
मध्यप्रदेश, महाराष्ट्र, कर्नाटक, राज्यात वाघाची शिकार करणारा कुख्यात शिकारी वनविभागाच्या ताब्यात.
एका मोठ्या कारवाईत कुख्यात वाघिणीची शिकार करणाऱ्या चिका उर्फ कृष्णा पाटेपवार बेळगाव वनविभागाच्या वन अधिकाऱ्यांनी अटक केली आहे. या वर्षी जुलै महिन्यात बेळगाव विभागातील खानापुर तालुक्यातील स्थानिक जळगा झोनमध्ये चंदनाची झाडे चोरीला गेली होती. या प्रकरणाची गांभीर्याने दखल घेत, खानापुर उपविभागाच्या वन अधिकाऱ्यांनी आरोपीचा शोध घेण्यासाठी सापळा रचला होता. काही दिवसांपूर्वी बेळगाव शहराजवळील कणबर्गी जवळील कलकांब गावाजवळ आरोपी लपून बसला असल्याची खात्रीलायक माहिती मिळाली त्या माहितीच्या आधारे, खानापुर झोनचे अधिकारी व कर्मचाऱ्यांच्या पथकाने एका मंडपावर छापा टाकून मंडपातून चंदनाचे तुकडे व धारदार शस्त्रे जप्त केली. आणि एकाला अटक करण्यात आली. खानापूर उपविभागाचे सहाय्यक वनसंरक्षक डॉ.संतोष चव्हाण यांच्या नेतृत्वाखालील पथकाने ताब्यात घेतलेला हा आरोपी मध्य प्रदेशातील असल्याचा संशय व्यक्त करून, त्याची सखोल चौकशी केली. या अटकेतील व्यक्तीचे नाव मध्य प्रदेशातील दामो जिल्ह्यातील सगोनी गावातील चिका उर्फ कृष्णा पाटेपवार असे आहे. आणि तो देशातील एक कुख्यात वाघ शिकारी आहे. या आरोपीने यापूर्वीही महाराष्ट्र राज्यातील अमरावती जिल्ह्यातील मेळघाट जंगलात वाघ आणि अस्वलांची शिकार केली असून, काही वर्षांपूर्वी मृत्यू झालेला कुख्यात वाघ शिकारी संसा चंद याच्या टोळीचा सदस्य असल्याची माहिती आहे.
ही कारवाई केल्याबद्दल बेळगाव परिमंडळाचे मुख्य वनसंरक्षक मंजुनाथ चव्हाण यांच्या मार्गदर्शनाखाली बेळगाव विभागाचे उप वनसंरक्षक शंकर कल्लोळकर, खानापूर उपविभागाचे सहाय्यक वनसंरक्षक संतोष चव्हाण, नागराज बलेहोसूर विभागीय वनसंरक्षक खानापूर, प्रादेशिक वनपरिक्षेत्राचे अधिकारी व कर्मचारी, तसेच विभागाच्या वरिष्ठ अधिकाऱ्यांचे कौतुक होत आहे.
राजेंद्र गरवाडा, वन उपमहानिरीक्षक, राष्ट्रीय व्याघ्र संवर्धन प्राधिकरण यांनी मुख्य वन्यजीव वॉर्डन यांना महाराष्ट्र राज्य वन विभाग आणि वन्यजीव संरक्षण ब्युरो यांच्याशी संवाद साधून सविस्तर तपास करून लवकरच अहवाल सादर करण्याच्या सूचना दिल्या आहेत.
ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಲ್ಲಿ ಕುಖ್ಯಾತ ಹುಲಿ ಬೇಟೆಗಾರ ಅರಣ್ಯ ಇಲಾಖೆಯ ವಶದಲ್ಲಿದ್ದಾನೆ.
