
चापगांव येथे बुधवारी रात्री, घराला आग लागून लाखोंचे नुकसान.
खानापूर : खानापूर तालुक्यातील चापगांव येथे, छत्रपती शिवाजी महाराजांच्या पुतळ्या नजीक राहात असलेले नागरीक यल्लापा मादार, यांच्या घराला बुधवार दिनांक 19 जून रोजी, रात्री 10 वाजेच्या सुमारास अचानक आग लागुन लाखोंचे नुकसान झाले. तात्काळ अग्निशामक दलाची गाडी बोलाविण्यात आली व आग आटोक्यात आणण्यात आली.
घटनास्थळावरून मिळालेली माहिती अशी की, चापगांव येथील यल्लापा मादार यांच्या घरी रात्री 10 वाजेच्या सुमारास अचानक लागुन, घरच्या छप्परातुन आग व धुराचे लोळ दीसू लागताच, गल्लीत व गावात एकच धाव पळ सुरू झाली. आग लागल्याची बातमी समजताच आग विझविण्यासाठी गावातील सामाजिक कार्यकर्ते व माजी ग्राम पंचायत अध्यक्ष रमेश धबाले, ग्राम पंचायत सदस्य नागराज यळ्ळूरकर, नजीर सनदी, तसेच पिराजी मादार, शिवाजी मादार, लक्ष्मण मादार, गणपती कुराडे, उदय पाटील, महादेव मादार, रवी मादार, ओमाणा मादार, आदीनी आग विझवण्यासाठी आटोकाट प्रयत्न सुरू ठेवले व याची माहिती अग्निशमन दलाला दिली. लागलीच अग्नीशामक दल चापगांव येथे दाखल झाले व नागरीकांच्या सहाय्याने आग्नीशमक दलाच्या जवानानी आग आटोक्यात आणली.
यल्लापा मादार हे अत्यंत गरीब असून, त्यांचे या आगीमध्ये आडीज तोळे सोन्याचे दागीने व 30 हजार रूपये रोख रक्कम तसेच संसार उपयोगी साहित्य आगीत जळून खाक झाले आहे. त्यामुळे गरीबीची परिस्थिती असलेल्या, यल्लापा मादार कुटूंबाचे लाखोंचे नुकसान झाले आहे. सरकारने या गरीब कुटूंबाला तात्काळ आर्थिक द्यावीत. अशी मागणी चापगांव गावच्या नागरीकांतुन होत आहे.
ಚಾಪಗಾಂವ್ನಲ್ಲಿ ಬುಧವಾರ ರಾತ್ರಿ ಮನೆಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಹಾನಿ ಸಂಭವಿಸಿದೆ.
ಖಾನಾಪುರ: ಖಾನಾಪುರ ತಾಲೂಕಿನ ಚಾಪಗಾಂವದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ವಾಸವಾಗಿರುವ ನಾಗರೀಕ ಯಲ್ಲಪ್ಪ ಮಾದರ ಎಂಬುವರ ಮನೆಗೆ ಜೂ.19 ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು. ಕೂಡಲೇ ಅಗ್ನಿಶಾಮಕ ವಾಹನಕ್ಕೆ ಕರೆ ಮಾಡಿ ಬೆಂಕಿಯನ್ನು ಹತೋಟಿಗೆ ತರಲಾಯಿತು.
ಘಟನಾ ಸ್ಥಳದಿಂದ ದೊರೆತ ಮಾಹಿತಿ ಪ್ರಕಾರ ಚಾಪಗಾಂವ್ನ ಯಲ್ಲಪ್ಪ ಮಾದರ ಎಂಬುವವರ ಮನೆಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಮನೆಯ ಮೇಲ್ಛಾವಣಿಯಿಂದ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದ್ದು, ಬೆಂಕಿಯ ಸುದ್ದಿ ತಿಳಿದ ತಕ್ಷಣ ಗ್ರಾಮದ ಸಮಾಜ ಸೇವಕರು ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಧಬಾಲೆ, ಗ್ರಾ.ಪಂ ಸದಸ್ಯರಾದ ನಾಗರಾಜ ಯಲ್ಲೂರಕರ, ನಜೀರ ಸನದಿ, ಅಲ್ಲದೆ ಪಿರಾಜಿ ಮಾದರ, ಶಿವಾಜಿ ಮಾದರ, ಲಕ್ಷ್ಮಣ ಮಾದರ, ಗಣಪತಿ ಕುರಡೆ, ಉದಯ ಪಾಟೀಲ, ಮಹಾದೇವ ಮಾದರ್, ರವಿ ಮಾದರ್, ಓಮನಾ ಮಾದರ್, ಬೆಂಕಿ ನಂದಿಸಲು ಪ್ರಯತ್ನ ಮುಂದುವರೆಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಕೂಡಲೇ ಅಗ್ನಿಶಾಮಕ ದಳ ಚಾಪಗಾಂವ್ ಊರಿಗೆ ಪ್ರವೇಶಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ನಾಗರಿಕರ ನೆರವಿನಿಂದ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಯಲ್ಲಪ್ಪ ಮಾದರ ಕಡು ಬಡವನಾಗಿದ್ದು, ಆತನ ಬಳಿಯಿದ್ದ ಚಿನ್ನಾಭರಣ ಹಾಗೂ 30 ಸಾವಿರ ರೂಪಾಯಿ ನಗದು ಹಾಗೂ ಉಪಯುಕ್ತ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಇದರಿಂದ ಬಡತನದಲ್ಲಿರುವ ಯಲ್ಲಪ್ಪ ಮಾದರ ಕುಟುಂಬಕ್ಕೆ ಲಕ್ಷ ಲಕ್ಷ ನಷ್ಟವಾಗಿದೆ. ಸರಕಾರ ಕೂಡಲೇ ಈ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಬೇಡಿಕೆಯನ್ನು ಚಾಪಗಾಂವ್ ಗ್ರಾಮದ ನಾಗರಿಕರು ಮನವಿ ಮಾಡಿದರು
