ग्रामपंचायतीच्या दुर्लक्षामुळे हलशी गाव अंधारात ; स्मशानभूमीचा रस्ता चिखलमय.

खानापूर : तालुक्यातील प्रेक्षणीय स्थळ, अति प्राचीन कदंब देशाची राजधानी व दक्षिण काशी म्हणून ओळखले जाणारे हलशी गाव सध्या ग्रामपंचायतीच्या दुर्लक्षामुळे अंधारमय झाले आहे. ऐन नवरात्रीच्या काळात गावातील अर्ध्यापेक्षा जास्त पथदिवे बंद पडले असून रात्रीच्या वेळी गावाच्या अनेक भागात काळोख पसरतो आहे. त्यामुळे नागरिकांना नाहक त्रास सहन करावा लागत असून ग्रामपंचायतीविषयी नाराजी व्यक्त होत आहे. याबाबत गावातील युवा कार्यकर्ते विशाल गुरव यांनी चित्रीकरण करून समस्यांची कैफियत मांडली आहे.
दरम्यान, हलशी गावातील स्मशानभूमीकडे जाणारा रस्ता पूर्णपणे खड्डेमय व चिखलमय झाला आहे. नुकतेच एका विद्यमान ग्रामपंचायत सदस्यांच्या मातोश्रींचे निधन झाले असता अंत्ययात्रेदरम्यान नागरिकांना या चिखलमय रस्त्यामुळे प्रचंड हाल सहन करावे लागले. प्रेत नेतानाही यातनामय प्रवास करावा लागला.
गावात पसरलेला अंधार व स्मशानभूमीच्या रस्त्याची झालेली दयनीय अवस्था, या दोन्ही समस्यांचे चित्रीकरण करून युवा कार्यकर्ते विशाल गुरव यांनी “आपलं खानापूर” न्यूज पोर्टल कडे कैफियत मांडली आहे. या समस्यांचे निवारण हलशी ग्रामपंचायतीने तात्काळ करण्याची मागणी नागरिकांकडून होत आहे.
ಹಲಸಿ ಗ್ರಾಮ ಪಂಚಾಯತಿ ನಿರ್ಲಕ್ಷ್ಯದಿಂದ ಗ್ರಾಮ ಕತ್ತಲಲ್ಲಿ; ಶ್ಮಶಾನ ಭೂಮಿಯ ರಸ್ತೆಯೂ ಕೆಸರುಮಯ – ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ತರ!
ಖಾನಾಪುರ : ತಾಲ್ಲೂಕಿನ ಪ್ರಸಿದ್ಧ ತೀರ್ಥಕ್ಷೇತ್ರ, ಅತಿ ಪ್ರಾಚೀನ ಕದಂಬ ದೇಶದ ರಾಜಧಾನಿ ಹಾಗು ದಕ್ಷಿಣ ಕಾಶಿ ಎಂದು ಹೆಸರಾಗಿರುವ ಹಲಸಿ ಗ್ರಾಮ ಈಗ ಗ್ರಾಮ ಪಂಚಾಯತಿ ನಿರ್ಲಕ್ಷ್ಯದಿಂದ ಕತ್ತಲಲ್ಲಿ ಮುಳುಗಿದೆ. ನವರಾತ್ರಿ ಹಬ್ಬದ ಸಮಯದಲ್ಲೇ ಗ್ರಾಮದ ಅರ್ಧಕ್ಕಿಂತ ಹೆಚ್ಚು ಬೀದಿ ದೀಪಗಳು ನಂದಿಹೋಗಿದ್ದು, ರಾತ್ರಿ ವೇಳೆ ಹಲವು ಭಾಗಗಳಲ್ಲಿ ಕತ್ತಲ ಆವರಿಸಿದೆ. ಇದರ ಪರಿಣಾಮವಾಗಿ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದು, ಗ್ರಾಮ ಪಂಚಾಯಿತಿಯ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಕುರಿತು ಗ್ರಾಮದ ಯುವ ಕಾರ್ಯಕರ್ತ ವಿಶಾಲ್ ಗುರವ್ ಅವರು ಚಿತ್ರೀಕರಣ ಮಾಡಿ ಸಮಸ್ಯೆಗಳ ವಿವರ ಮಂಡಿಸಿದ್ದಾರೆ.
ಇದರ ನಡುವೆ, ಹಲಸಿ ಗ್ರಾಮದ ಶ್ಮಶಾನ ಭೂಮಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಗುಂಡಿ ಹಾಗೂ ಕೆಸರಿನಿಂದ ತುಂಬಿಕೊಂಡಿದೆ. ಇತ್ತೀಚೆಗೆ ಒಬ್ಬ ಗ್ರಾಮ ಪಂಚಾಯತಿ ಸದಸ್ಯರ ತಾಯಿಯವರು ನಿಧನರಾದ ಸಂದರ್ಭದಲ್ಲಿ ಅಂತ್ಯಯಾತ್ರೆಯ ವೇಳೆ ಗ್ರಾಮಸ್ಥರಿಗೆ ಈ ಕೆಸರಿನ ರಸ್ತೆಯಿಂದ ಭಾರೀ ಸಂಕಷ್ಟ ಅನುಭವಿಸಬೇಕಾಯಿತು. ಶವವನ್ನು ಕೊಂಡೊಯ್ಯುವ ಸಂದರ್ಭದಲ್ಲಿ ಸಹ ಗ್ರಾಮಸ್ಥರು ತುಂಬಾ ಕಷ್ಟ ಅನುಭವಿಸಿದರು.
ಗ್ರಾಮದಲ್ಲಿ ಪಸರಿಸಿದ ಕತ್ತಲು ಹಾಗೂ ಶ್ಮಶಾನ ಭೂಮಿಯ ರಸ್ತೆಯ ದುಸ್ಥಿತಿ – ಈ ಎರಡೂ ಸಮಸ್ಯೆಗಳ ಚಿತ್ರೀಕರಣ ಮಾಡಿ ಯುವ ಕಾರ್ಯಕರ್ತ ವಿಶಾಲ್ ಗುರವ್ ಅವರು “ಅಪಲ ಖಾನಾಪುರ” ನ್ಯೂಸ್ ಪೋರ್ಟಲ್ ಗೆ ವಿವರ ನೀಡಿದ್ದಾರೆ. ಈ ಸಮಸ್ಯೆಗಳ ತಕ್ಷಣದ ಪರಿಹಾರಕ್ಕಾಗಿ ಹಲಸಿ ಗ್ರಾಮ ಪಂಚಾಯತಿಯಿಂದ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

