तालुक्यातील रस्त्यांच्या दुरुस्तीसाठी इरफान तालीकोटी यांची पालकमंत्र्यांकडे मागणी; बीडी ते हलशी सायंकाळच्या बससेवेचा शुभारंभ.
खानापूर : सामाजिक कार्यकर्ते इरफान तालीकोटी यांनी खानापूर तालुक्यातील अनेक नादुरुस्त रस्त्यांच्या दुरुस्तीसाठी पालकमंत्री सतीश जारकीहोळी यांची नुकतीच भेट घेतली व निवेदन सादर केले. तसेच, हलशी भागातील विद्यार्थ्यांची व नागरिकांची गैरसोय लक्षात घेऊन बीडी ते हलशी सायंकाळच्या बससेवेचा शुभारंभ करण्यात आला. या निर्णयामुळे हलशी परिसरातील नागरिक व विद्यार्थ्यांमध्ये समाधानाचे वातावरण निर्माण झाले आहे.
मंगळवारी 14 तारखेला पालकमंत्री सतीश जारकीहोळी हे कक्केरी, बिडी, लिंगनमठ परिसरातील नादुरुस्त रस्त्यांची पाहणी करण्यासाठी आले होते. त्यावेळी सामाजिक कार्यकर्ते इरफान तालीकोटी यांनी तालुक्यातील युवा कार्यकर्ते व नागरिकांच्या वतीने रस्त्यांच्या दुरुस्तीसाठी निवेदन सादर केले.
या प्रसंगी अर्जुन देसाई, ईश्वर पाटील, इर्शाद इरापूर, प्रल्हाद पाटील, मकदुम देशपाईक, उस्मान तहसीलदार, निंगाप्पा मादार, शिवाजी कामती, रियाज काझी, सुभाष गुरव, शंकर पाखरे, परसू पाटील आदी उपस्थित होते.
दुरुस्तीची मागणी केलेले रस्ते :
हंडी भडंगनाथ मठ ते कुंभारडा
इदलहोंड ते बेळगाव–खानापूर महामार्ग
बाळगुंद ते गोवा–बंगळुरू महामार्ग
हलशी ते बेकवाड क्रॉस
हलशी ते गुंडपी
हलशी ते बिडी
चीगुळे ते कणकुंबी रस्ता (फॉरेस्ट खात्याने बंद पाडलेले काम पुन्हा सुरू करणे)
बीडी–हलशी सायंकाळच्या बससेवेचे उद्घाटन :
दोन महिन्यांपूर्वी इरफान तालीकोटी यांच्या प्रयत्नाने बीडी ते हलशी सकाळची बससेवा सुरू करण्यात आली होती. त्यामुळे विद्यार्थ्यांची मोठी सोय झाली होती. मात्र, सायंकाळच्या वेळी बस नसल्याने विद्यार्थ्यांना व नागरिकांना गैरसोय होत होती. या समस्येची दखल घेऊन तालीकोटी यांनी सायंकाळची बससेवा सुरू केली. या बसचे उद्घाटन हलशी येथे नागरिकांच्या उपस्थितीत करण्यात आले.
उद्घाटनावेळी बोलताना इरफान तालीकोटी म्हणाले की, “हलशीची श्री महालक्ष्मी यात्रा लवकरच होणार आहे. त्या पार्श्वभूमीवर या भागातील नादुरुस्त रस्त्यांची दुरुस्ती आवश्यक आहे. म्हणूनच हलशी–बेकवाड क्रॉस, हलशी–गुंडपी, हलशी–बीडी या रस्त्यांची दुरुस्ती करण्याची मागणी पालकमंत्र्यांकडे केली आहे. लवकरच या रस्त्यांच्या कामांना प्रारंभ होईल,” असे त्यांनी सांगितले.
यावेळी अर्जुन देसाई व निंगाप्पा मादार यांनी नागरिकांच्या वतीने इरफान तालीकोटी यांचे आभार मानले.
हलशी व परिसरातील नागरिक या कार्यक्रमास मोठ्या संख्येने उपस्थित होते.
ತಾಲೂಕಿನ ರಸ್ತೆಗಳ ದುರಸ್ತಿಗಾಗಿ ಇರ್ಫಾನ್ ತಾಲೀಕೋಟಿ ಅವರವರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು; ಹಾಗೂ ಬೀಡಿಯಿಂದ ಹಲಶಿಗೆ ಸಂಜೆಯ ಬಸ್ ಸೇವೆಗೆ ಚಾಲನೆ.
ಖಾನಾಪುರ ; ಸಮಾಜ ಸೇವಕ ಇರ್ಫಾನ್ ತಾಳಿಕೋಟಿ ಅವರು ಖಾನಾಪುರ ತಾಲ್ಲೂಕಿನ ಹಲವು ಹಾಳಾದ ರಸ್ತೆಗಳ ದುರಸ್ತಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರನ್ನು ಇತ್ತೀಚೆಗೆ ಭೇಟಿಯಾಗಿ ಮನವಿ ಸಲ್ಲಿಸಿದರು. ಅಲ್ಲದೆ, ಹಲಶಿ ಭಾಗದ ವಿದ್ಯಾರ್ಥಿಗಳು ಹಾಗೂ ನಾಗರಿಕರ ಅಸೌಕರ್ಯವನ್ನು ಗಮನದಲ್ಲಿಟ್ಟು ಬೀಡಿ–ಹಲಶಿ ಸಾಯಂಕಾಲದ ಬಸ್ ಸೇವೆಯನ್ನು ಪ್ರಾರಂಭಿಸಲಾಯಿತು. ಈ ಬಸ್ ಸೇವೆಯಿಂದ ಹಲಶಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಸಮಾಧಾನದ ಹಾಗೂ ಸಂತೋಷದ ವಾತಾವರಣ ನಿರ್ಮಾಣವಾಯಿತು.
