जांबोटी कृषी पत्तीन संघाच्या अध्यक्ष-उपाध्यक्षपदाच्या निवडणुकीत सत्ताधारी गटाची बाजी; नव्या कायद्यानुसार प्रक्रिया पार.
जांबोटी : खानापूर तालुक्यातील जांबोटी कृषी पत्तीन संघाच्या अध्यक्ष-उपाध्यक्षपदाच्या निवडणुकीभोवती रंगलेले राजकारण अखेर निवळले असून सत्ताधारी गटाने बाजी मारली आहे. नव्या कायद्याच्या आधारे आज निवडणूक प्रक्रिया पार पडत जयवंत देसाई यांची अध्यक्षपदी, तर किरण साबळे यांची उपाध्यक्षपदी बिनविरोध निवड करण्यात आली. निवडीनंतर परिसरात जल्लोषाचे वातावरण पाहायला मिळाले. या सोसायटीवर माजी आमदार व बेळगाव जिल्हा मध्यवर्ती सहकारी बँकेचे संचालक अरविंद पाटील यांच्या गटाचे वर्चस्व सिद्ध झाल्याने त्यांच्या समर्थकांनी व पाठीराख्यांनी गुलालाची उधळण करून आनंदोत्सव साजरा केला.

या निवडणुकीपूर्वी माजी अध्यक्षा धनश्री सरदेसाई यांनी जुन्या कायद्यानुसार मृत व्यक्तीच्या नावाने प्रतिनिधी (प्रॉक्सी) मतदान झाल्याचा आरोप करत डीआरओंकडे तक्रार दाखल केली होती. त्यानुसार आजची निवड प्रक्रिया पुढे ढकलण्याचा आदेश देण्यात आला होता. मात्र, सहकार खात्याने 2025 साली लागू केलेल्या नव्या कायद्यानुसार संबंधित सोसायटीच्या (कृषी पत्तीन संघ) सचिवांना अध्यक्ष व उपाध्यक्ष निवडणूक प्रक्रिया पार पाडण्याचा अधिकार देण्यात आला आहे.
त्याच कायद्यानुसार आजची निवडणूक पार पडली. तसेच सहकार खात्याच्या नवीन कायदा 29 नुसार मृत व्यक्तीच्या नावाने प्रतिनिधी (प्रॉक्सी) मतदान ग्राह्य धरण्यात आल्याचे स्पष्ट करण्यात आले. त्यामुळे निवडणुकीवरील वाद इथेच संपुष्टात आल्याचे मानले जात आहे.
यावेळी सर्व नूतन संचालक उपस्थित होते. त्यांचा सत्कार करण्यात आला. कार्यक्रमाला माजी अध्यक्ष मधुकर देसाई, जांबोटी ग्राम पंचायत उपाध्यक्ष सुनील देसाई, मिलिंद डांगे आदी मान्यवर उपस्थित होते.
दरम्यान, या घडामोडींमुळे स्थानिक पातळीवर राजकीय वातावरण चांगलेच तापले होते. मात्र नव्या कायद्याच्या चौकटीत निवड प्रक्रिया पार पडल्याने सत्ताधारी गटाने आपली ताकद सिद्ध केल्याचे चित्र स्पष्ट झाले आहे.
अध्यक्ष व उपाध्यक्ष पदाच्या या निवडणुकीमध्ये विशेष बाब म्हणजे अध्यक्ष व उपाध्यक्ष पदाच्या निवडीला एकूण 12 सदस्या पैकी 11 सदस्यांनी आपल्या सह्या करून अनुमोदन (मान्यता) दिली असल्याची माहिती जांबोटी ग्रामपंचायतीचे माजी उपाध्यक्ष व सत्ताधारी गटाचे एक प्रमुख नेते सुनील देसाई यांनी दिली आहे.
ಜಾಂಬೋಟಿ ಕೃಷಿ ಪತ್ತೀನ ಸಂಘದ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯಲ್ಲಿ ಸತ್ತಾಧಾರಿ ಗುಂಪಿನ ಗೆಲುವು; ಹೊಸ ಕಾಯ್ದೆಯಂತೆ ಪ್ರಕ್ರಿಯೆ ಪೂರ್ಣ.
ಜಾಂಬೋಟಿ : ಜಾಂಬೋಟಿ ಕೃಷಿ ಪತ್ತೀನ ಸಂಘದಲ್ಲಿ ಮಾಜಿ ಶಾಸಕ ಹಾಗೂ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಅರವಿಂದ ಪಾಟೀಲ ಅವರ ವೈಯಕ್ತಿಕ ಹಾಗೂ ಗುಂಪಿನ ಪ್ರಭಾವ ಸಾಬೀತಾಗಿರುವುದರಿಂದ, ಬೆಂಬಲಿಗರು ಹಾಗೂ ಅವರ ಅನುಯಾಯಿಗಳು ಗುಲಾಲ ಎರಚಿ ಸಂಭ್ರಮಾಚರಣೆ ನಡೆಸಿದರು.
