हनुमान जयंती उत्सवाच्या निमित्ताने खानापूर शहरात विविध ठिकाणी महाप्रसादाचे आयोजन.
खानापूर : उद्या गुरुवार दिनांक 2 एप्रिल 2026 रोजी संपूर्ण देशभरात हनुमान जयंती उत्सव मोठ्या उत्साहात साजरा केला जाणार आहे. त्यानिमित्ताने खानापूर शहरातही विविध ठिकाणी हनुमान जयंती उत्सव, धार्मिक कार्यक्रम व महाप्रसादाचे आयोजन करण्यात आले आहे. भाविकांमध्ये उत्साहाचे वातावरण असून मंदिर परिसर सजविण्यात आले आहेत.
रेल्वे स्थानक हनुमान मंदिर….
खानापूर शहरातील रेल्वे स्थानकाजवळ ब्रिटिशकालीन व जागृत देवस्थान म्हणून ओळखल्या जाणाऱ्या हनुमान मंदिरात विविध धार्मिक कार्यक्रमांचे आयोजन करण्यात आले आहे. सकाळी 7.10 वाजता अभिषेक, जन्मोत्सव, पाळणा व आरती होणार आहे. त्यानंतर दुपारी 1 ते 3 या वेळेत महाप्रसादाचे आयोजन करण्यात आले आहे.
सायंकाळी 6.00 वाजता महाआरती, महिलांसाठी हळदी-कुंकू कार्यक्रम तसेच कोशिंबिरीचा प्रसाद वितरण करण्यात येणार आहे. मागील वर्षापासून येथे महाप्रसादाची परंपरा सुरू झाली असून यंदा दुसऱ्या वर्षी हा कार्यक्रम आयोजित करण्यात येत आहे. भाविकांनी मोठ्या संख्येने उपस्थित राहून महाप्रसादाचा लाभ घ्यावा, असे आवाहन आयोजकांनी केले आहे.
मारुती मंदिर (महालक्ष्मी मंदिर परिसर)…
येथील मारुती मंदिरात अनेक वर्षांपासून हनुमान जयंती उत्सव मोठ्या भक्तिभावाने साजरा केला जातो. यावर्षीही उत्सव मंडळाच्या वतीने विशेष कार्यक्रम व महाप्रसादाचे आयोजन करण्यात आले आहे.
सकाळी 7.00 वाजता हनुमान जयंती उत्सव साजरा करण्यात येणार असून पाळणा व आरतीचे आयोजन करण्यात आले आहे. त्यानंतर दुपारी 1.00 वाजता महाप्रसादाचा कार्यक्रम होणार आहे. सर्व भाविकांनी उपस्थित राहून महाप्रसादाचा लाभ घ्यावा, असे आवाहन हनुमान जयंती उत्सव समितीच्या वतीने करण्यात आले आहे.
मारुती मंदिर (मारुती नगर, खानापूर)…
खानापूर शहरातील मारुती नगर येथील मारुती मंदिरातही प्रतिवर्षाप्रमाणे हनुमान जयंती उत्सव साजरा करण्यात येणार आहे. येथे सकाळी आरती व धार्मिक कार्यक्रमांचे आयोजन करण्यात आले असून भाविकांनी मोठ्या संख्येने सहभागी व्हावे, असे आवाहन आयोजकांकडून करण्यात आले आहे.
हनुमान जयंतीच्या पार्श्वभूमीवर खानापूर शहरात भक्तिमय वातावरण निर्माण झाले असून विविध मंदिरांमध्ये सजावट व तयारी पूर्ण झाली आहे. भाविकांनी शिस्त पाळून उत्सवात सहभागी व्हावे, असे आवाहन आयोजकांनी केले आहे.
ಹನುಮಾನ್ ಜಯಂತಿ ನಿಮಿತ್ತ ಖಾನಾಪುರ ಪಟ್ಟಣದಲ್ಲಿ ವಿವಿಧ ಆಂಜನೇಯ ದೇವಾಲಯದ ಬಳಿ ಮಹಾಪ್ರಸಾದದ ಆಯೋಜನೆ.
ಖಾನಾಪುರ : ನಾಳೆ ಗುರುವಾರ ದಿನಾಂಕ 2 ಏಪ್ರಿಲ್ 2026ರಂದು ದೇಶಾದ್ಯಂತ ಹನುಮಾನ್ ಜಯಂತಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರ ನಿಮಿತ್ತ ಖಾನಾಪುರ ಪಟ್ಟಣದಲ್ಲಿಯೂ ವಿವಿಧ ಸ್ಥಳಗಳಲ್ಲಿ ಹನುಮಾನ್ ಜಯಂತಿ ಉತ್ಸವ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾಪ್ರಸಾದದ ಆಯೋಜನೆ ಮಾಡಲಾಗಿದೆ. ಭಕ್ತರಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದ್ದು, ದೇವಾಲಯಗಳ ಪರಿಸರವನ್ನು ಅಲಂಕರಿಸಲಾಗಿದೆ.
