वाळू माफिया मुळे हलात्री नदी व रामगुरवाडी नाला दूषित; मनतुर्गा–शेडेगाळी ग्रामस्थ जिल्हाधिकाऱ्यांना दूषित पाण्याच्या बॉटल व निवेदन देणार.
खानापूर : हारूरी, मनतुर्गा आणि शेडेगाळी परिसरात हलात्री नदी व नदीला जोडणी असलेल्या अनेक नाल्यावर तसेच रामगुरवाडी नाल्यातून बेकायदेशीररीत्या मोठ्या प्रमाणात वाळू उपसा सुरू आहे. या अनियंत्रित वाळू उपशामुळे नदी–नाल्यांचे पाणी पूर्णत: दूषित झाले असून मानवासोबत जनावरही ते पाणी पिण्यास नकार देत आहेत. दूषित पाण्यामुळे शेतातील पिकांचेही मोठे नुकसान होऊ लागल्याने शेतकरी मोठ्या समस्येत सापडले आहेत.
स्थानिक ग्रामस्थांनी वाळूमाफियांना पाणी दूषित होऊ देऊ नका अशी विनंती केली असता उलट ग्रामस्थांनाच धमक्या, दमदाटी व अरेरावीची भाषा वापरली जात आहे. “कोणाकडेही तक्रार करा, आम्ही कोणालाही भीत नाही. आमच्या मागे पोलीस विभाग, जिऑलॉजिस्ट अधिकारी आणि लोकप्रतिनिधींचा पाठिंबा आहे,” अशा थेट शब्दांत वाळूमाफियांनी आव्हान दिल्यामुळे नागरिकांमध्ये संतापाची लाट निर्माण झाली आहे.
या पार्श्वभूमीवर मनतुर्गा, शेडेगाळी तसेच खानापूरमधील सामाजिक कार्यकर्त्यांनी जिल्हाधिकारी मोहम्मद रोशन यांची भेट घेऊन दूषित पाण्याने भरलेल्या बॉटलसह निवेदन देण्याचा निर्णय घेतला आहे.
दूषित पाण्याचा परिणाम मलप्रभा नदीपर्यंत….
हलात्री नदीचे दूषित पाणी पुढे मलप्रभा नदीत मिसळत असल्याने मलप्रभा नदीही प्रदूषित झाली आहे. शहराला पाणीपुरवठा करणाऱ्या जॅकवेल जवळच दूषित पाणी पोहोचल्यामुळे खानापूर शहरातील नागरिकांच्या आरोग्यावर गंभीर संकट निर्माण झाले आहे.
रामगुरवाडी नाल्याची स्थिती तर इतकी भयावह आहे की, “पावसाळ्यात डबक्यात साचलेले चिखलयुक्त पाणी देखील यापेक्षा चांगले असते,” अशा शब्दांत ग्रामस्थांनी परिस्थितीचे वर्णन केले आहे. जनावरांच्या पाण्याचा प्रश्न ऐरणीवर आला असून शनया गार्डन परिसरात कपडे धुण्यासाठी येणाऱ्या महिलांना सुद्धा याचा प्रचंड त्रास सहन करावा लागत आहे.
जबाबदार यंत्रणांचे दुर्लक्ष?…
स्थानिक नागरिकांच्या मते जिऑलॉजिस्ट खात्याचे अधिकारी संपूर्ण परिस्थितीची माहिती असूनही आर्थिक देवाण–घेवाण झाल्यामुळे वाळू माफियांना “वरदहस्त” आहे.
बिनपासी टिप्परद्वारे दिवसाढवळ्या वाळू वाहतूक सुरू आहे; तरीही जिऑलॉजिस्ट विभाग व पोलीस विभाग दोघेही दुर्लक्ष करत आहेत, अशी तीव्र नाराजी नागरिकांनी व्यक्त केली आहे.
नंदगड परिसरातही वाळूमाफियांचा हैदोस…
वाळूमाफियांची सक्रियता नंदगड परिसरातही वाढली असून तेथील नालेही मोठ्या प्रमाणात दूषित झाले आहेत. तिथेही टिप्परद्वारे अवैध वाहतूक सुरू असून त्वरित कारवाईची मागणी जोर धरीत आहे.
नागरिकांचा इशारा…
परिस्थिती सुधारली नाही तर पर्यावरण, आरोग्य व सार्वजनिक हितासाठी मोठे आंदोलन उभारण्याचा इशारा ग्रामस्थांनी दिला आहे. जिल्हाधिकाऱ्यांकडे दिल्या जाणाऱ्या निवेदनाद्वारे या प्रकरणी तत्काळ कारवाई, वाळू उपसा ठिकाणावर बंदी व या अन अधिकृत कृत्याला जबाबदार असणाऱ्या संबंधित अधिकाऱ्यांची चौकशी करण्यात यावी अशी मागणी करण्यात येणार आहे.
