
नंदगड परिसरात गणेश मूर्तींच्या तयारीला जोरदार सुरुवात; नंदकुमार पाटील यांची शेडू मातीच्या मुर्त्यांना मोठी मागणी
नंदगड (ता. खानापूर): केवळ वीस दिवसांवर येऊन ठेपलेला गणेश चतुर्थीचा पवित्र सण लक्षात घेता नंदगड परिसरात गणेश मूर्ती तयार करण्याच्या कामास मोठा वेग आला आहे. गणरायाच्या आगमनाची उत्कंठा आणि भक्तीभाव सर्वत्र दिसून येत असून, अनेक भाविकांनी आत्ताच मूर्त्यांचे बुकिंग सुरू केले आहे.
खैरवाड, कसबा नंदगड, हलगा, हत्तरवाड, सागरे आदी गावांमध्ये मूर्ती बनवण्याचे काम जोरात सुरू असून, काही कलाकार कोल्हापूर, सांगली, सातारा भागांतून प्लास्टर ऑफ पॅरिसच्या (पीओपी) मूर्ती आणून त्यांना रंग देण्याचे काम करत आहेत.
या पार्श्वभूमीवर कसबा नंदगड येथील नंदकुमार पाटील आणि त्यांचे कुटुंबीय विशेष उल्लेखनीय ठरत आहेत. मराठी समाजात वावरणारे पाटील हे मूळचे कुंभार समाजातील नसतानाही गेली २०–३० वर्षे शेडू मातीच्या मूर्ती बनवण्याचे काम अत्यंत श्रद्धेने करत आहेत. पूर्वजांपासून चालत आलेली परंपरा त्यांनी आजही जपलेली असून, त्यांनी या पारंपरिक कलेचा वारसा पुढील पिढीकडे सोपवण्याचा निर्धार केला आहे.
पाटील हे संपूर्ण मूर्ती स्वहस्ते बनवत असून, केवळ घरगुती नव्हे तर सार्वजनिक गणेशोत्सवासाठी लागणाऱ्या मोठ्या मूर्ती देखील ते तयार करतात. आजच्या यांत्रिक युगात शेडू मातीची मूर्ती बनवणे हे कठीण कार्य असले तरी, ही कला अवगत असल्यास कोणतीही अडचण येत नाही, असे पाटील सांगतात. “आम्ही कधीच प्लास्टरच्या मूर्त्यांना प्राधान्य देत नाही, आमची कला म्हणजे शेडू मातीची मूर्ती हेच आमचे वैशिष्ट्य आहे,” असे ते अभिमानाने सांगतात.
यंदा सुमारे ३०० ते ४०० मूर्ती त्यांनी स्वतः तयार केल्या असून, त्यांच्या मूर्तींसाठी परिसरातून मोठी मागणी आहे. स्थानिक पातळीवर त्यांना कामगारांची मदत देखील मिळत आहे. पर्यावरणपूरक, आकर्षक आणि पारंपरिकतेचा ठसा असलेल्या या मूर्ती गणेश भक्तांसाठी विशेष आकर्षण ठरत आहेत.
ನಂದಗಡ ಭಾಗದಲ್ಲಿ ವೇಗ ಪಡೆದು ಗಣೇಶ ಮೂರ್ತಿಗಳ ತಯಾರಿಕೆ: ನಂದಕುಮಾರ ಪಾಟೀಲ ಅವರ ಶೇಡು ಮಣ್ಣಿನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ
ನಂದಗಡ (ಖಾನಾಪುರ ತಾ.): ಶ್ರಾವಣ ಮಾಸ ಮುಗಿದ ಮೇಲೆ ಆಗಮಿಸುತ್ತಿರುವ ಪವಿತ್ರ ಗಣೇಶ ಚತುರ್ಥಿ ಹಬ್ಬಕ್ಕೆ ಕೇವಲ ಇಪ್ಪತ್ತೇ ದಿನಗಳು ಉಳಿದಿರುವ ಕಾರಣ, ನಂದಗಡ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಗಣೇಶ ಮೂರ್ತಿಗಳ ತಯಾರಿ ಜೋರಾಗುತ್ತಿದೆ. ಗಣೇಶನ ಆಗಮನದ ಉತ್ಸುಕತೆ ಮತ್ತು ಭಕ್ತಿಭಾವ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದು, ಹಲವರು ಈಗಿನಿಂದಲೇ ಮೂರ್ತಿಗಳ ಬುಕ್ಕಿಂಗ್ ಪ್ರಾರಂಭಿಸಿದ್ದಾರೆ.