ಅಧಿಕ ಮಾಹಿತಿ ಪ್ರಕಾರ ಖಾನಾಪುರ ತಾಲ್ಲೂಕಿನ ಜಾಂಬೋಟಿ ಕೃಷಿ ಪತ್ತೀನ ಸಹಕಾರ ಸಂಘದ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯನ್ನು ಸುತ್ತುವರೆದಿದ್ದ ರಾಜಕೀಯ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಸತ್ತಾಧಾರಿ ಗುಂಪು ಗೆಲುವು ಸಾಧಿಸಿದೆ. ಹೊಸ ಕಾಯ್ದೆಯ ಆಧಾರದ ಮೇಲೆ ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜಯವಂತ ದೇಸಾಯಿ ಅವರನ್ನು ಅಧ್ಯಕ್ಷರಾಗಿ ಹಾಗೂ ಕಿರಣ ಸಾಬಳೆ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಆಯ್ಕೆಯ ನಂತರ ಭಾಗದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿತು.
ಈ ಚುನಾವಣೆಗೆ ಮೊದಲು ಮಾಜಿ ಅಧ್ಯಕ್ಷೆ ಧನಶ್ರೀ ಸರದೇಸಾಯಿ ಅವರು ಹಳೆಯ ಕಾಯ್ದೆಯ ಪ್ರಕಾರ ಮೃತ ವ್ಯಕ್ತಿಯ ಹೆಸರಿನಲ್ಲಿ ಪ್ರತಿನಿಧಿ (ಪ್ರಾಕ್ಸಿ) ಮತದಾನ ನಡೆದಿರುವುದಾಗಿ ಆರೋಪಿಸಿ ಡಿಆರ್ಒ ಅವರ ಬಳಿ ದೂರು ಸಲ್ಲಿಸಿದ್ದರು. ಅದರಂತೆ ಇಂದಿನ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡುವಂತೆ ಆದೇಶ ನೀಡಲಾಗಿತ್ತು. ಆದರೆ ಸಹಕಾರ ಇಲಾಖೆಯು 2025ರಲ್ಲಿ ಜಾರಿಗೆ ತಂದ ಹೊಸ ಕಾಯ್ದೆಯ ಪ್ರಕಾರ ಸಂಬಂಧಿತ ಸೊಸೈಟಿಯ (ಕೃಷಿ ಪತ್ತೀನ ಸಂಘ) ಕಾರ್ಯದರ್ಶಿಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಸುವ ಅಧಿಕಾರ ನೀಡಲಾಗಿದೆ. ಅದೇ ಕಾಯ್ದೆಯಂತೆ ಇಂದಿನ ಚುನಾವಣೆ ನಡೆಸಲಾಯಿತು.
ಹಾಗೂ ಸಹಕಾರ ಇಲಾಖೆಯ ಹೊಸ ಕಾಯ್ದೆ 29ರ ಪ್ರಕಾರ ಮೃತ ವ್ಯಕ್ತಿಯ ಹೆಸರಿನಲ್ಲಿ ಪ್ರತಿನಿಧಿ (ಪ್ರಾಕ್ಸಿ) ಮತದಾನವನ್ನು ಮಾನ್ಯವೆಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಚುನಾವಣೆಯ ಮೇಲಿನ ವಿವಾದ ಇಲ್ಲಿಯೇ ಅಂತ್ಯಗೊಂಡಿದೆ ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಎಲ್ಲಾ ನೂತನ ನಿರ್ದೇಶಕರು ಹಾಜರಿದ್ದರು. ಅವರ ಸತ್ಕಾರವೂ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಮಧುಕರ್ ದೇಸಾಯಿ, ಜಾಂಬೋಟಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುನೀಲ ದೇಸಾಯಿ, ಮಿಲಿಂದ ಡಾಂಗೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದರಲ್ಲಿ ನಡೆದ ಬೆಳವಣಿಗೆಗಳಿಂದ ಸ್ಥಳೀಯ ಮಟ್ಟದಲ್ಲಿ ರಾಜಕೀಯ ವಾತಾವರಣ ಚರ್ಚೆಗೆ ಗ್ರಾಸವಾಗಿತ್ತು . ಆದರೆ ಹೊಸ ಕಾಯ್ದೆಯ ಚೌಕಟ್ಟಿನೊಳಗೆ ಚುನಾವಣಾ ಪ್ರಕ್ರಿಯೆ ನಡೆದಿರುವುದರಿಂದ ಸತ್ತಾಧಾರಿ ಗುಂಪು ತನ್ನ ಬಲವನ್ನು ಸಾಬೀತುಪಡಿಸಿದೆ ಎಂಬುದು ಸ್ಪಷ್ಟವಾಗಿದೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಈ ಚುನಾವಣೆಯಲ್ಲಿ ವಿಶೇಷವೆಂದರೆ, ಒಟ್ಟು 12 ಸದಸ್ಯರ ಪೈಕಿ 11 ಸದಸ್ಯರು ತಮ್ಮ ಸಹಿ ಮಾಡಿ ಅನುಮೋದನೆ (ಮಂಜೂರು) ನೀಡಿರುವುದಾಗಿ ಜಾಂಬೋಟಿ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷ ಹಾಗೂ ಸತ್ತಾಧಾರಿ ಗುಂಪಿನ ಪ್ರಮುಖ ನಾಯಕ ಸುನಿಲ್ ದೇಸಾಯಿ ಅವರು ತಿಳಿಸಿದ್ದಾರೆ.