ಖಾನಾಪುರ ರೈಲ್ವೆ ನಿಲ್ದಾಣ ಹನುಮಾನ್ ದೇವಾಲಯ….
ಖಾನಾಪುರ ಪಟ್ಟಣದ ರೈಲು ನಿಲ್ದಾಣದ ಸಮೀಪದಲ್ಲಿರುವ ಬ್ರಿಟಿಷ್ ಕಾಲಿನ ಹಾಗೂ ಜಾಗೃತ ದೇವಸ್ಥಾನವೆಂದು ಪ್ರಸಿದ್ಧವಾಗಿರುವ ಹನುಮಾನ್ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 7.10 ಗಂಟೆಗೆ ಅಭಿಷೇಕ, ಜನ್ಮೋತ್ಸವ, ತೊಟ್ಟಿಲ ಹಾಕುವ ಹಾಗೂ ಮಹಾರತಿ ನಡೆಯಲಿದೆ. ನಂತರ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಮಹಾಪ್ರಸಾದದ ಆಯೋಜನೆ ಮಾಡಲಾಗಿದೆ.
ಸಂಜೆ 6.00 ಗಂಟೆಗೆ ಮಹಾರತಿ, ಮಹಿಳೆಯರಿಗಾಗಿ ಅರಿಸಿನ ಕುಂಕುಮ ಕಾರ್ಯಕ್ರಮ ಹಾಗೂ ಕೋಸಂಬರಿ ಪ್ರಸಾದ ವಿತರಣೆ ನಡೆಯಲಿದೆ. ಕಳೆದ ವರ್ಷದಿಂದ ಇಲ್ಲಿ ಮಹಾಪ್ರಸಾದದ ಪರಂಪರೆ ಆರಂಭವಾಗಿದ್ದು, ಈ ವರ್ಷ ಎರಡನೇ ವರ್ಷವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹಾಪ್ರಸಾದದ ಪ್ರಯೋಜನ ಪಡೆಯಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಮಾರುತಿ ದೇವಾಲಯ (ಮಹಾಲಕ್ಷ್ಮಿ ದೇವಾಲಯ ಪರಿಸರ)…
ಇಲ್ಲಿನ ಮಾರುತಿ ದೇವಾಲಯದಲ್ಲಿ ಅನೇಕ ವರ್ಷಗಳಿಂದ ಹನುಮಾನ್ ಜಯಂತಿ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಈ ವರ್ಷವೂ ಉತ್ಸವ ಮಂಡಳಿಯ ವತಿಯಿಂದ ವಿಶೇಷ ಕಾರ್ಯಕ್ರಮಗಳು ಹಾಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ 7.00 ಗಂಟೆಗೆ ಹನುಮಾನ್ ಜಯಂತಿ ಉತ್ಸವ ನಡೆಯಲಿದ್ದು, ತೊಟ್ಟಿಲ ಹಾಗೂ ಆರತಿಯ ಕಾರ್ಯಕ್ರಮ ಇರಲಿದೆ. ನಂತರ ಮಧ್ಯಾಹ್ನ 1.00 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಎಲ್ಲಾ ಭಕ್ತರು ಆಗಮಿಸಿ ಮಹಾಪ್ರಸಾದದ ಲಾಭ ಪಡೆಯಬೇಕು ಎಂದು ಹನುಮಾನ್ ಜಯಂತಿ ಉತ್ಸವ ಸಮಿತಿಯವರು ಮನವಿ ಮಾಡಿದ್ದಾರೆ.
ಮಾರುತಿ ದೇವಾಲಯ (ಮಾರುತಿ ನಗರ, ಖಾನಾಪುರ)…
ಖಾನಾಪುರ ಪಟ್ಟಣದ ಮಾರುತಿ ನಗರದಲ್ಲಿರುವ ಮಾರುತಿ ದೇವಾಲಯದಲ್ಲಿಯೂ ಪ್ರತಿವರ್ಷದಂತೆ ಹನುಮಾನ್ ಜಯಂತಿ ಉತ್ಸವ ಆಚರಿಸಲಾಗುತ್ತಿದೆ. ಇಲ್ಲಿ ಬೆಳಿಗ್ಗೆ ಆರತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಹಾಗೆಯೇ ಖಾನಾಪುರ ಹಾಗೂ ಇತರ ವಿವಿಧ ಭಾಗಗಳಲ್ಲಿ ಇರುವ ಆಂಜನೇಯ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಹನುಮಾನ್ ಜಯಂತಿಯ ಹಿನ್ನೆಲೆ ಖಾನಾಪುರ ಪಟ್ಟಣದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿದ್ದು, ವಿವಿಧ ದೇವಾಲಯಗಳಲ್ಲಿ ಅಲಂಕಾರ ಹಾಗೂ ಸಿದ್ಧತೆಗಳು ಪೂರ್ಣಗೊಂಡಿವೆ. ಭಕ್ತರು ಶಿಸ್ತನ್ನು ಪಾಲಿಸಿ ಉತ್ಸವದಲ್ಲಿ ಭಾಗವಹಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ.



