खानापूर तहसीलदारांना उच्च न्यायालयाचा दणका — आदेश न पाळल्याने तात्काळ बदली.
खानापूर : उच्च न्यायालयाच्या आदेशाची अंमलबजावणी न केल्याने खानापूरचे तहसीलदार दुंडाप्पा कोमार यांच्यावर कडक कारवाई करण्यात आली आहे. धारवाड खंडपीठाने तहसीलदारांची तात्काळ बदली करण्याचे आदेश महसूल विभागाला दिले असून, नव्या तहसीलदारांकडून संबंधित प्रकरणाची अंमलबजावणी करण्याचे निर्देश दिले आहेत.
प्रकरणाचा मागोवा घेतल्यास, असोगा (ता. खानापूर) येथील सर्वे नंबर 108 मधील 2 एकर 20 गुंठे जमिनीच्या सर्वेक्षणासंदर्भात याचिका क्र. 114086/2019 ही धारवाड खंडपीठात दाखल करण्यात आली होती. या याचिकेवर 8 ऑगस्ट 2024 रोजी निकाल देताना न्यायालयाने आठ आठवड्यांच्या आत सर्वेक्षण पूर्ण करण्याचे आदेश तहसीलदारांना दिले होते.
मात्र, न्यायालयाचा स्पष्ट आदेश असूनही तहसीलदारांनी कार्यवाही न केल्याने संबंधित पक्षाने अवमान याचिका दाखल केली. या सुनावणीदरम्यान तहसीलदारांनी अनेक वेळा प्रतिज्ञापत्र सादर केले, परंतु न्यायालयाने दिलेल्या आदेशाची अंमलबजावणी केली नाही.
या पार्श्वभूमीवर न्यायालयाने कठोर भूमिका घेत महसूल विभागाच्या सचिवांना निर्देश दिले की, तहसीलदार दुंडाप्पा कोमार यांची खानापूर तालुक्यातून तात्काळ बदली करण्यात यावी आणि याचिकेतील आदेशाची अंमलबजावणी नव्या तहसीलदारामार्फत आठवडाभरात करण्यात यावी.
तसेच, या आदेशाची अंमलबजावणी झाल्याचा अहवाल आणि सविस्तर माहिती आठवडाभरात सादर करण्याची सूचना सरकारी वकिलांना न्यायालयाने केली आहे.
या निर्णयामुळे न्यायालयीन आदेशांकडे दुर्लक्ष करणाऱ्या प्रशासकीय अधिकाऱ्यांना चांगलाच इशारा मिळाला आहे, असे मत कायदेतज्ज्ञांनी व्यक्त केले आहे.
ಖಾನಾಪುರ ತಹಸೀಲ್ದಾರರಿಗೆ ಹೈಕೋರ್ಟ್ ನಿಂದ ತರಾಟೆ — ಆದೇಶ ಪಾಲಿಸದ ಕಾರಣ ತಕ್ಷಣ ವರ್ಗಾವಣೆ ಮಾಡಲು ನಿರ್ದೇಶನ.
ಖಾನಾಪುರ : ಹೈಕೋರ್ಟ್ ನೀಡಿದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಖಾನಾಪುರ ತಹಸೀಲ್ದಾರ ದುಂಡಪ್ಪ ಕೋಮಾರ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಧಾರವಾಡ ಖಂಡಪೀಠವು ತಹಸೀಲ್ದಾರರ ತಕ್ಷಣದ ವರ್ಗಾವಣೆ ಮಾಡಿ, ಹೊಸ ತಹಸೀಲ್ದಾರರಿಂದ ಸಂಬಂಧಿತ ಪ್ರಕರಣ ಪೂರ್ಣಗೊಳಿಸಲು ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ , ಅಸೋಗಾ (ತಾ. ಖಾನಾಪುರ) ಗ್ರಾಮದ ಸರ್ವೇ ನಂ. 108 ರಲ್ಲಿನ 2 ಎಕರೆ 20 ಗುಂಟೆ ಜಮೀನಿನ ಸರ್ವೇ ಕುರಿತು ವಿಚಾರಣೆ ಕ್ರ. 114086/2019 ಅರ್ಜಿ ಧಾರವಾಡ ಖಂಡಪೀಠದಲ್ಲಿ ದಾಖಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿ 2024ರ ಆಗಸ್ಟ್ 8ರಂದು ನ್ಯಾಯಾಲಯವು ಎಂಟು ವಾರಗಳೊಳಗೆ ಸರ್ವೇ ಪ್ರಕ್ರಿಯೆ ಪೂರ್ಣಗೊಳಿಸಲು ತಹಸೀಲ್ದಾರರಿಗೆ ಆದೇಶ ನೀಡಿತ್ತು.
ಆದರೆ, ನ್ಯಾಯಾಲಯದ ಸ್ಪಷ್ಟ ಆದೇಶ ಇದ್ದರೂ ತಹಸೀಲ್ದಾರರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ಅರ್ಜಿದಾರರು ಅವಮಾನ ಅರ್ಜಿ (Contempt Petition) ಸಲ್ಲಿಸಿದರು. ಈ ವಿಚಾರಣೆಯ ಸಮಯದಲ್ಲಿ ತಹಸೀಲ್ದಾರರು ಹಲವಾರು ಬಾರಿ ಪ್ರತಿಜ್ಞಾಪತ್ರ ಸಲ್ಲಿಸಿದರೂ, ನ್ಯಾಯಾಲಯದ ಆದೇಶವನ್ನು ಪಾಲಿಸಲಿಲ್ಲ.
ಈ ಹಿನ್ನೆಲೆ ನ್ಯಾಯಾಲಯವು ಕಠಿಣ ನಿಲುವು ತೆಗೆದುಕೊಂಡು, ರಾಜಸ್ವ ಇಲಾಖೆಯ ಕಾರ್ಯದರ್ಶಿಗೆ ಖಾನಾಪುರ ತಹಸೀಲ್ದಾರ ದುಂಡಪ್ಪ ಕೋಮಾರ ಅವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದೆ. ಹಾಗೆಯೇ, ಹೊಸ ತಹಸೀಲ್ದಾರರಿಂದ ಯಾಚಿಕೆಯ ಆದೇಶವನ್ನು ಒಂದು ವಾರದೊಳಗೆ ಜಾರಿಗೊಳಿಸಬೇಕು ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಿದೆ.
ಅದೇ ರೀತಿ, ಈ ಆದೇಶದ ಜಾರಿಯ ಕುರಿತು ವಿವರವಾದ ವರದಿ ಮತ್ತು ಅನುಷ್ಠಾನದ ಮಾಹಿತಿ ಒಂದು ವಾರದೊಳಗೆ ಸಲ್ಲಿಸುವಂತೆ ಸರ್ಕಾರದ ವಕೀಲರಿಗೆ ಸೂಚನೆ ನೀಡಲಾಗಿದೆ.
ಈ ತೀರ್ಪಿನಿಂದ ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುವ ಆಡಳಿತಾಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಲಾಗಿದೆ, ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



