इनामदार साखर कारखाना दुर्घटना : मृतांचा आकडा सातवर; जनरल मॅनेजरसह तिघांवर गुन्हा दाखल.
बेळगाव : बेळगाव जिल्ह्यातील बैलहोंगल तालुक्यातील मरकुंबी येथील इनामदार साखर कारखान्यात झालेल्या भीषण औद्योगिक दुर्घटनेत मृतांची संख्या सातवर पोहोचली आहे. बॉयलरमधून उकळता द्रव पदार्थ अंगावर पडल्याने गंभीर भाजलेल्या आठ कामगारांपैकी बुधवारी तिघांचा मृत्यू झाला होता, तर गुरुवारी उपचारादरम्यान आणखी चार कामगारांनी प्राण सोडले.
या गंभीर घटनेची दखल घेत पोलिसांनी कारखान्याच्या जनरल मॅनेजरसह तिघांविरोधात गुन्हा दाखल केला आहे. बेळगावचे पोलीस अधीक्षक के. रामराजन यांनी पत्रकार परिषदेत या प्रकरणाचा सविस्तर तपशील दिला.
या दुर्घटनेत अक्षय चोपडे, दीपक मन्नोळी, सुदर्शन बनोशी यांच्यासह एकूण सात कामगारांचा दुर्दैवी मृत्यू झाला आहे. विक्रम इनामदार, प्रभाकर कोरे आणि विजय मेटगुड यांच्या भागीदारीतील या साखर कारखान्यात घडलेल्या या घटनेनंतर मृत कामगारांच्या नातेवाईकांचा टाहो हृदय पिळवटून टाकणारा आहे.
विशेष म्हणजे, दुर्घटनेला 24 तासांहून अधिक वेळ उलटूनही कारखान्याच्या मालकांनी मृतांच्या कुटुंबीयांची भेट घेतलेली नाही, तसेच कोणत्याही प्रकारची आर्थिक मदत जाहीर करण्यात आलेली नाही. यामुळे नातेवाईकांमध्ये तीव्र संताप व्यक्त होत असून, “कामगारांच्या जीवाचे मोल नाही का?” असा सवाल उपस्थित केला जात आहे.
रुग्णालयाच्या परिसरात अनेक कुटुंबे न्यायाच्या प्रतीक्षेत अगतिकपणे बसून आहेत. प्रशासनाकडून कठोर कारवाईसह पीडित कुटुंबांना तात्काळ मदत देण्याची मागणी जोर धरत आहे.
ಇನಾಮ್ದಾರ್ ಸಕ್ಕರೆ ಕಾರ್ಖಾನೆ ದುರಂತ : ಮೃತರ ಸಂಖ್ಯೆ ಏರಿಕೆ; ಜನರಲ್ ಮ್ಯಾನೇಜರ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲು.
ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮರಕುಂಬಿ ಗ್ರಾಮದ ಇನಾಮ್ದಾರ್ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಕೈಗಾರಿಕಾ ದುರಂತದಲ್ಲಿ ಮೃತರ ಸಂಖ್ಯೆ 7 ತಲುಪಿದೆ. ಬಾಯ್ಲರ್ನಿಂದ ಕುದಿಯುತ್ತಿರುವ ದ್ರವ ಪದಾರ್ಥ ಮೈಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಸುಟ್ಟ ಗಾಯಗೊಂಡಿದ್ದ ಎಂಟು ಕಾರ್ಮಿಕರಲ್ಲಿ ಬುಧವಾರ ಮೂವರು ಮೃತಪಟ್ಟಿದ್ದು, ಗುರುವಾರ ಚಿಕಿತ್ಸೆ ವೇಳೆ ಇನ್ನೂ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಈ ಗಂಭೀರ ಘಟನೆಯ ನಂತರ ಪೊಲೀಸರು ಕಾರ್ಖಾನೆಯ ಜನರಲ್ ಮ್ಯಾನೇಜರ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೆಳಗಾವಿ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಪ್ರಕರಣದ ಸವಿಸ್ತಾರ ಮಾಹಿತಿ ನೀಡಿದ್ದಾರೆ.
ಈ ದುರಂತದಲ್ಲಿ ಅಕ್ಷಯ್ ಚೋಪಡೆ, ದೀಪಕ್ ಮನ್ನೋಳ್ಳಿ, ಸುಧರ್ಶನ ಬನೋಶಿ ಸೇರಿದಂತೆ ಒಟ್ಟು ಏಳು ಕಾರ್ಮಿಕರು ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ವಿಕ್ರಮ್ ಇನಾಮ್ದಾರ್, ಪ್ರಭಾಕರ್ ಕೋರೆ ಮತ್ತು ವಿಜಯ್ ಮೆಟಗುಡ್ ಇವರ ಪಾಲುದಾರಿಕೆಯಲ್ಲಿರುವ ಈ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಈ ಘಟನೆಯ ಬಳಿಕ ಮೃತ ಕಾರ್ಮಿಕರ ಕುಟುಂಬಸ್ಥರ ಆಕ್ರಂದನ ಹೃದಯವಿದ್ರಾವಕವಾಗಿದೆ.
ವಿಶೇಷವಾಗಿ, ದುರಂತಕ್ಕೆ ೨೪ ಗಂಟೆಗೂ ಅಧಿಕ ಸಮಯ ಕಳೆದರೂ ಕಾರ್ಖಾನೆಯ ಮಾಲೀಕರು ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿಲ್ಲ, ಅಲ್ಲದೆ ಯಾವುದೇ ರೀತಿಯ ಆರ್ಥಿಕ ನೆರವು ಘೋಷಣೆ ಕೂಡ ಮಾಡಿಲ್ಲ. ಇದರಿಂದ ಕುಟುಂಬಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, “ಕಾರ್ಮಿಕರ ಜೀವಕ್ಕೆ ಮೌಲ್ಯವೇ ಇಲ್ಲವೇ?” ಎಂಬ ಪ್ರಶ್ನೆ ಎದ್ದಿದೆ. ಆಸ್ಪತ್ರೆಯ ಆವರಣದಲ್ಲಿ ಅನೇಕ ಕುಟುಂಬಗಳು ನ್ಯಾಯದ ನಿರೀಕ್ಷೆಯಲ್ಲಿ ಅಸಹಾಯಕವಾಗಿ ಕುಳಿತಿವೆ. ಆಡಳಿತ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಪೀಡಿತ ಕುಟುಂಬಗಳಿಗೆ ತಕ್ಷಣ ನೆರವು ನೀಡಬೇಕು ಎಂಬ ಬೇಡಿಕೆ ತೀವ್ರವಾಗುತ್ತಿದೆ.


