
हिंडलगा चोरी प्रकरणाचा उलगडा ; 85 लाखांचे दागिने जप्त.
बेळगाव : लक्ष्मी नगर, हिंडलगा येथे 2 ऑगस्ट रोजी घडलेल्या मोठ्या चोरी प्रकरणाचा छडा कॅम्प पोलिसांनी लावण्यात यश मिळवले आहे. या कारवाईत तब्बल 85 लाख रुपयांचे दागिने जप्त करण्यात आले असून, दोन संशयितांना अटक करण्यात आली आहे.

अटक झालेल्यांची नावे अन्नपूर्णा जोतिबा बेळगुंदकर (रा. गणेशपुर) व जोतिबा गुंडू बेळगुंदकर अशी आहेत. या चोरीतून एकूण 981.1 ग्रॅम सोने चोरीला गेले होते. त्यापैकी तब्बल 877.4 ग्रॅम सोने पोलिसांनी परत मिळवले आहे.
ही कारवाई पोलिस आयुक्त भूषण बोरसे, उपायुक्त नारायण बरमणी, उपायुक्त एन. निरंजन राजेआरस व खडेबाजार एसीपी शेखरप्पा यांच्या मार्गदर्शनाखाली पार पडली. कॅम्प पोलीस ठाण्याचे अनंद वनकुंद्री, डी. पी. निंबाळकर आणि त्यांच्या पथकाने तपास करून ही मोठी कामगिरी पार पाडली.
या यशस्वी कारवाईमुळे शहरातील नागरिकांत समाधान व्यक्त होत असून, मोठ्या चोरीच्या घटनेचा उलगडा करण्यात पोलिसांना मोठे यश मिळाले आहे.
ಹಿಂಡಲಗಾದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸದ ಪೊಲೀಸರು; 85 ಲಕ್ಷ ರೂ. ಮೌಲ್ಯದ ಆಭರಣ ವಶಪಡಿಸಿಕೊಂಡ ಪೊಲೀಸರು.
ಬೆಳಗಾವಿ : ಲಕ್ಷ್ಮಿ ನಗರ, ಹಿಂಡಲಗಾದಲ್ಲಿ ಆಗಸ್ಟ್ 2 ರಂದು ನಡೆದಿದ್ದ ಭಾರೀ ಕಳ್ಳತನ ಪ್ರಕರಣವನ್ನು ಕ್ಯಾಂಪ್ ಪೊಲೀಸ್ ಸಿಬ್ಬಂದಿ ಭೇದಿಸಲು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 85 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಾದ ಅಣ್ಣಪೂರ್ಣಾ ಜೋತಿಬಾ ಬೆಳಗುಂದಕರ (ರಾ. ಗಣೇಶಪುರ) ಮತ್ತು ಜೋತಿಬಾ ಗುಂಡು ಬೆಳಗುಂದಕರ ಎಂದು ತಿಳಿದುಬಂದಿದೆ. ಈ ಕಳ್ಳತನದಲ್ಲಿ ಒಟ್ಟು 981.1 ಗ್ರಾಂ ಬಂಗಾರ ಕಳವಾಗಿದ್ದು, ಅದರಲ್ಲಿ 877.4 ಗ್ರಾಂ ಬಂಗಾರವನ್ನು ಪೊಲೀಸರು ಮರಳಿ ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆ ಪೊಲೀಸ್ ಆಯುಕ್ತ ಭೂಷಣ ಬೋರ್ಸೆ, ಉಪ ಆಯುಕ್ತ ನರಾಯಣ ಬರ್ಮಣಿ, ಉಪ ಆಯುಕ್ತ ಎನ್. ನಿರಂಜನ್ ರಾಜೇಆರ್ಸ್ ಮತ್ತು ಖಡೆಬಜಾರ್ ಎಸಿಪಿ ಶೇಖರಪ್ಪ ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಕ್ಯಾಂಪ್ ಪೊಲೀಸ್ ಠಾಣೆಯ ಅನಂದ ವನಕುಂದ್ರಿ, ಡಿ.ಪಿ. ನಿಂಬಾಳ್ಕರ್ ಹಾಗೂ ಅವರ ತಂಡ ತನಿಖೆ ನಡೆಸಿ ಈ ಮಹತ್ವದ ಕಾರ್ಯ ಸಾಧಿಸಿದ್ದಾರೆ.
ಈ ಯಶಸ್ವೀ ಕಾರ್ಯಾಚರಣೆಯಿಂದ ನಗರದ ನಾಗರಿಕರು ತೃಪ್ತಿ ವ್ಯಕ್ತಪಡಿಸಿದ್ದು, ಭಾರೀ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ.
