शॉर्ट सर्किटमुळे गुंजीत घराला भीषण आग; शेतकरी कुटुंबाचे लाखोंचे नुकसान.
गुंजी (प्रतिनिधी संदीप घाडी) ; गुंजी, ता. खानापूर येथील शंकर विष्णू घाडी यांच्या राहत्या घराला रविवारी दुपारी सुमारे २ वाजण्याच्या सुमारास अचानक भीषण आग लागल्याची घटना घडली. प्राथमिक माहितीनुसार शॉर्ट सर्किटमुळे ही आग लागल्याचा अंदाज व्यक्त केला जात आहे. सुदैवाने या दुर्घटनेत कोणतीही जीवितहानी झाली नसली तरी घरातील सर्व संसारोपयोगी वस्तू जळून खाक झाल्याने कुटुंबावर मोठे आर्थिक संकट कोसळले आहे.
घटनेच्या वेळी शंकर घाडी हे मजुरीच्या कामानिमित्त बाहेर गेले होते. घरात कोणी नसताना अचानक आग लागल्याने ती काही वेळातच भडकली. आगीने अल्पावधीतच संपूर्ण घराला वेढा घातला. या आगीत घरात साठवून ठेवलेले धान्य, रोख रक्कम, कपडे, घरगुती साहित्य तसेच इतर मौल्यवान वस्तू पूर्णतः जळून नष्ट झाल्या. अंदाजे लाखो रुपयांचे नुकसान झाल्याचे सांगण्यात येत आहे.
आगीची माहिती मिळताच गावातील युवक जयकुमार गुरव आणि संदीप घाडी यांनी तात्काळ घटनास्थळी धाव घेतली. त्यांनी अग्निशामक दलाला दूरध्वनीद्वारे घटनेची माहिती दिली. तसेच पंकज कुट्रे यांनी पोलिसांशी संपर्क साधून परिस्थितीची कल्पना दिली.
अग्निशामक दल घटनास्थळी पोहोचण्यापूर्वीच स्थानिक युवकांनी धाडस दाखवत शेजारील घराच्या कौलावर चढून पाणी व इतर साधनांच्या सहाय्याने आग आटोक्यात आणण्याचा प्रयत्न केला. त्यांच्या तत्परतेमुळे आग शेजारच्या घरांपर्यंत पसरण्यापासून रोखता आली.
दरम्यान, सामाजिक कार्यकर्ते दीपक अ. देसाई यांनी संबंधित शासकीय अधिकाऱ्यांशी संपर्क साधून पंचनामा करून पीडित कुटुंबाला तातडीने नुकसानभरपाई देण्यात यावी, अशी मागणी केली आहे. अचानक घडलेल्या या घटनेमुळे घाडी कुटुंबावर आर्थिक संकट ओढावले असून प्रशासनाने मदतीचा हात पुढे करावा, अशी मागणी ग्रामस्थांकडून करण्यात येत आहे.
ಶಾರ್ಟ್ ಸರ್ಕ್ಯೂಟ್ನಿಂದ ಗುಂಜಿಯಲ್ಲಿ ಮನೆಗೆ ಬೆಂಕಿ ತಗುಲಿ ಭೀಕರ ಅಗ್ನಿ ಅವಘಡ; ರೈತ ಕುಟುಂಬಕ್ಕೆ ಲಕ್ಷಾಂತರ ನಷ್ಟ.
ಗುಂಜಿ (ಪ್ರತಿನಿಧಿ ಸಂದೀಪ್ ಘಾಡಿ) ; ಗುಂಜಿ, ತಾ. ಖಾನಾಪುರ :
ಇಲ್ಲಿನ ಶಂಕರ ವಿಷ್ಣು ಘಾಡಿ ಅವರ ವಾಸದ ಮನೆಯಲ್ಲಿ ಭಾನುವಾರ ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್ನಿಂದಲೇ ಈ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಎಲ್ಲಾ ಗೃಹೋಪಯೋಗಿ ಸಾಮಗ್ರಿಗಳು ಸುಟ್ಟು ಭಸ್ಮವಾಗಿರುವುದರಿಂದ ಕುಟುಂಬದ ಮೇಲೆ ದೊಡ್ಡ ಆರ್ಥಿಕ ಸಂಕಷ್ಟ ಉಂಟಾಗಿದೆ.
ಘಟನೆಯ ಸಮಯದಲ್ಲಿ ಶಂಕರ ಘಾಡಿ ಅವರು ಕೂಲಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ವ್ಯಾಪಕವಾಗಿ ಹರಡಿತು. ಅಲ್ಪಾವಧಿಯಲ್ಲೇ ಸಂಪೂರ್ಣ ಮನೆಯನ್ನು ಆವರಿಸಿತು. ಈ ಅಗ್ನಿ ಅವಘಡದಯಲ್ಲಿ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಧಾನ್ಯ, ನಗದು ಹಣ, ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಇತರ ಮೌಲ್ಯಯುತ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ನಾಶವಾಗಿವೆ. ಅಂದಾಜು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಗ್ರಾಮದ ಯುವಕರು ಜಯಕುಮಾರ ಗುರುವ್ ಮತ್ತು ಸಂದೀಪ್ ಘಾಡಿ ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಅವರು ದೂರವಾಣಿ ಮೂಲಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಹಾಗೆಯೇ ಪಂಕಜ್ ಕುಟ್ರೆ ಅವರು ಪೊಲೀಸರಿಗೆ ಸಂಪರ್ಕಿಸಿ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದರು.
ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪುವ ಮುನ್ನವೇ ಸ್ಥಳೀಯ ಯುವಕರು ಧೈರ್ಯದಿಂದ ಪಕ್ಕದ ಮನೆಯ ಮೇಲ್ಚಾವಣಿಗೆ ಏರಿ ನೀರು ಮತ್ತು ಇತರ ಸಾಧನಗಳ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು. ಅವರ ತ್ವರಿತ ಕ್ರಮದಿಂದ ಬೆಂಕಿ ಪಕ್ಕದ ಮನೆಗಳಿಗೆ ಹರಡುವುದನ್ನು ತಡೆಯಲು ಸಾಧ್ಯವಾಯಿತು.
ಈ ನಡುವೆ ಸಾಮಾಜಿಕ ಕಾರ್ಯಕರ್ತ ದೀಪಕ್ ಅ. ದೇಸಾಯಿ ಅವರು ಸಂಬಂಧಿತ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಪಂಚನಾಮೆ ನಡೆಸಿ ಪೀಡಿತ ಕುಟುಂಬಕ್ಕೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಆಕಸ್ಮಿಕವಾಗಿ ಸಂಭವಿಸಿದ ಈ ಘಟನೆಯಿಂದ ಘಾಡಿ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಆಡಳಿತವು ನೆರವಿನ ಕೈ ಚಾಚಬೇಕು ಎಂಬ ಬೇಡಿಕೆ ಗ್ರಾಮಸ್ಥರಿಂದ ಕೇಳಿಬರುತ್ತಿದೆ.