ಮಹತ್ವದ ಕಾರ್ಯಾಚರಣೆಯಲ್ಲಿ, ಕುಖ್ಯಾತ ಹುಲಿ ಬೇಟೆಗಾರ ಚಿಕಾ ಅಲಿಯಾಸ್ ಕೃಷ್ಕಾ ಪಟ್ಟೆ ಪವಾ ಎಂಬುವವನನ್ನು ಬೆಳಗಾವಿ ಅರಣ, ವಿಭಾಗದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಇದೇ ವರ್ಷ ಜುಲೈ ತಿಂಗಳಿನಲ್ಲಿ ಬೆಳಗಾವಿ ವಿಭಾಗದ ಖಾನಾಪುರ ತಾಲೂಕಿನ ಖಾನಾಪುರ ಾದೇಶಿಕ ಅರಣ್ಯ, ವಲಯದ ಜಳಗಳ ಎಂಬಲ್ಲಿ ಶ್ರೀಗಂಧ ಮರಗಳ ಕಳ್ಳತನವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಖಾನಾಪೂರ ಉಪ ವಿಭಾಗದ ಅರಣ್ಯಾಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೆಲ ದಿನಗಳ ಹಿಂದ ಆರೋಪಿಗಳು ಬೆಳಗಾವಿ ನಗರದ ಕಣಬರ್ಗಿ ಬಳಿಯ ಕಲಕಾಂಬ ಬಳಿ ಅಡಗಿದ್ದರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಖಾನಾಪೂರ ವಲಯದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಟೆಂಟ್ ಒಂದರ ಮೇಲೆ ದಾಳಿ ನಡೆಸಿದಾಗ ಟೆಂಟಿನಲ್ಲಿ ಶ್ರೀಗಂಧ ತುಂಡುಗಳು ಹಾಗೂ ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡಿತ್ತು. ಹಾಗೂ ವ್ಯಕ್ತಿಯೋರ್ವನನ್ನು ಬಂಧಿಸಿದ್ದರು. ಬಂಧಿತನು ಮೂಲತಃ ಮಧ್ಯಪ್ರದೇಶದವನೆಂದು ತಿಳಿದು ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದ ಭಾನಾಪೂರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ ಸಂತೋಷ್ ಚವ್ಹಾಣ್ ರವರ ನೇತೃತ್ವದ ತಂಡ ಬಂಧಿತನು ಮಧ್ಯಪ್ರದೇಶದ ದಾಮೋ ಜಿಲ್ಲೆಯ ಸಗೋನಿ ಗ್ರಾಮದ ಚಿಕಾ ಅಲಿಯಾಸ್ ಕೃಷ್ಣ ಪಟೆಪವಾರ್ ಎಂದೂ ಹಾಗೂ ಈತ ದೇಶದ ಕುಖ್ಯಾತ ಹುಲಿ ಬೇಟೆಗಾರ ಎಂಬುದು ಗೊತ್ತಾಗಿದೆ. ಆರೋಪಿತನ ಮೇಲೆ ಈಗಾಗಲೇ ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ಮೇಲಘಾಟ್ ಅರಣ್ಯದಲ್ಲಿ ಹುಲಿ, ಕರಡಿಗಳನ್ನು ಬೇಟೆಯಾಡಿರುವ ಪ್ರಕರಣಗಳಿವೆ ಹಾಗೂ ಕೆಲ ವರ್ಷಗಳ ಹಿಂದೆ ಮೃತಪಟ್ಟ ಕುಖ್ಯಾತ ಹುಲಿ ಬೇಟೆಗಾರ ಸಂಸಾ ಚಂದ್ ತಂಡದ ಸದಸ್ಯ ವೆಂದು ಗೊತ್ತಾಗಿದೆ.
ಈ ಕಾರ್ಯಾಚರಣೆಯನ್ನು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ್ ಚವ್ಹಾಣ್ ರವರ ಮಾರ್ಗದರ್ಶನದಲ್ಲಿ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಂಕರ್ ಕಲ್ಲೋಳಿಕ ರವರ ನೇತೃತ್ವದಲ್ಲಿ, ಖಾನಾಪೂರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂತೋಷ್ ಚವ್ಹಾಣ್, ಖಾನಾಪೂರ ಪ್ರಾದೇಶಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ನಾಗರಾಜ್ ಬಾಲೇಹೊಸೂರ್ ಹಾಗೂ ಸಿಬ್ಬಂದಿಗಳ ನೇತೃತ್ವದ ತಂಡ ನಡೆಸಿದ್ದು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸಿಸಿರುತ್ತಾರೆ.
ಸದರಿ ಪ್ರಕರಣದ ಕುರಿತು ಮಹಾರಾಷ್ಟ್ರ ರಾಜ್ಯದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಅವರಾಧ ನಿಯಂತ್ರಣ ಬ್ಯೂರೋ ಜೊತೆಗೆ ಸಂವಹನ ಸಾಧಿಸಿ ವಿವರವಾದ ತನಿಖೆ ನಡೆಸುವಂತೆ ಹಾಗೂ ಶೀಘ್ರು ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಉಪ ಅರಣ್ಯ ಮಹಾ ನಿರೀಕ್ಷಕ ರಾಜೇಂದ್ರ ಗಾರವಾಡ ರವರು ಸಹ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಹಾಗೂ ಮಾರ್ಗದರ್ಶನದ ಮೇರೆಗೆ ವಿಚಾರಣೆ ಪ್ರಗತಿಯಲ್ಲಿರುತ್ತದೆ
