
हुबळी-दादर रेल्वे आता खानापूर स्थानकावर थांबणार : 15 सप्टेंबर रोजी केंद्रीय रेल्वे राज्यमंत्री व खासदारांच्या हस्ते योजनेचा शुभारंभ
खानापूर (प्रतिनिधी): खानापूर रेल्वे स्थानकावर प्रवासी वर्गाची मोठी मागणी पूर्ण होत असून, हुबळी-दादर (मुंबई) रेल्वे आता कायमस्वरूपी खानापूर रेल्वे स्थानकावर थांबणार आहे. या योजनेचा व इतर विकासात्मक कामांचा भूमिपूजन शुभारंभ सोमवार दिनांक 15 सप्टेंबर २०२५ रोजी सायंकाळी 4.00 वाजता, केंद्रीय रेल्वे राज्यमंत्री व्ही. सोमन्ना व खासदार विश्वेश्वर हेगडे-कागेरी यांच्या हस्ते होणार आहे. सर्वांनी मोठ्या संख्येने उपस्थित राहण्याचे आवाहन खानापूर तालुक्याचे आमदार विठ्ठल हलगेकर व भाजपाचे जिल्हा उपाध्यक्ष प्रमोद कोचेरी तसेच तालुका अध्यक्ष बसवराज सानिकोप, जनरल सेक्रेटरी गुंडू तोपिनकट्टी, मल्लाप्पा मारीहाळ यांनी केले आहे.
या कार्यक्रमावेळी खानापूर तालुक्यातील विविध विकासात्मक प्रकल्पांचेही भूमिपूजन होणार आहे. यामध्ये खानापूर-असोगा मार्गावरील भुयारी मार्ग, तसेच रेल्वे स्थानकाच्या पलीकडील प्लॅटफॉर्मवर प्रवाशांना ऊन व पावसापासून संरक्षण मिळावे यासाठी शेड उभारणीचे काम यांचा समावेश आहे. या सर्व योजनांचे उद्घाटन व भूमिपूजन रेल्वे राज्यमंत्री व खासदारांच्या उपस्थितीत पार पडणार आहे.
सध्या खानापूर स्थानकावरून मुंबईकडे जाण्यासाठी केवळ पाँडेचेरी-दादर व दादर-पाँडेचेरी रेल्वेच आठवड्यातून तीन वेळा थांबते. त्यामुळे प्रवाशांना उर्वरित दिवशी बेळगावला जाऊन रेल्वे पकडावी लागत होती. त्यामुळे नागरिक व प्रवासी वर्गाला मोठ्या गैरसोयीचा सामना करावा लागत होता.
खासदार विश्वेश्वर हेगडे-कागेरी यांच्या सातत्यपूर्ण पाठपुराव्यामुळे ही दीर्घकालीन मागणी पूर्ण झाली असून, हुबळी-दादर (मुंबई) रेल्वे कायमस्वरूपी खानापूर स्थानकावर थांबणार आहे. या निर्णयामुळे प्रवासी वर्गातून मोठा आनंद व्यक्त होत आहे.
खानापूर तालुक्याचे आमदार विठ्ठल हलगेकर, तसेच भाजप जिल्हा उपाध्यक्ष प्रमोद कोचेरी व तालुका पदाधिकारी यांनी दिलेल्या माहितीनुसार, या प्रकल्पांमुळे खानापूर रेल्वे स्थानकाचा कायापालट होणार असून प्रवाशांना दर्जेदार सुविधा उपलब्ध होतील.
या महत्त्वपूर्ण योजनेसाठी प्रयत्न करून दाखवल्याबद्दल खानापूर तालुक्यातील नागरिकांनी खासदार विश्वेश्वर हेगडे-कागेरी यांचे मन:पूर्वक आभार मानले आहेत.
ಹುಬ್ಬಳ್ಳಿ-ದಾದರ್ ರೈಲು ಈಗ ಖಾನಾಪುರ ನಿಲ್ದಾಣದಲ್ಲಿ ನಿಲ್ಲಲಿದೆ : ಸೆಪ್ಟೆಂಬರ್ 15ರಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಹಾಗೂ ಸಂಸದರಿಂದ ಯೋಜನೆಗೆ ಚಾಲನೆ.
ಖಾನಾಪುರ (ಪ್ರತಿನಿಧಿ): ಖಾನಾಪುರ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆ ಈಡೇರಿದ್ದು, ಹುಬ್ಬಳ್ಳಿ-ದಾದರ್ (ಮುಂಬೈ) ರೈಲು ಇನ್ನೂ ಮುಂದೆ ಖಾನಾಪುರ ನಿಲ್ದಾಣದಲ್ಲಿ ನಿಲ್ಲಲಿದೆ. ಈ ಮಹತ್ವದ ಯೋಜನೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜನೆ ಮತ್ತು ಉದ್ಘಾಟನಾ ಕಾರ್ಯಕ್ರಮವು ಸೋಮವಾರ 15 ಸೆಪ್ಟೆಂಬರ್ 2025 ರಂದು ಸಂಜೆ 4.00 ಗಂಟೆಗೆ, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮನ, ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಇವರಿಂದ ನೆರವೇರಗಿದೆ .