ಮರಳು ಮಾಫಿಯಾದಿಂದ ಹಾಲಾತ್ರಿ ನದಿ ಮತ್ತು ರಾಮಗುರವಾಡಿ ಕಾಲುವೆಯಲ್ಲಿ ನೀರು ದೂಷಿತ; ಮಂತುರ್ಗಾ–ಶೇಡೆಗಾಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂಷಿತ ನೀರಿನ ಜೊತೆ ಮನವಿ ಸಲ್ಲಿಸಲು ನಿರ್ಧಾರ.
ಖಾನಾಪುರ : ಹಾರೂರಿ, ಮಂತುರ್ಗಾ ಮತ್ತು ಶೇಡೆಗಾಳಿ ಭಾಗದಲ್ಲಿ ಹಾಲಾತ್ರಿ ನದಿ ಮತ್ತು ನದಿಗೆ ಸಂಪರ್ಕ ಹೊಂದಿರುವ ಅನೇಕ ಕಾಲುವೆಗಳಲ್ಲದೇ ರಾಮಗುರವಾಡಿ ಕಾಲುವೆಯಿಂದ ಅಕ್ರಮವಾಗಿ ಭಾರಿ ಪ್ರಮಾಣದಲ್ಲಿ ಮರಳು ಎತ್ತುವ ಕೇಲಸ (ತೋಡು) ನಡೆಯುತ್ತಿದೆ. ಈ ನಿಯಂತ್ರಣವಿಲ್ಲದ ಮರಳು ಎತ್ತುವ ಕೇಲಸದಿಂದ ನದಿ–ಕಾಲುವೆಗಳ ನೀರು ಸಂಪೂರ್ಣವಾಗಿ ಕುಲುಷಿತ ಗೊಂಡಿದ್ದು, ಮನುಷ್ಯರ ಜೊತೆಗೆ ಪಶುಗಳಿಗೆ ಆ ಆರೋಗ್ಯದ ದೃಷ್ಟಿಯಿಂದ ನೀರನ್ನು ಕುಡಿಯಲು ನಿರಾಕರಿಸುತ್ತಿವೆ. ಮಾಲಿನ್ಯಗೊಂಡ ನೀರಿನ ಪರಿಣಾಮವಾಗಿ ಹೊಲದಲ್ಲಿನ ಬೆಳೆಗಳಿಗೂ ದೊಡ್ಡ ಹಾನಿ ಸಂಭವಿಸಿದ್ದು ರೈತರು ಮಹತ್ತರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರಾಮಸ್ಥರು ಮರಳು ಮಾಫಿಯಾಗೆ ನೀರು ಕುಲುಷಿತಗೊಳಿಸಬೇಡಿ ಎಂದು ಮನವಿ ಮಾಡಿದಾಗ, ಬದಲಿಗೆ ಗ್ರಾಮಸ್ಥರ ಮೇಲೆಯೇ ಬೆದರಿಕೆ, ದರ್ಪದ ಭಾಷೆಯ ಪ್ರಯೋಗ ನಡೆಯುತ್ತಿದೆ. “ಯಾರ ಬಳಿಯೇ ದೂರು ಕೊಡಿ, ನಮಗೆ ಯಾರ ಭಯವಿಲ್ಲ. ನಮ್ಮ ಹಿಂದೆ ಪೊಲೀಸ್ ಇಲಾಖೆ, ಜಿಯಾಲಜಿಸ್ಟ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೆಂಬಲ ಇದೆ,” ಎಂದು ನೇರವಾಗಿ ಸವಾಲು ಹಾಕಿದ ಕಾರಣ ನಾಗರಿಕರಲ್ಲಿ ಆಕ್ರೋಶದ ಅಲೆ ಎದ್ದಿದೆ. ಈ ಹಿನ್ನೆಲೆ ಮಂತುರ್ಗಾ, ಶೇಡೆಗಾಳಿ ಹಾಗೂ ಖಾನಾಪುರದ ಸಮಾಜಮುಖಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಭೇಟಿ ಮಾಡಿ ಕುಲುಷಿತಗೊಂಡ ನೀರಿನಿಂದ ತುಂಬಿದ ಬಾಟಲಿಯೊಂದಿಗೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ.
ಮಾಲಿನ್ಯಗೊಂಡ ನೀರಿನ ಪರಿಣಾಮ ಮಲಪ್ರಭಾ ನದಿವರೆಗೆ….
ಹಲಾತ್ರಿ ನದಿಯ ಮಾಲಿನ್ಯಗೊಂಡ ನೀರು ಮುಂದಕ್ಕೆ ಮಲಪ್ರಭಾ ನದಿಯಲ್ಲಿ ಸೇರುತ್ತಿರುವುದರಿಂದ ಮಲಪ್ರಭಾ ನದಿಯೂ ಕಲುಷಿತವಾಗಿದೆ. ನಗರಕ್ಕೆ ನೀರು ಸರಬರಾಜು ಮಾಡುವ ಜಾಕ್ವೆಲ್ ಹತ್ತಿರವೇ ಮಾಲಿನ್ಯಗೊಂಡ ನೀರು ತಲುಪಿರುವುದರಿಂದ ಖಾನಾಪುರ ನಗರದಲ್ಲಿ ಜನರ ಆರೋಗ್ಯದ ಮೇಲೆ ಗಂಭೀರ ಸಂಕಟ ನಿರ್ಮಾಣವಾಗಿದೆ.
