
गणेश विसर्जनासाठी प्रशासनाची जय्यत तयारी : गुंडगिरीस कडक प्रतिबंध करण्याची मागणी.
खानापूर : आज शनिवार दि. 6 सप्टेंबर रोजी अनंत चतुर्दशी निमित्ताने गणेश विसर्जन पार पडणार असून यासाठी खानापूर नगरपंचायतीसह पोलिस प्रशासनाने कडक बंदोबस्त ठेवला आहे.
शहरातील श्री मलप्रभा नदी घाटावर विसर्जनासाठी खानापूर शहरासोबतच ग्रामीण भागातील मच्छे, पिरणवाडी, वाघवडे, झाडशहापूर आदी गावांमधूनही गणेश मूर्ती आणल्या जाणार आहेत. यामुळे घाट परिसरात मोठी गर्दी होणार असून नागरिकांच्या सुरक्षेसाठी प्रशासनाने जय्यत तयारी केली आहे.
नगरपंचायतीतर्फे घाटावर क्रेनची व्यवस्था करण्यात आली असून सार्वजनिक गणेश मूर्तींचे विसर्जन याच क्रेनद्वारे होणार आहे. खानापूर शहर व उपनगरांमधील रूमेवाडी, गांधीनगर, हलकर्णी तसेच शेजारच्या गावांतील मंडळांच्या मूर्तींचे विसर्जन श्री मलप्रभा नदीत केले जाणार आहे.
गेल्या काही वर्षांपासून शेजारील बेळगाव तालुक्यातील झाडशापुर, मच्छे, वाघवडे, पिरणवाडी आदी गावांतील मंडळे देखील खानापूर येथे विसर्जनासाठी येत असल्याने घाट परिसर अधिकच गजबजतो. यावेळी कायदा व सुव्यवस्थेच्या दृष्टीने पोलिसांनी घाट परिसरात सीसीटीव्ही बसवले असून विसर्जन मिरवणुकीवर सतत लक्ष ठेवले जाणार आहे.
नागरिकांकडून वारंवार होत असलेल्या मागणीनुसार, काही युवकांकडून विसर्जन मिरवणुकीदरम्यान गांजा सेवन करून गुंडगिरी केली जात असल्याने पोलिसांनी अशा प्रवृत्तीवर कठोर कारवाई करावी, अशी अपेक्षा व्यक्त करण्यात आली आहे.
👉 प्रशासन व पोलिसांचा विशेष भर : शांततेत व सुरक्षिततेत गणेश विसर्जन पार पडावे.
ಗಣೇಶ ವಿಸರ್ಜನೆಗೆ ಆಡಳಿತದ ಭರ್ಜರಿ ಸಿದ್ಧತೆ : ಗುಂಡಾಗಿರಿ ಮಾಡುವವರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಬೇಡಿಕೆ
ಖಾನಾಪುರ : ಇಂದು ಶನಿವಾರ ಸೆ. 6 ಅನಂತ ಚತುರ್ಧಶಿ ಅಂಗವಾಗಿ ಗಣೇಶ ವಿಸರ್ಜನೆ ನಡೆಯಲಿದ್ದು, ಇದಕ್ಕಾಗಿ ಖಾನಾಪುರ ನಗರ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದೆ.
ನಗರದ ಶ್ರೀ ಮಲಪ್ರಭಾ ನದಿ ಘಾಟ್ ಪ್ರದೇಶದಲ್ಲಿ ಖಾನಾಪುರ ನಗರ ಮಾತ್ರವಲ್ಲದೆ ಮಚ್ಚೆ, ಪಿರಣವಾಡಿ, ವಾಘವಡೆ, ಝಾಡಶಾಪೂರ ಸೇರಿದಂತೆ ಗ್ರಾಮೀಣ ಭಾಗಗಳಿಂದಲೂ ಗಣೇಶ ಮೂರ್ತಿಗಳನ್ನು ತರಲಾಗುತ್ತಿದೆ. ಇದರಿಂದ ಘಾಟ್ ಬಳಿ ಭಾರಿ ಜನಸ್ತೋಮ ಸೇರುವ ನಿರೀಕ್ಷೆ ಇದೆ. ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಆಡಳಿತವು ಭರ್ಜರಿ ಸಿದ್ಧತೆ ಕೈಗೊಂಡಿದೆ.
ನಗರ ಪಂಚಾಯಿತಿ ವತಿಯಿಂದ ಘಾಟ್ನಲ್ಲಿ ಕ್ರೇನ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಇದೇ ಕ್ರೇನ್ ಮೂಲಕ ನಡೆಯಲಿದೆ. ಖಾನಾಪುರ ನಗರ ಹಾಗೂ ಉಪನಗರದ ರೂಮೇವಾಡಿ, ಗಾಂಧೀನಗರ, ಹಲಕರ್ಣಿ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳ ಮೂರ್ತಿಗಳೂ ಮಲಪ್ರಭಾ ನದಿಯಲ್ಲಿ ವಿಸರ್ಜನೆಗೊಳ್ಳಲಿವೆ.
ಕಳೆದ ಕೆಲವು ವರ್ಷಗಳಿಂದ ಬೆಳಗಾವಿ ತಾಲೂಕಿನ ಮಚ್ಚೆ, ಝಾಡಶಾಪೂರ, ವಾಘವಡೆ, ಪಿರಣವಾಡಿ ಮುಂತಾದ ಗ್ರಾಮಗಳ ಮಂಡಳಿಗಳೂ ಖಾನಾಪುರದಲ್ಲೇ ವಿಸರ್ಜನೆಗಾಗಿ ಬರುತ್ತಿದ್ದು, ಇದರಿಂದ ಘಾಟ್ ಪ್ರದೇಶ ಇನ್ನಷ್ಟು ಗಿಜಿಗುಡುತ್ತಿದೆ. ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಘಾಟ್ ಬಳಿ ಸಿಸಿಟಿವಿ ಅಳವಡಿಸಿದ್ದು, ವಿಸರ್ಜನಾ ಮೆರವಣಿಗೆಗಳ ಮೇಲೆ ಕಣ್ಣಿಟ್ಟಿರಲಿದೆ.
ನಾಗರಿಕರ ಬೇಡಿಕೆಯಂತೆ, ಕೆಲವು ಯುವಕರು ವಿಸರ್ಜನೆ ಮೆರವಣಿಗೆಯ ಸಮಯದಲ್ಲಿ ಗಾಂಜಾ ಸೇವನೆ ಮಾಡಿ ಗುಂಡಾಗಿರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಅಸಭ್ಯ ಪ್ರವೃತ್ತಿಗಳ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ವ್ಯಕ್ತವಾಗಿದೆ.
👉 ಆಡಳಿತ ಹಾಗೂ ಪೊಲೀಸರ ವಿಶೇಷ ಗಮನ : ಶಾಂತಿಯುತ ಹಾಗೂ ಸುರಕ್ಷಿತ ರೀತಿಯಲ್ಲಿ ಗಣೇಶ ವಿಸರ್ಜನೆ ನೆರವೇರಲಿ.
