्षक श्री. एल. जी. कोलेकर आणि प्रशिक्षक अनिल गोरे यांचे मार्गदर्शन लाभले. तसेच संबंधित खेळाडूंच्या शाळांचे मुख्याध्यापक व शारीरिक शिक्षक यांचेही प्रोत्साहन लाभले आहे.
ಜಿಲ್ಲಾಸ್ಥರದ ಕ್ರೀಡಾಕೂಟದಲ್ಲಿ ಜ್ಯೋತಿ ಅ್ಯಾಥ್ಲೆಟಿಕ್ಸ್ ಸ್ಪೋರ್ಟ್ಸ್ ಕ್ಲಬ್ದ ಘನ ಯಶಸ್ಸು! ರಾಜ್ಯ ಮಟ್ಟದ ಸ್ಪರ್ಧೆಗೆ ಅನೇಕ ಆಟಗಾರರು ಆಯ್ಕೆ.
ಬೆಳಗಾವಿ (ತಾ. 4 ನವೆಂಬರ್) : ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್, ಬೆಳಗಾವಿ ಇವರ ಆಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾಸ್ಥರದ ವೈಯಕ್ತಿಕ ಕ್ರೀಡಾ ಸ್ಪರ್ಧೆಗಳು ಇತ್ತೀಚೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಸಂಪನ್ನವಾದವು. ಈ ಸ್ಪರ್ಧೆಯಲ್ಲಿ ಜ್ಯೋತಿ ಅ್ಯಾಥ್ಲೆಟಿಕ್ಸ್ ಸ್ಪೋರ್ಟ್ಸ್ ಕ್ಲಬ್ನ ಆಟಗಾರರು ಗಮನಾರ್ಹ ಪ್ರದರ್ಶನ ನೀಡಿದ್ದು, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅನುಜ್ ಶ್ರೀಕಾಂತ್ ಹಾಣಗೋಜಿ ಇವರು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರ ವಿಭಾಗದಲ್ಲಿ 200 ಮೀ., 400 ಮೀ. ಹಾಗೂ 600 ಮೀ. ಓಟದಲ್ಲಿ ಕ್ರಮವಾಗಿ ಮೂರು ಪ್ರಥಮ ಸ್ಥಾನಗಳನ್ನು ಪಡೆದು ಮೂರು ಚಿನ್ನದ ಪದಕಗಳ ಭರ್ಜರಿ ತನ್ನದಾಗಿಸಿಕೊಂಡಿದಾನೆ. ಅವನ ಈ ಸಾಧನೆಗಾಗಿ ಅವನಿಗೆ ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ವಿಭಾಗದಲ್ಲಿ ಜ್ಯೋತ್ಸ್ನಾ ಹಂಗಿರ್ಕರ್ 100 ಮೀ. ಮತ್ತು 200 ಮೀ. ಓಟಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರ ವಿಭಾಗದಲ್ಲಿ ಸರ್ವೇಶ್ ರಾಜು ನಾಯಕ್ 1500 ಮೀ. ಮತ್ತು 3000 ಮೀ. ಓಟಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.
ಅದೇ ವಿಭಾಗದ ಕರುಣಾ ಲಕ್ಷ್ಮಣ ಹಲ್ಗೇಕರ್ 3000 ಮೀ. ಓಟದಲ್ಲಿ ಪ್ರಥಮ ಸ್ಥಾನ ಹಾಗೂ 1500 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಸ್ವಯಂ ವಿನಾಯಕ ಪಾಟೀಲ 200 ಮೀ. ಓಟದಲ್ಲಿ ದ್ವಿತೀಯ ಸ್ಥಾನ, ಹೃತಿಕ್ ರಾಜಾರಾಮ ಪಾಟೀಲ 3000 ಮೀ. ಓಟದಲ್ಲಿ ದ್ವಿತೀಯ ಸ್ಥಾನ, ಮತ್ತು ಶಶಿಕುಮಾರ 400 ಮೀ. ಓಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಎಲ್ಲಾ ಆಟಗಾರರು ಹಾಸನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಯಶಸ್ಸಿನಿಂದ ಜ್ಯೋತಿ ಅ್ಯಾಥ್ಲೆಟಿಕ್ಸ್ ಸ್ಪೋರ್ಟ್ಸ್ ಕ್ಲಬ್ನ ಆಟಗಾರರು ಮತ್ತು ತರಬೇತುದಾರರು ಎಲ್ಲೆಡೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಎಲ್ಲ ಆಟಗಾರರಿಗೂ ಕ್ಲಬ್ ಅಧ್ಯಕ್ಷ ಮತ್ತು ಹಿರಿಯ ತರಬೇತುದಾರ ಶ್ರೀ ಎಲ್. ಜಿ. ಕೋಲೆಕರ್ ಹಾಗೂ ತರಬೇತುದಾರ ಅನಿಲ್ ಗೋರೆ ಇವರ ಮಾರ್ಗದರ್ಶನ ದೊರಕಿತು.
ಅದೇ ರೀತಿ ಸಂಬಂಧಿಸಿದ ಆಟಗಾರರ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಇವರ ಪ್ರೋತ್ಸಾಹವೂ ಸಿಕ್ಕಿದೆ.