ಮಂಗಳವಾರ (14ರಂದು) ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಕಕ್ಕೇರಿ, ಬೀಡಿ, ಲಿಂಗನಮಠ ಭಾಗದಲ್ಲಿ ಹಾಳಾದ ರಸ್ತೆಗಳ ಪರಿಶೀಲನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಸಮಾಜ ಸೇವಕ ಇರ್ಫಾನ್ ತಾಳಿಕೋಟಿ ಅವರು ತಾಲ್ಲೂಕಿನ ಯುವ ಕಾರ್ಯಕರ್ತರು ಹಾಗೂ ನಾಗರಿಕರ ಪರವಾಗಿ ರಸ್ತೆಗಳ ದುರಸ್ತಿಗಾಗಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರ್ಜುನ್ ದೇಶಾಯಿ, ಈಶ್ವರ ಪಾಟೀಲ, ಇರ್ಷಾದ್ ಇರಾಪೂರ್, ಪ್ರಲ್ಹಾದ್ ಪಾಟೀಲ, ಮಕ್ದೂಮ್ ದೇಶಪೈಕ್, ಉಸ್ಮಾನ್ ತಹಸೀಲ್ದಾರ್, ನಿಂಗಪ್ಪ ಮಾದಾರ, ಶಿವಾಜಿ ಕಾಮತಿ, ರಿಯಾಜ್ ಕಾಜಿ, ಸುಭಾಷ್ ಗುರುವ್, ಶಂಕರ ಪಾಖರೆ, ಪರ್ಸು ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ದುರಸ್ತಿ ಕೋರಿ ಮನವಿ ಸಲ್ಲಿಸಲಾದ ರಸ್ತೆಗಳು:
ಹಂಡಿ ಭಡಂಗನಾಥ ಮಠದಿಂದ ಕುಂಭಾರಡಾ ರಸ್ತೆ
ಇದಲಹೊಂಡದಿಂದ ಬೆಳಗಾವಿ–ಖಾನಾಪುರ ಹೆದ್ದಾರಿ
ಬಾಳಗುಂದದಿಂದ ಗೋವಾ–ಬೆಂಗಳೂರು ಹೆದ್ದಾರಿ
ಹಲಶಿ–ಬೇಕ್ವಾಡ ಕ್ರಾಸ್ ರಸ್ತೆ
ಹಲಶಿ–ಗುಂಡಪಿ ರಸ್ತೆ
ಹಲಷಿ–ಬೀಡಿ ರಸ್ತೆ
ಚೀಗುಳೆ–ಕಣಕುಂಬಿ ರಸ್ತೆ (ಅರಣ್ಯ ಇಲಾಖೆಯಿಂದ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಪುನರಾರಂಭಿಸುವಂತೆ ಮನವಿ)
ಬೀಡಿ–ಹಲಷಿ ಸಾಯಂಕಾಲದ ಬಸ್ ಸೇವೆಯ ಉದ್ಘಾಟನೆ:
ಎರಡು ತಿಂಗಳ ಹಿಂದೆ ಇರ್ಫಾನ್ ತಾಳಿಕೋಟಿ ಅವರ ಪ್ರಯತ್ನದಿಂದ ಬಿಡಿ–ಹಲಶಿ ಬೆಳಗಿನ ಬಸ್ ಸೇವೆ ಪ್ರಾರಂಭವಾಗಿತ್ತು. ಇದರ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ದೊಡ್ಡ ಅನುಕೂಲವಾಗಿತ್ತು. ಆದರೆ ಸಾಯಂಕಾಲ ಬಸ್ ಇಲ್ಲದ ಕಾರಣ ಜನತೆಗೆ ಅಸೌಕರ್ಯವಾಗುತ್ತಿತ್ತು. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಾಳಿಕೋಟಿ ಅವರು ಸಾಯಂಕಾಲದ ಬಸ್ ಸೇವೆ ಪ್ರಾರಂಭ ಮಾಡಿದರು. ಈ ಬಸ್ನ್ನು ಹಲಶಿಯಲ್ಲಿ ನಾಗರಿಕರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಇರ್ಫಾನ್ ತಾಳಿಕೋಟಿ:
“ಹಲಶಿಯ ಶ್ರೀ ಮಹಾಲಕ್ಷ್ಮಿ ಜಾತ್ರೆ ಶೀಘ್ರದಲ್ಲೇ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಹಾಳಾದ ರಸ್ತೆಗಳ ದುರಸ್ತಿ ಅಗತ್ಯವಾಗಿದೆ. ಆದ್ದರಿಂದ ಹಲಶಿ–ಬೇಕವಾಡ ಕ್ರಾಸ್, ಹಲಶಿ–ಗುಂಡಪಿ, ಹಲಶಿ–ಬಿಡಿ ಈ ರಸ್ತೆಗಳಿಗೆ ದುರಸ್ತಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಶೀಘ್ರದಲ್ಲೇ ಈ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅರ್ಜುನ್ ದೇಶಾಯಿ ಹಾಗೂ ನಿಂಗಪ್ಪ ಮಾದಾರ ಅವರು ನಾಗರಿಕರ ಪರವಾಗಿ ಇರ್ಫಾನ್ ತಾಳಿಕೋಟಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಹಲಶಿ ಹಾಗೂ ಸುತ್ತಮುತ್ತಲಿನ ನಾಗರಿಕರು ಈ ಕಾರ್ಯಕ್ರಮದಲ್ಲಿ ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದರು.