ರಾಮಗುರವಾಡಿ ಕಾಲುವೆಯ ಸ್ಥಿತಿ ಇನ್ನೂ ಭಯಾನಕವಾಗಿದ್ದು, “ಮಳೆಕಾಲದಲ್ಲಿ ಗುಂಡಿಯಲ್ಲಿ ಸೇರುವ ಕೆಸರು ನೀರೂ ಇದಕ್ಕಿಂತ ಒಳಿತು,” ಎಂದು ಗ್ರಾಮಸ್ಥರು ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಪಶುಗಳಿಗೆ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಶನಯಾ ಗಾರ್ಡನ್ ಪ್ರದೇಶಕ್ಕೆ ಬಟ್ಟೆ ತೊಳೆಯಲು ಬರುವ ಮಹಿಳೆಯರೂ ಪ್ರಚಂಡ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಜವಾಬ್ದಾರ ಯಂತ್ರಣೆಯ ನಿರ್ಲಕ್ಷ್ಯ?…
ಸ್ಥಳೀಯ ನಿವಾಸಿಗಳ ಪ್ರಕಾರ, ಜಿಯಾಲಜಿಸ್ಟ್ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ಪರಿಸ್ಥಿತಿಯ ಮಾಹಿತಿ ಇದ್ದರೂ ಆರ್ಥಿಕ ವ್ಯವಹಾರ ನಡೆಯುತ್ತಿರುವುದರಿಂದ ಮರಳು ಮಾಫಿಯಾಗೆ “ಹಸಿರು ನಿಶಾನೆ” ಸಿಕ್ಕಿದೆ. ಅನುಮತಿ ಇಲ್ಲದ ಟ್ರಿಪ್ಪರ್ಗಳ ಮೂಲಕ ಹಗಲು ಹೊತ್ತಲ್ಲೇ ಮರಳು ಸಾಗಾಟ ಮುಂದುವರಿದರೂ ಜಿಯಾಲಜಿಸ್ಟ್ ಇಲಾಖೆ ಮತ್ತು ಪೊಲೀಸ್ ಇಲಾಖೆ ಎರಡೂ ಕಣ್ಣುಮುಚ್ಚಿಕೊಂಡಿವೆ, ಎಂದು ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಂದಗಡ ಪ್ರದೇಶದಲ್ಲಿಯೂ ಮರಳುಮಾಫಿಯಾದ ಅಟ್ಟಹಾಸ…
ಮರಳು ಮಾಫಿಯಾಗಳ ಚಟುವಟಿಕೆ ನಂದಗಡ ಪ್ರದೇಶದಲ್ಲಿಯೂ ಹೆಚ್ಚಾಗಿದ್ದು, ಅಲ್ಲಿನ ಕಾಲುವೆಗಳೂ ಭಾರೀ ಪ್ರಮಾಣದಲ್ಲಿ ಮಾಲಿನ್ಯಗೊಂಡಿವೆ. ಅಲ್ಲಿ ಕೂಡ ಟ್ರಿಪ್ಪರ್ಗಳ ಮೂಲಕ ಅಕ್ರಮ ಸಾಗಾಟ ನಡೆಯುತ್ತಿದ್ದು ತ್ವರಿತ ಕ್ರಮಕ್ಕಾಗಿಯೇ ಬಲವಾದ ಆಗ್ರಹ ವ್ಯಕ್ತವಾಗುತ್ತಿದೆ.
ನಾಗರಿಕರ ಎಚ್ಚರಿಕೆ…
ಪರಿಸ್ಥಿತಿ ಸುಧಾರಿಸದಿದ್ದರೆ ಪರಿಸರ, ಆರೋಗ್ಯ ಮತ್ತು ಸಾರ್ವಜನಿಕ ಹಿತಕ್ಕಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗೆ ನೀಡಲಿರುವ ಮನವಿಯಲ್ಲಿ ಈ ಪ್ರಕರಣದಲ್ಲಿ ತಕ್ಷಣ ಕ್ರಮ, ಮರಳು ಊಳಿಕೆ ಸ್ಥಳದಲ್ಲಿ ನಿಷೇಧ ಹಾಗೂ ಈ ಅಕ್ರಮಕ್ಕೆ ಜವಾಬ್ದಾರ ಅಧಿಕಾರಿಗಳ ತನಿಖೆ ನಡೆಸುವಂತೆ ಆಗ್ರಹಿಸಲಾಗುತ್ತಿದೆ.