ಖೈರವಾಡ, ಕಸಬಾ ನಂದಗಡ, ಹಲಗಾ, ಹತ್ತರವಾಡ, ಸಾಗರೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮೂರ್ತಿ ತಯಾರಿಕೆಯ ಕೆಲಸ ವೇಗ ಪಡೆದುಕೊಳ್ಳುತ್ತಿದ್ದು, ಕೆಲವು ಕಲಾವಿದರು ಕೊಲ್ಹಾಪುರ, ಸಾಂಗ್ಲಿ, ಸಾತಾರಾ ಭಾಗಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳನ್ನು ತಂದು ಬಣ್ಣ ಹಚ್ಚುವ ಕೆಲಸದಲ್ಲಿ ತೊಡಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕಸಬಾ ನಂದಗಡದ ನಂದಕುಮಾರ ಪಾಟೀಲ ಹಾಗೂ ಅವರ ಕುಟುಂಬ ಮೂರ್ತಿಗಳ ತಯಾರಿಕೆಯಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಕುಂಭಾರ ಸಮಾಜಕ್ಕೆ ಸೇರದಿದ್ದರೂ ಕಳೆದ ೨೦–೩೦ ವರ್ಷಗಳಿಂದ ಶ್ರದ್ಧೆಯಿಂದ ಶೇಡು ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವ ಪಾಟೀಲ ಕುಟುಂಬವು, ತಮ್ಮ ಪೂರ್ವಜರಿಂದ ಬಂದಿರುವ ಈ ಪರಂಪರೆಯ ಕಲೆಯನ್ನು ಇನ್ನೂ ಸಹ ಜಾಗೃತವಾಗಿ ಉಳಿಸಿಕೊಂಡಿದೆ. ಮುಂದೆ ಮುಂದಿನ ತಲೆಮಾರಿಗೆ ಈ ಕೌಶಲ್ಯವನ್ನು ಒಪ್ಪಿಸಲು ಅವರು ಬದ್ಧರಾಗಿದ್ದಾರೆ.
ಪಾಟೀಲ ಅವರು ಪ್ರತಿಯೊಂದು ಮೂರ್ತಿಯನ್ನು ಸ್ವಹಸ್ತವಾಗಿ ತಯಾರಿಸುತ್ತಿದ್ದು, ಕೇವಲ ಮನೆಗಳಲ್ಲಿ ಪೂಜಿಸುವ ಮೂರ್ತಿಗಳಲ್ಲದೆ ಸಾರ್ವಜನಿಕ ಗಣೇಶೋತ್ಸವಗಳಿಗಾಗಿ ಅಗಾಧ ಗಾತ್ರದ ಮೂರ್ತಿಗಳನ್ನೂ ಸಿದ್ಧಪಡಿಸುತ್ತಿದ್ದಾರೆ. “ಇಂದಿನ ಯಾಂತ್ರಿಕ ಯುಗದಲ್ಲಿ ಶೇಡು ಮಣ್ಣಿನ ಮೂರ್ತಿ ತಯಾರಿಕೆ ಕಷ್ಟದ ಕೆಲಸವಾದರೂ, ಈ ಕಲೆ ಕಲಿತಿದ್ದರೆ ಯಾವುದೇ ಅಡಚಣೆ ಇರುವುದಿಲ್ಲ,” ಎಂದು ಅವರು ಹೇಳುತ್ತಾರೆ. “ನಾವು ಎಂದಿಗೂ ಪಿಒಪಿ ಮೂರ್ತಿಗಳಿಗೆ ಆದ್ಯತೆ ನೀಡುವುದಿಲ್ಲ; ಶೇಡು ಮಣ್ಣಿನ ಮೂರ್ತಿಯೇ ನಮ್ಮ ಕಲೆಯ ಹೆಗ್ಗಳಿಕೆ” ಎಂದು ಅವರು ಹೆಮ್ಮೆಪಡುವಂತೆ ಹೇಳಿದ್ದಾರೆ.
ಈ ವರ್ಷ ಸುಮಾರು ೩೦೦ ರಿಂದ ೪೦೦ ಮೂರ್ತಿಗಳನ್ನು ಅವರು ತಯಾರಿಸಿದ್ದು, ಈ ಮೂರ್ತಿಗಳಿಗೆ ನಂದಗಡ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಭಾರೀ ಬೇಡಿಕೆ ವ್ಯಕ್ತವಾಗಿದೆ. ಸ್ಥಳೀಯವಾಗಿ ಅವರಿಗೆ ಕೆಲವರು ಸಹಕಾರ ನೀಡುತ್ತಿದ್ದಾರೆ. ಪರಿಸರ ಸ್ನೇಹಿ, ಆಕರ್ಷಕ ಹಾಗೂ ಪರಂಪರೆ ಪ್ರತಿಬಿಂಬಿಸುವ ಈ ಮೂರ್ತಿಗಳು ಗಣೇಶ ಭಕ್ತರಿಗೆ ಪ್ರಮುಖ ಆಕರ್ಷಣೆಯಾಗಿದೆ.
