सार्वजनिक गणेशोत्सवासाठी हेस्कॉमच्या सुरक्षाविषयक मार्गदर्शक सूचना.
खानापूर : प्रतिनिधी — सार्वजनिक गणेशोत्सवाच्या पार्श्वभूमीवर हेस्कॉमकडून गणेश मंडळे व नागरिकांसाठी विद्युत सुरक्षेबाबत महत्त्वाच्या मार्गदर्शक सूचना जारी करण्यात आल्या आहेत. गणेशोत्सवाचा आनंद घेताना विद्युत अपघात टाळण्यासाठी सर्वांनी या सूचनांचे काटेकोरपणे पालन करावे, असे आवाहन हेस्कॉमकडून करण्यात आले आहे.
अनधिकृतपणे विद्युत वाहिन्यांना हुक लावून वीज जोडणी घेऊ नये. सार्वजनिक गणेश मंडळांनी संबंधित हेस्कॉम कार्यालयाशी संपर्क साधून नियमानुसार परवानगी घेऊनच सुरक्षित पद्धतीने विद्युत जोडणी घ्यावी.
तसेच वीज खांबांवर बॅनर, पोस्टर किंवा फलक लावू नयेत. गणेश मंडप व परिसरातील सीरियल लाईटच्या तारा योग्य पद्धतीने इन्सुलेट करून सुरक्षित ठेवाव्यात. वीजवाहिन्यांच्या खाली किंवा ट्रान्सफॉर्मरच्या जवळ गणेश मंडप अथवा पेंडाल उभारू नये, अशा स्पष्ट सूचना देण्यात आल्या आहेत.
गणेशमूर्तीच्या मिरवणुकीदरम्यानही विशेष खबरदारी घेण्याचे आवाहन करण्यात आले आहे. मिरवणुकीच्या मार्गावर असलेल्या विद्युत तारा, खांब आणि ट्रान्सफॉर्मर यांच्यापासून सुरक्षित अंतर राखावे, जेणेकरून कोणतीही दुर्घटना घडणार नाही.
विद्युत सुरक्षेशी संबंधित कोणतीही तक्रार अथवा माहिती आवश्यक असल्यास नागरिकांनी हेस्कॉमच्या 24×12 हेल्पलाइन क्रमांक 1912 वर संपर्क साधावा, असे आवाहन हेस्कॉमने केले आहे.
“गणेशोत्सवाचा उत्सव आनंदात साजरा करा; पण विद्युत सुरक्षेला प्रथम प्राधान्य द्या,” असा संदेश हेस्कॉमकडून देण्यात आला आहे.
ಸುರಕ್ಷಿತ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಹೆಸ್ಕಾಂ ವತಿಯಿಂದ ಸುರಕ್ಷತಾ ಮಾರ್ಗಸೂಚಿಗಳು.
ಖಾನಾಪುರ : ಪ್ರತಿನಿಧಿ — ಸಾರ್ವಜನಿಕ ಗಣೇಶೋತ್ಸವದ ಹಿನ್ನೆಲೆಯಲ್ಲಿ ಹೆಸ್ಕಾಂ ಇಲಾಖೆ ವತಿಯಿಂದ ಗಣೇಶ ಮಂಡಳಿಗಳು ಹಾಗೂ ನಾಗರಿಕರಿಗಾಗಿ ವಿದ್ಯುತ್ ಸುರಕ್ಷತೆಗೆ ಸಂಬಂಧಿಸಿದಂತೆ ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಗಣೇಶೋತ್ಸವದ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ ವಿದ್ಯುತ್ ಅಪಘಾತಗಳನ್ನು ತಪ್ಪಿಸಲು ಎಲ್ಲರೂ ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೆಸ್ಕಾಂ ವತಿಯಿಂದ ಮನವಿ ಮಾಡಲಾಗಿದೆ.
ಅನಧಿಕೃತವಾಗಿ ವಿದ್ಯುತ್ ಮಾರ್ಗಗಳಿಗೆ ಹುಕ್ ಹಾಕಿ ವಿದ್ಯುತ್ ಸಂಪರ್ಕ ಪಡೆಯಬಾರದು. ಸಾರ್ವಜನಿಕ ಗಣೇಶ ಮಂಡಳಿಗಳು ಸಂಬಂಧಪಟ್ಟ ಹೆಸ್ಕಾಂ ಕಚೇರಿಯನ್ನು ಸಂಪರ್ಕಿಸಿ, ನಿಯಮಾನುಸಾರ ಅನುಮತಿ ಪಡೆದುಕೊಂಡು ಮಾತ್ರ ಸುರಕ್ಷಿತ ರೀತಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕು.
ಅದೇ ರೀತಿ ವಿದ್ಯುತ್ ಕಂಬಗಳ ಮೇಲೆ ಬ್ಯಾನರ್, ಪೋಸ್ಟರ್ ಅಥವಾ ಫಲಕಗಳನ್ನು ಅಳವಡಿಸಬಾರದು. ಗಣೇಶ ಮಂಟಪ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಳವಡಿಸುವ ಸೀರಿಯಲ್ ಲೈಟ್ಗಳ ತಂತಿಗಳನ್ನು ಸರಿಯಾದ ರೀತಿಯಲ್ಲಿ ಇನ್ಸುಲೇಟ್ ಮಾಡಿ ಸುರಕ್ಷಿತವಾಗಿ ಇರಿಸಬೇಕು.
ವಿದ್ಯುತ್ ಮಾರ್ಗಗಳ ಕೆಳಗೆ ಅಥವಾ ಟ್ರಾನ್ಸ್ಫಾರ್ಮರ್ಗಳ ಸಮೀಪ ಗಣೇಶ ಮಂಟಪ ಅಥವಾ ಪೆಂಡಾಲ್ಗಳನ್ನು ನಿರ್ಮಿಸಬಾರದು, ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಗಣೇಶಮೂರ್ತಿಯ ಮೆರವಣಿಗೆಯ ಸಂದರ್ಭದಲ್ಲಿಯೂ ವಿಶೇಷ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ಮೆರವಣಿಗೆಯ ಮಾರ್ಗದಲ್ಲಿರುವ ವಿದ್ಯುತ್ ತಂತಿಗಳು, ಕಂಬಗಳು ಹಾಗೂ ಟ್ರಾನ್ಸ್ಫಾರ್ಮರ್ಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು, ಇದರಿಂದ ಯಾವುದೇ ರೀತಿಯ ವಿದ್ಯುತ್ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು.
ವಿದ್ಯುತ್ ಸುರಕ್ಷತೆಗೆ ಸಂಬಂಧಿಸಿದ ಯಾವುದೇ ದೂರು ಅಥವಾ ಮಾಹಿತಿ ಅಗತ್ಯವಿದ್ದಲ್ಲಿ ನಾಗರಿಕರು ಹೆಸ್ಕಾಂನ 24×12 ಸಹಾಯವಾಣಿ ಸಂಖ್ಯೆ 1912ಕ್ಕೆ ಸಂಪರ್ಕಿಸಬೇಕು ಎಂದು ಹೆಸ್ಕಾಂ ವತಿಯಿಂದ ಮನವಿ ಮಾಡಲಾಗಿದೆ.
“ಗಣೇಶೋತ್ಸವವನ್ನು ಸಂತೋಷದಿಂದ ಆಚರಿಸಿ; ಆದರೆ ವಿದ್ಯುತ್ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ,” ಎಂಬ ಸಂದೇಶವನ್ನು ಹೆಸ್ಕಾಂ ವತಿಯಿಂದ ನೀಡಲಾಗಿದೆ.



