गॅस सिलेंडरची काळजी मिटली; इंडेनचा ५ किलो ‘छोटू’ एलपीजी सिलेंडर बाजारात.
नवी दिल्ली : घरगुती गॅस सिलेंडरच्या बुकिंग व वितरणातील अडचणींमुळे ग्राहकांना मागील काही दिवसांत मोठा त्रास सहन करावा लागत होता. या पार्श्वभूमीवर Indian Oil Corporationने आपल्या Indane ब्रँडअंतर्गत ५ किलो क्षमतेचा ‘छोटू’ एलपीजी सिलेंडर बाजारात उपलब्ध करून दिला आहे.
ग्राहकांना बुकिंगशिवाय तात्काळ गॅस उपलब्ध व्हावा हा या उपक्रमाचा मुख्य उद्देश आहे. त्यामुळे आता बुकिंग करून डिलिव्हरीची वाट पाहण्याची गरज भासणार नाही. ग्राहक हा सिलेंडर थेट गॅस एजन्सी किंवा अधिकृत विक्री केंद्रातून खरेदी करू शकतात.
कंपनीच्या माहितीनुसार, सध्याच्या अडचणीच्या काळात ग्राहकांच्या तातडीच्या गरजा लक्षात घेऊन हा छोटा सिलेंडर तयार करण्यात आला आहे. नियमित घरगुती गॅस कनेक्शनसाठी पत्ता, कागदपत्रे व ऑनलाइन प्रक्रिया पूर्ण करावी लागते; मात्र ‘छोटू’ सिलेंडरसाठी केवळ एक ओळखपत्र पुरेसे आहे. पत्ता किंवा इतर कागदपत्रांची आवश्यकता नाही.
विद्यार्थी, स्थलांतरित कामगार तसेच अल्पकाळासाठी वास्तव्य करणाऱ्यांसाठी हा एक सोयीस्कर पर्याय ठरणार आहे. हा सिलेंडर केवळ इंडेन गॅस एजन्सींमध्येच नव्हे तर निवडक किराणा दुकाने आणि अधिकृत विक्री केंद्रांवरही उपलब्ध आहे. हलका व सहज वाहून नेता येणारा असल्यामुळे वापरण्यास सोपा असून ग्राहकांना तात्काळ दिलासा देणारा ठरत आहे.
ಗ್ಯಾಸ್ ಸಿಲಿಂಡರ್ ಚಿಂತೆಯ ನಿವಾರಣೆ; ಇಂಡಾನ ಗ್ಯಾಸ್ ಅವರಿಂದ 5 ಕೆಜಿ ‘ಚೋಟು’ ಎಲ್ಪಿಜಿ ಸಿಲಿಂಡರ್ ಮಾರುಕಟ್ಟೆಗೆ.
ನವ ದೆಹಲಿ : ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹಾಗೂ ವಿತರಣೆಯಲ್ಲಿ ಉಂಟಾದ ಅಡಚಣೆಗಳಿಂದ ಕಳೆದ ಕೆಲವು ದಿನಗಳಿಂದ ಗ್ರಾಹಕರು ದೊಡ್ಡ ಮಟ್ಟದ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ Indian Oil Corporation ತನ್ನ Indane ಬ್ರ್ಯಾಂಡ್ ಅಡಿಯಲ್ಲಿ 5 ಕೆಜಿ ಸಾಮರ್ಥ್ಯದ ‘ಚೋಟು’ ಎಲ್ಪಿಜಿ ಸಿಲಿಂಡರ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ.
ಗ್ರಾಹಕರಿಗೆ ಬುಕ್ಕಿಂಗ್ ಇಲ್ಲದೆ ತಕ್ಷಣ ಗ್ಯಾಸ್ ದೊರಕಬೇಕು ಎಂಬುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ. ಇದರಿಂದ ಬುಕ್ಕಿಂಗ್ ಮಾಡಿ ಡೆಲಿವರಿಗಾಗಿ ಕಾಯುವ ಅಗತ್ಯ ಇರುವುದಿಲ್ಲ. ಗ್ರಾಹಕರು ಈ ಸಿಲಿಂಡರ್ ಅನ್ನು ನೇರವಾಗಿ ಗ್ಯಾಸ್ ಏಜೆನ್ಸಿ ಅಥವಾ ಅಧಿಕೃತ ಮಾರಾಟ ಕೇಂದ್ರಗಳಿಂದ ಖರೀದಿಸಬಹುದು.
ಕಂಪನಿಯ ಮಾಹಿತಿಯ ಪ್ರಕಾರ, ಇತ್ತೀಚಿನ ಅಡಚಣೆಗಳ ಸಮಯದಲ್ಲಿ ಗ್ರಾಹಕರ ತುರ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಚಿಕ್ಕ ಸಿಲಿಂಡರ್ ಪರಿಚಯಿಸಲಾಗಿದೆ. ಸಾಮಾನ್ಯ ಗೃಹ ಬಳಕೆಯ ಗ್ಯಾಸ್ ಸಂಪರ್ಕಕ್ಕಾಗಿ ವಿಳಾಸ, ದಾಖಲೆಗಳು ಹಾಗೂ ಆನ್ಲೈನ್ ಪ್ರಕ್ರಿಯೆ ಪೂರ್ಣಗೊಳಿಸಬೇಕು; ಆದರೆ ‘ಚೋಟು’ ಸಿಲಿಂಡರ್ಗಾಗಿ ಕೇವಲ ಒಂದು ಗುರುತಿನ ಚೀಟಿ ಸಾಕಾಗುತ್ತದೆ. ವಿಳಾಸ ಅಥವಾ ಇತರ ದಾಖಲೆಗಳ ಅವಶ್ಯಕತೆ ಇರುವುದಿಲ್ಲ. ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು ಹಾಗೂ ಅಲ್ಪಕಾಲ ವಾಸಿಸುವವರಿಗೆ ಇದು ಅನುಕೂಲಕರ ಆಯ್ಕೆಯಾಗಲಿದೆ.
ಈ ಸಿಲಿಂಡರ್ ಕೇವಲ ಇಂಡೇನ್ ಗ್ಯಾಸ್ ಏಜೆನ್ಸಿಗಳಲ್ಲದೆ, ಆಯ್ದ ಕಿರಾಣಿ ಅಂಗಡಿಗಳು ಮತ್ತು ಅಧಿಕೃತ ಮಾರಾಟ ಕೇಂದ್ರಗಳಲ್ಲಿಯೂ ಲಭ್ಯವಾಗಲಿದೆ. ಹಗುರವಾಗಿದ್ದು ಸುಲಭವಾಗಿ ಸಾಗಿಸಬಹುದಾದುದರಿಂದ ಬಳಕೆ ಸುಲಭವಾಗಿದ್ದು, ಗ್ರಾಹಕರಿಗೆ ತಕ್ಷಣದ ಪರಿಹಾರ ಒದಗಿಸುವ ಭರವಸೆ ಮೂಡಿಸಿದೆ.



