प्रोबेशनरी आयएएस अधिकारी अभिनव जैन यांची खानापूर तालुक्याला भेट.
खानापूर ; प्रोबेशनरी आयएएस अधिकारी अभिनव जैन यांनी गुरुवारी खानापूर तालुक्याला भेट दिली आणि ग्रामीण विकास आणि पंचायत राज विभागाशी संबंधित विविध प्रकल्पांची माहिती घेतली. तसेच त्यांनी येथील तालुका पंचायत कार्यालयाला भेट देऊन विविध विभाग, उपक्रम आणि कर्मचाऱ्यांच्या उपस्थितीची माहिती घेतली.
अभिनव जैन यांची तालुक्यातील विविध गावांना भेट….
प्रोबेशनरी आयएएस अधिकारी अभिनव जैन यांनी खानापूर तालुक्यातील हिरेहट्टीहोळी ग्रामपंचायत कार्यालयाला भेट दिली आणि विविध प्रकल्पांची आणि ग्रामपंचायतीच्या दैनंदिन कामकाजाची माहिती घेतली. यावेळी त्यांनी ग्रामपंचायत क्षेत्रातील सरकारी उच्च प्राथमिक शाळा, प्राथमिक आरोग्य केंद्र आणि अंगणवाडी केंद्राला भेट दिली आणि तेथील उपक्रम आणि पायाभूत सुविधांचे निरीक्षण केले.

त्यांनी ग्रामपंचायत हद्दीतील मनरेगा, गृहनिर्माण योजना आणि जलजीवन मिशनसह विविध योजनांतर्गत हाती घेतलेल्या कामांची पाहणी केली आणि माहिती मिळवली. नंतर, त्यांनी नंदगड आणि हलशी गावांना भेट दिली आणि डिजिटल ग्रंथालयांची पाहणी केली. त्यामुळे त्यांना विविध प्रकल्पांची माहिती मिळाली.
यावेळी जिल्हा प्रशासन कार्यालयाच्या सहायक संचालक रुपाली बडकुंद्री, विजयकुमार कोथिन, व्यवस्थापक श्रीकांत सोपडला, सहायक लेखपाल एस.सी.जालगेरी, ग्रामपंचायत विकास अधिकारी राजू तलावर, सागरकुमार बिरादर, नेत्रावती एम.डी. टीपीए आणि ग्रामपंचायतीचे सर्व कर्मचारी, शाळेतील शिक्षक, विद्यार्थी आणि विविध विभागांचे कर्मचारी उपस्थित होते.
ಖಾನಾಪುರ ತಾಲೂಕಿಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ್ ಜೈನ್ ಭೇಟಿ.
ಖಾನಾಪುರ: ಪ್ರೊಬೆಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್ ಅವರು ಗುರುವಾರ ಖಾನಾಪೂರ ತಾಲೂಕಿಗೆ ಭೇಟಿ ನೀಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆದರು. ಇಲ್ಲಿನ ತಾಲೂಕ ಪಂಚಾಯತ ಕಾರ್ಯಾಲಯಕ್ಕೆ ಭೇಟಿ ನೀಡಿ, ವಿವಿಧ ವಿಭಾಗಗಳು, ಕಾರ್ಯಚಟುವಟಿಕೆಗಳು ಹಾಗೂ ಸಿಬ್ಬಂದಿಯ ಹಾಜರಾತಿಯ ಕುರಿತು ಮಾಹಿತಿ ಪಡೆದರು.
ವಿವಿಧ ಗ್ರಾಪಂಗಳಿಗೆ ಭೇಟಿ….
ಇದಕ್ಕೂ ಮೊದಲು ಮಾನ್ಯರು ಹಿರೇಹಟ್ಟಿಹೊಳಿ ಗ್ರಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿ, ವಿವಿಧ ಯೋಜನೆಗಳ ಕುರಿತು ಹಾಗೂ ಗ್ರಾಪಂನ ದೈನಂದಿನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು.
ಗ್ರಾಪಂ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಕಾರ್ಯಚಟುವಟಿಕೆಗಳು ಹಾಗೂ ಮೂಲಸೌಕರ್ಯಗಳನ್ನು ವೀಕ್ಷಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಮನರೇಗಾ, ವಸತಿ ಯೋಜನೆ, ಜಲಜೀವನ ಮಿಷನ್ ಸೇರಿ ವಿವಿಧ ಯೋಜನೆಗಳಡಿ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಿ, ಮಾಹಿತಿ ಪಡೆದರು.
ನಂತರ ನಂದಗಡ ಹಾಗೂ ಹಲಶಿ ಗ್ರಾಪಂಗಳಿಗೆ ಭೇಟಿ ನೀಡಿ, ಡಿಜಿಟಲ್ ಗ್ರಂಥಾಲಯಗಳನ್ನು ವೀಕ್ಷಿಸಿದರು. ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡರು.
ತಾಪಂ ಸಹಾಯಕ ನಿರ್ದೇಶಕರಾದ ರೂಪಾಲಿ ಬಡಕುಂದ್ರಿ, ವಿಜಯಕುಮಾರ ಕೋತಿನ್, ವ್ಯವಸ್ಥಾಪಕ ಶ್ರೀಕಾಂತ ಸೊಪಡ್ಲ, ಸಹಾಯಕ ಲೆಕ್ಕಾಧಿಕಾರಿ ಎಸ್.ಸಿ. ಜಾಲಗೇರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ರಾಜು ತಳವಾರ, ಸಾಗರಕುಮಾರ ಬಿರಾದಾರ, ನೇತ್ರಾವತಿ ಎಂ.ಡಿ. ಸೇರಿ ತಾಪಂ ಹಾಗೂ ಗ್ರಾಪಂನ ಎಲ್ಲ ಸಿಬ್ಬಂದಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

