“आपलं खानापूर” न्यूज पोर्टलची दखल; आजचा नियोजित वीजपुरवठा खंडित कार्यक्रम रद्द.
खानापूर : आज शुक्रवार, दिनांक 20 मार्च रोजी सकाळी 9.00 ते सायंकाळी 6.00 वाजेपर्यंत हेस्कॉम विभागाकडून खानापूर शहर व परिसरात विद्युत पुरवठा खंडित करण्यात येणार असल्याची माहिती होती. मात्र, याबाबत सामान्य नागरिक तसेच लहान-मोठ्या व्यावसायिकांना पूर्वसूचना देणे आवश्यक असतानाही, वृत्तपत्र किंवा सोशल मीडियाद्वारे कोणतीही अधिकृत माहिती देण्यात आली नव्हती.
यामुळे नागरिक व व्यापाऱ्यांमध्ये संभ्रमाचे वातावरण निर्माण होण्याची शक्यता लक्षात घेऊन “आपलं खानापूर” न्यूज पोर्टलने आज सकाळी यासंदर्भात वृत्त प्रसिद्ध केले. या वृत्ताची तात्काळ दखल हेस्कॉम विभागाच्या अधिकाऱ्यांनी घेतली आहे.

खानापूर सेक्शन अधिकाऱ्यांनी दिलेल्या माहितीनुसार, संबंधित वीजपुरवठा खंडित कार्यक्रम हा केपीटीसीएल विभागामार्फत करण्यात येणार होता. साधारणतः अशा कामांबाबतची माहिती केपीटीसीएलकडून वृत्तपत्रे व प्रसिद्धी माध्यमांना दिली जाते. मात्र, यावेळी ती माहिती देण्यात आली नव्हती.

ही बाब गांभीर्याने घेत हेस्कॉमच्या खानापूर विभागातील असिस्टंट एक्झिक्युटिव्ह इंजिनियर (AEE) यांच्या निदर्शनास आणून देण्यात आली. त्यांनी वरिष्ठ अधिकाऱ्यांशी चर्चा करून नागरिकांची गैरसोय टाळण्यासाठी आजचा नियोजित वीजपुरवठा खंडित कार्यक्रम रद्द करण्याचा निर्णय घेतला.
दरम्यान, यापुढे अशा प्रकारच्या वीजपुरवठा खंडित कार्यक्रमाबाबत सर्वसामान्य नागरिकांना किमान एक दिवस अगोदर वृत्तपत्र व इतर माध्यमांतून माहिती दिली जाईल, असेही अधिकाऱ्यांनी स्पष्ट केले आहे.
या निर्णयामुळे नागरिक व व्यावसायिकांनी दिलासा व्यक्त केला असून, स्थानिक माध्यमांच्या तत्परतेमुळे मोठी गैरसोय टळल्याची भावना व्यक्त होत आहे.
“ಅಪಲ ಖಾನಾಪುರ್” ನ್ಯೂಸ್ ಪೋರ್ಟಲ ದಲ್ಲಿ ಪ್ರಕಟಣೆ ಕುರಿತು ದಖಲ; ಇಂದಿನ ನಿಗದಿತ ವಿದ್ಯುತ್ ವ್ಯತ್ಯಯ ಕಾರ್ಯಕ್ರಮ ರದ್ದು.
ಖಾನಾಪೂರ : ಇಂದು ಶುಕ್ರವಾರ, ದಿನಾಂಕ 20 ಮಾರ್ಚ್ ರಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಹೆಸ್ಕಾಂ ಇಲಾಖೆಯಿಂದ ಖಾನಾಪೂರ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ, ಈ ಬಗ್ಗೆ ಸಾಮಾನ್ಯ ನಾಗರಿಕರು ಹಾಗು ಸಣ್ಣ-ದೊಡ್ಡ ವ್ಯಾಪಾರಿಗಳಿಗೆ ಮುಂಚಿತವಾಗಿ ತಿಳಿಸುವುದು ಅಗತ್ಯವಾಗಿದ್ದರೂ, ಪತ್ರಿಕೆ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿರಲಿಲ್ಲ.
ಇದರಿಂದ ನಾಗರಿಕರು ಮತ್ತು ವ್ಯಾಪಾರಿಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು “ಅಪಲ ಖಾನಾಪುರ ನ್ಯೂಸ್ ಪೋರ್ಟಲ್ ಇಂದು ಬೆಳಿಗ್ಗೆ ಈ ಕುರಿತು ಸವಿಸ್ತಾರ ವರದಿ ಪ್ರಕಟಿಸಿತು. ಈ ವರದಿಯನ್ನು ತಕ್ಷಣವೇ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಗಮನಕ್ಕೆ ತೆಗೆದುಕೊಂಡಿದ್ದಾರೆ.
ಖಾನಾಪೂರ ಸೆಕ್ಷನ್ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಸಂಬಂಧಿತ ವಿದ್ಯುತ್ ವ್ಯತ್ಯಯ ಕಾರ್ಯಕ್ರಮವನ್ನು ಕೆಪಿಟಿಸಿಎಲ್ ಇಲಾಖೆಯ ಮೂಲಕ ನಡೆಸಲಾಗಬೇಕಾಗಿತ್ತು. ಸಾಮಾನ್ಯವಾಗಿ ಇಂತಹ ಕಾರ್ಯಗಳ ಬಗ್ಗೆ ಮಾಹಿತಿ ಕೆಪಿಟಿಸಿಎಲ್ ವತಿಯಿಂದ ಪತ್ರಿಕೆಗಳು ಮತ್ತು ಪ್ರಸಾರ ಮಾಧ್ಯಮಗಳಿಗೆ ನೀಡಲಾಗುತ್ತದೆ. ಆದರೆ, ಈ ಬಾರಿ ಆ ಮಾಹಿತಿ ನೀಡಲಾಗಿರಲಿಲ್ಲ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಹೆಸ್ಕಾಂ ಖಾನಾಪೂರ ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ (AEE) ಅವರ ಗಮನಕ್ಕೆ ತರಲಾಯಿತು. ಅವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ನಾಗರಿಕರಿಗೆ ಆಗಬಹುದಾದ ತೊಂದರೆ ತಪ್ಪಿಸಲು ಇಂದಿನ ನಿಗದಿತ ವಿದ್ಯುತ್ ವ್ಯತ್ಯಯ ಕಾರ್ಯಕ್ರಮವನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿದ್ದಾರೆ.
ಇದರೊಂದಿಗೆ, ಮುಂದಿನ ದಿನಗಳಲ್ಲಿ ಇಂತಹ ವಿದ್ಯುತ್ ವ್ಯತ್ಯಯ ಕಾರ್ಯಕ್ರಮಗಳ ಬಗ್ಗೆ ಕನಿಷ್ಠ ಒಂದು ದಿನ ಮೊದಲು ಪತ್ರಿಕೆ ಮತ್ತು ಇತರೆ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರದಿಂದ ನಾಗರಿಕರು ಮತ್ತು ವ್ಯಾಪಾರಿಗಳು ನೆಮ್ಮದಿ ವ್ಯಕ್ತಪಡಿಸಿದ್ದು, ಸ್ಥಳೀಯ ಮಾಧ್ಯಮಗಳ ತಕ್ಷಣದ ಪ್ರತಿಕ್ರಿಯೆಯಿಂದ ದೊಡ್ಡ ಮಟ್ಟದ ತೊಂದರೆ ತಪ್ಪಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



