हलशी लक्ष्मी यात्रा काळात स्टॉल लावण्यासाठी आवाहन.
खानापूर : तब्बल 28 वर्षांनंतर हलशी-हलशीवाडी येथे श्री लक्ष्मी यात्रोत्सव मोठ्या उत्साहात व भक्तिभावाच्या वातावरणात भरत असून संपूर्ण परिसरात आनंदाचे व उत्सुकतेचे वातावरण निर्माण झाले आहे. दीर्घ प्रतीक्षेनंतर होत असलेल्या या यात्रेमुळे ग्रामस्थांसह पंचक्रोशीतील भाविकांमध्ये विशेष उत्साह दिसून येत आहे.
यात्रेनिमित्त विविध धार्मिक कार्यक्रम, पारंपरिक पूजाविधी, कीर्तन-भजन, हरिनाम सप्ताह तसेच सांस्कृतिक उपक्रमांचे आयोजन करण्यात येणार असल्याची माहिती यात्रा कमिटीच्या वतीने देण्यात आली. यात्रेच्या पार्श्वभूमीवर मंदिर परिसराची सजावट, रोषणाई तसेच इतर आवश्यक तयारी अंतिम टप्प्यात असल्याचेही कमिटीने सांगितले.
दरम्यान, यात्रेदरम्यान पाळणे, झोपाळे व इतर मनोरंजनाची साधने उभारण्यासाठी तसेच आईस्क्रीम, विविध खाद्यपदार्थ, मिठाई, खेळणी, पूजासाहित्य आणि इतर वस्तूंचे स्टॉल लावण्यासाठी इच्छुक व्यावसायिकांनी यात्रा कमिटीशी संपर्क साधावा, असे आवाहन करण्यात आले आहे. यात्रेला मोठ्या संख्येने भाविक उपस्थित राहण्याची शक्यता असल्याने व्यापाऱ्यांसाठी ही सुवर्णसंधी ठरणार असल्याचे कमिटीने नमूद केले आहे.
स्टॉल लावण्यास इच्छुक असलेल्या व्यावसायिकांनी सोमवार (ता. 23) ते बुधवार (ता. 25) या कालावधीत कमिटीशी संपर्क साधून नोंदणी करावी, असेही कळविण्यात आले आहे.
यात्रा परिसरात स्वच्छता, सुरक्षितता आणि वाहतूक व्यवस्थेची योग्य ती काळजी घेतली जाणार असून ग्रामस्थ, स्वयंसेवक व प्रशासन यांचे सहकार्य घेतले जाणार आहे. सर्वांनी नियमांचे पालन करून यात्रोत्सव शांततेत व यशस्वीपणे पार पाडण्यासाठी सहकार्य करावे, असे आवाहन आयोजकांच्या वतीने करण्यात आले आहे.
ಹಲಶಿ ಶ್ರೀ ಲಕ್ಷ್ಮೀ ಜಾತ್ರೆ ಸಂದರ್ಭದಲ್ಲಿ ಸ್ಟಾಲ್ ಅಳವಡಿಸಲು ಆಹ್ವಾನ.
ಖಾನಾಪುರ : ಸುಮಾರು 28 ವರ್ಷಗಳ ನಂತರ ಹಲಶಿ–ಹಲಶಿವಾಡಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ಜಾತ್ರೋತ್ಸವವು ಭಕ್ತಿ ಹಾಗೂ ಉತ್ಸಾಹದ ವಾತಾವರಣದಲ್ಲಿ ಭವ್ಯವಾಗಿ ನಡೆಯಲಿದ್ದು, ಸಂಪೂರ್ಣ ಪ್ರದೇಶದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ. ದೀರ್ಘ ನಿರೀಕ್ಷೆಯ ಬಳಿಕ ನಡೆಯುತ್ತಿರುವ ಈ ಜಾತ್ರೆಯಿಂದ ಗ್ರಾಮಸ್ಥರು ಹಾಗೂ ಪಂಚಕ್ರೋಶಿಯ ಭಕ್ತರಲ್ಲಿ ವಿಶೇಷ ಉತ್ಸಾಹ ಕಂಡು ಬರುತ್ತಿದೆ.
ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪರಂಪರಾಗತ ಪೂಜಾ ವಿಧಿಗಳು, ಕೀರ್ತನೆ–ಭಜನೆ, ಹರಿನಾಮ ಸಪ್ತಾಹ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಾಗಿ ಜಾತ್ರಾ ಸಮಿತಿಯವರು ತಿಳಿಸಿದ್ದಾರೆ. ಜಾತ್ರೆಯ ಹಿನ್ನೆಲೆಯಲ್ಲಿ ದೇವಸ್ಥಾನ ಪ್ರದೇಶದ ಅಲಂಕಾರ, ಬೆಳಕು ವ್ಯವಸ್ಥೆ ಹಾಗೂ ಇತರೆ ಅಗತ್ಯ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ಸಮಿತಿಯವರು ಮಾಹಿತಿ ನೀಡಿದ್ದಾರೆ.
ಇದೀಗ, ಜಾತ್ರೆಯ ಸಂದರ್ಭದಲ್ಲಿ ಜೋಕಾಲಿಗಳು, ಜೂಲೆಗಳು ಹಾಗೂ ಇತರೆ ಮನರಂಜನಾ ಸಾಧನಗಳನ್ನು ಸ್ಥಾಪಿಸಲು, ಹಾಗು ವಿವಿಧ ಬಗೆಯ ಐಸ್ಕ್ರೀಂ, ಆಹಾರ ಪದಾರ್ಥಗಳು, ಮಿಠಾಯಿ ಅಂಗಡಿ ಗಳು ಜೋತೆ, ಆಟಿಕೆಗಳು, ಪೂಜಾ ಸಾಮಗ್ರಿಗಳು ಮತ್ತು ಇತರೆ ವಸ್ತುಗಳ ಸ್ಟಾಲ್ಗಳನ್ನು ಹಾಕಲು ಆಸಕ್ತ ವ್ಯಾಪಾರಸ್ಥರು ಜಾತ್ರಾ ಸಮಿತಿಯನ್ನು ಸಂಪರ್ಕಿಸಬೇಕು ಎಂದು ಕೋರಲಾಗಿದೆ. ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ವ್ಯಾಪಾರಿಗಳಿಗೆ ಇದು ಸುವರ್ಣಾವಕಾಶವಾಗಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.
ಸ್ಟಾಲ್ ಹಾಕಲು ಆಸಕ್ತರಾಗಿರುವ ವ್ಯಾಪಾರಸ್ಥರು ಸೋಮವಾರ (ತಾ. 23) ರಿಂದ ಬುಧವಾರ (ತಾ. 25)ರವರೆಗೆ ಸಮಿತಿಯನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಜಾತ್ರೆ ಪ್ರದೇಶದಲ್ಲಿ ಸ್ವಚ್ಛತೆ, ಭದ್ರತೆ ಹಾಗೂ ಸಂಚಾರ ವ್ಯವಸ್ಥೆಯ ಸಮರ್ಪಕ ವ್ಯವಸ್ಥೆ ಕೈಗೊಳ್ಳಲಾಗುವುದು. ಗ್ರಾಮಸ್ಥರು, ಸ್ವಯಂಸೇವಕರು ಹಾಗೂ ಆಡಳಿತದ ಸಹಕಾರದಿಂದ ಜಾತ್ರೆಯನ್ನು ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಸಲು ಎಲ್ಲಾ ಜನರು ನಿಯಮಗಳನ್ನು ಪಾಲಿಸಿ ಸಹಕರಿಸಬೇಕು ಎಂದು ಆಯೋಜಕರವರು ಮನವಿ ಮಾಡಿದ್ದಾರೆ.


