अथणीमध्ये दुचाकी व कार मध्ये भीषण अपघात ; दोघांचा जागीच मृत्यू.
बेळगाव (ता. 26): अथणी तालुक्यातील सत्ती गावाच्या हद्दीत रात्री भीषण अपघात झाल्याची दुर्दैवी घटना घडली आहे. कार आणि दुचाकी यांच्यात जोरदार धडक होऊन दुचाकीस्वारांचा जागीच मृत्यू झाला आहे.
मिळालेल्या माहितीनुसार, सत्ती गावाबाहेर ही दुर्घटना घडली आहे. अपघात इतका भीषण होता की दुचाकी व कारचे मोठे नुकसान झाले असून दोन्ही दुचाकीस्वारांचा जागीच मृत्यू झाला आहे. घटनेची माहिती मिळताच पोलिस घटनास्थळी दाखल झाले व पंचनामा केला.
या अपघाताचे नेमके कारण समजू शकलेले नाही. पुढील तपास अथणी पोलिस करत आहेत.
ಅಥಣಿಯಲ್ಲಿ ಬೈಕ್ ಮತ್ತು ಕಾರು ನಡುವೆ ಭೀಕರ ಅಪಘಾತ ; ಇಬ್ಬರ ಸ್ಥಳದಲ್ಲೇ ಸಾವು.
ಬೆಳಗಾವಿ (ತಾ. 26): ಅಥಣಿ ತಾಲೂಕಿನ ಸತ್ತಿ ಗ್ರಾಮದ ಹದಿಯಲ್ಲಿ ನಿನ್ನೆ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಭಿಸಿದ ಮಾಹಿತಿಯ ಪ್ರಕಾರ, ಸತ್ತಿ ಗ್ರಾಮದ ಹೊರವಲಯದಲ್ಲಿ ಬೈಕ್ ಮತ್ತು ಕಾರು ನಡುವೆ ಜೋರಾದ ಡಿಕ್ಕಿ ಸಂಭವಿಸಿದೆ. ಅಪಘಾತ ಎಷ್ಟು ಭೀಕರವಾಗಿತ್ತು ಎಂದರೆ ки ಬೈಕ್ ಚೂರುಚೂರು ಆಗಿದೆ. ಪರಿಣಾಮವಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಅಥಣಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಘಟನೆ ಸ್ಥಳ ಮಹಜರ್ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಮುಂದಿನ ತನಿಖೆ ಅಥಣಿ ಪೊಲೀಸರು ನಡೆಸುತ್ತಿದ್ದಾರೆ.