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಖಾನಾಪುರ ಜನ ಪ್ರಿಯ ಶಾಸಕರಾದ ವಿಠ್ಠಲ್ ಹಲಗೇಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮುೋದ ಕೊಚೇರಿ, ತಾಲೂಕು ಅಧ್ಯಕ್ಷ ಬಸವರಾಜ ಸಾನಿಕೋಪ್ಪ, ಜನರಲ್ ಸೆಕ್ರೆಟರಿ ಗುಂಡು ತೋಪಿನಕಟ್ಟಿ, ಮಲ್ಲಪ್ಪ ಮಾರಿಹಾಳ ಅವರು ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಖಾನಾಪುರ ತಾಲೂಕಿನ ವಿವಿಧ ಅಭಿವೃದ್ಧಿ ಯೋಜನೆಗಳ ಭೂಮಿ ಪೂಜನೆಯೂ ನಡೆಯಲಿದೆ. ಅವುಗಳಲ್ಲಿ ಖಾನಾಪುರ-ಅಸೊಗಾ ಮಾರ್ಗದ ಅಂಡರ್ ಪಾಸ್ ನಿರ್ಮಾಣ, ಹಾಗೂ ರೈಲು ನಿಲ್ದಾಣದ ಬದಿಯ ಫ್ಲಾಟ್ ಫಾರಂ ಮೇಲೆ ಪ್ರಯಾಣಿಕರಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ದೊರಕಲು ಶೆಡ್ ನಿರ್ಮಾಣ ಸೇರಿದಂತೆ ಹಲವು ಕೆಲಸಗಳಿವೆ.
ಪ್ರಸ್ತುತ ಖಾನಾಪುರ ನಿಲ್ದಾಣದಲ್ಲಿ ಮುಂಬೈ ಕಡೆ ಹೋಗುವ ಪ್ರಯಾಣಿಕರಿಗೆ ಕೇವಲ ಪಾಂಡೆಚೇರಿ-ದಾದರ್ ಹಾಗೂ ದಾದರ್-ಪಾಂಡೆಚೇರಿ ರೈಲು ಮಾತ್ರ ವಾರದಲ್ಲಿ ಮೂರು ಬಾರಿ ನಿಲ್ಲುತ್ತಿತ್ತು. ಇದರಿಂದ ಇತರೆ ದಿನಗಳಲ್ಲಿ ಪ್ರಯಾಣಿಕರು ಬೇಳಗಾವಿಗೆ ತೆರಳಿ ರೈಲು ಹಿಡಿಯಬೇಕಾದ ಅನಿವಾರ್ಯತೆ ಇತ್ತು. ಈ ದೀರ್ಘಕಾಲದ ಸಮಸ್ಯೆಯನ್ನು ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರ ನಿರಂತರ ಪ್ರಯತ್ನದಿಂದ ಪರಿಹರಿಸಲಾಗಿದ್ದು, ಹುಬ್ಬಳ್ಳಿ-ದಾದರ್ ರೈಲು ಶಾಶ್ವತವಾಗಿ ಖಾನಾಪುರ ನಿಲ್ದಾಣದಲ್ಲಿ ನಿಲ್ಲುವಂತೆ ಮಾಡಲಾಗಿದೆ.
ಈ ನಿರ್ಣಯದಿಂದ ಪ್ರಯಾಣಿಕರಲ್ಲಿ ಆನಂದದ ವಾತಾವರಣ ಉಂಟಾಗಿದೆ. ಖಾನಾಪುರ ಶಾಸಕರಾದ ವಿಠ್ಠಲ್ ಹಲಗೇಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮುೋದ ಕೊಚೇರಿ ಹಾಗೂ ತಾಲೂಕು ಪದಾಧಿಕಾರಿಗಳ ಪ್ರಕಾರ, ಈ ಯೋಜನೆಗಳಿಂದ ಖಾನಾಪುರ ರೈಲು ನಿಲ್ದಾಣದ ರೂಪವೇ ಬದಲಾಗಲಿದ್ದು, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳು ಲಭ್ಯವಾಗಲಿವೆ.
ಈ ಮಹತ್ವದ ಯೋಜನೆಗಾಗಿ ಶ್ರಮ ವಹಿಸಿದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರಿಗೆ ಖಾನಾಪುರ ತಾಲೂಕಿನ ನಾಗರಿಕರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
