वनसप्ताह निमित्त 7 किलोमीटर ट्रेकिंग, आमदार, सीसीएफ, डीएफओ, एसीएफ यांचा समावेश.
खानापूर ; वनसप्ताह निमित्त वनखात्याच्या वतीने शिरोलीवाडा ते भिमगड अभयारण्य (हेमाडगा) पर्यंत सात किलोमीटर ट्रेकिंग करण्यात आले. यामध्ये आमदार विठ्ठलराव हलगेकर, काँग्रेसचे अध्यक्ष ईश्वर घाडी, महांतेश राऊत, सीसीएफ चव्हाण साहेब, डीएफओ मरेकर राजासाहेब, एसीएफ सुनिता निमबर्गी, वन खात्याचे अधिकारी व कर्मचारी तसेच पत्रकार मंडळी, लायन्स क्लब व इलाईट अकॅडमीचे सदस्य, शिरोली ग्रामपंचायतचे अध्यक्ष नीलम मादार, ग्रामपंचायत सदस्य कृष्णा गुरव, दीपक गवाळकर विनायक मुतगेकर, नारायण काटगाळकर व आदी सदस्य तसेच शाळेचे विद्यार्थी विद्यार्थिनी व काही धावपटू सहभागी झाले होते.
यावेळी सात किलोमीटर ट्रेकिंग मध्ये भाग घेतलेल्या सर्व नागरिकांना प्रशस्तीपत्र देण्यात आले. या ट्रेकिंग मध्ये भाग घेतलेल्या सर्वांना टी-शर्ट देण्यात आले होते. जंगल भागातून गेलेल्या रस्त्यावरून व निसर्ग रम्य वातावरणातून चालताना सर्वांमध्ये उत्साह ओसंडून वाहत होता. सात किलोमीटर अंतर कसे पार झाले. हे समजलेच नाही. ट्रेकिंग मध्ये भाग घेतलेल्या नागरिकांमध्ये उत्साह दिसून येत होता. सात किलोमीटर अंतर पार झाल्यानंतर, सर्वांना वन खात्याकडून अल्पोहार देण्यात आला.
ಅರಣ್ಯ ಸಪ್ತಾಹದ ಸಂದರ್ಭದಲ್ಲಿ 7 ಕಿಮೀ ಟ್ರೆಕ್ಕಿಂಗ್. ಶಾಸಕ, ಸಿಸಿಎಫ್, ಡಿಎಫ್ ಒ, ಎಸಿಎಫ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಖಾನಾಪುರ; ಅರಣ್ಯ ಸಪ್ತಾಹದ ನಿಮಿತ್ತ ಅರಣ್ಯ ಇಲಾಖೆ ವತಿಯಿಂದ ಶಿರೋಳಿವಾಡದಿಂದ ಭೀಮಗಡ ಅಭಯಾರಣ್ಯದವರೆಗೆ (ಹೇಮಡ್ಗಾ) ಏಳು ಕಿಲೋಮೀಟರ್ ಟ್ರೆಕ್ಕಿಂಗ್ ನಡೆಸಲಾಯಿತು. ಶಾಸಕ ವಿಠ್ಠಲರಾವ್ ಹಲಗೇಕರ, ಕಾಂಗ್ರೆಸ್ ಅಧ್ಯಕ್ಷ ಈಶ್ವರ ಘಾಡಿ, ಮಹಾಂತೇಶ ರಾವುತ್, ಸಿಸಿಎಫ್ ಚವ್ಹಾಣ ಸಾಹೇಬ, ಡಿಎಫ್ಒ ಮರೇಕರ ರಾಜಾಸಾಹೇಬ, ಎಸಿಎಫ್ ಸುನೀತಾ ನಿಂಬರಗಿ, ಅರಣ್ಯ ಇಲಾಖೆಯ ಅಧಿಕಾರಿಗಳು ಲೈಲಾ ಸಕ್ಕರೆ ಕಾರ್ಖಾನೆಯ ಎಮ ಡಿ ಸದಾನಂದ ಪಾಟೀಲ ಹಾಗೂ ಸಿಬ್ಬಂದಿ ಹಾಗೂ ಪತ್ರಕರ್ತರು, ಲಯನ್ಸ್ ಕ್ಲಬ್ ಸದಸ್ಯರು, ಎಲೈಟ್ ಅಕಾಡೆಮಿ ಸದಸ್ಯರು, ಶಿರೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಂ. ಮಾದರ, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣ ಗುರವ, ದೀಪಕ್ ಗಾಂವಕರ್ ಹಾಗೂ ಇತರೆ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಕೆಲವು ಓಟಗಾರರು ಇ ಸಂದರ್ಭದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಏಳು ಕಿಲೋಮೀಟರ್ ಪಾದಯಾತ್ರೆಯಲ್ಲಿ ಭಾಗವಹಿಸಿದ ಎಲ್ಲ ನಾಗರಿಕರಿಗೆ ಪ್ರಮಾಣ ಪತ್ರ ನೀಡಲಾಯಿತು. ಈ ಚಾರಣದಲ್ಲಿ ಭಾಗವಹಿಸಿದ ಎಲ್ಲರಿಗೂ ಟೀ ಶರ್ಟ್ ನೀಡಲಾಯಿತು. ಸುಂದರ ಪ್ರಕೃತಿಯಿಂದ ಸುತ್ತುವರಿದ ಕಾಡಿನ ರಸ್ತೆಯಲ್ಲಿ ಸಾಗುವಾಗ ಎಲ್ಲರ ಉತ್ಸಾಹ ಉಕ್ಕಿ ಹರಿಯುತ್ತಿತ್ತು. ಸಂಭ್ರಮದ ವಾತಾವರಣದಲ್ಲಿ ಏಳು ಕಿಲೋಮೀಟರ್ ದೂರವನ್ನು ಕ್ರಮಿಸಿದನ್ನು ಯಾರಿಗೂ ತಿಳಿದು ಬಂದಿಲ್ಲ. ಚಾರಣದಲ್ಲಿ ಪಾಲ್ಗೊಂಡಿದ್ದ ನಾಗರಿಕರಲ್ಲಿ ಉತ್ಸಾಹ ಎದ್ದು ಕಾಣುತ್ತಿತ್ತು. ಏಳು ಕಿಲೋಮೀಟರ್ ಕ್ರಮಿಸಿದ ನಂತರ ಅರಣ್ಯ ಇಲಾಖೆ ವತಿಯಿಂದ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.