लोकमान्य भवन खानापूर येथे स्वातंत्र्यसैनिकांच्या छायाचित्र प्रदर्शनाचे आयोजन.
खानापूर : लोकमान्य एज्युकेशन सोसायटीचे विठ्ठलराव यशवंतराव चव्हाण पॉलीटेक्नीक, खानापूर व रावसाहेब वागले पी.यू. कॉलेज, स्वानापूर यांच्या संयुक्त विद्यमाने 2,000 क्रांतिकारक व स्वातंत्र्यसैनिकांचे छायाचित्र प्रदर्शन भरविण्यात येणार आहे.
हे प्रदर्शन 25 ऑगस्ट ते 26 ऑगस्ट 2025 या कालावधीत, सकाळी 10.00 ते सायंकाळी 4.00 या वेळेत लोकमान्य भवन, विद्यानगर, खानापूर येथे आयोजित करण्यात आले आहे.
या उपक्रमाचे उद्धिष्ट खानापूर शहरातील विद्यार्थी व नागरिकांना स्वातंत्र्यलढ्यातील थोर सेनानींचे कार्य व बलिदानाची माहिती देणे व त्यातून प्रेरणा घेणे हे आहे.
हे प्रदर्शन पुणे येथील कर्नाळा चॅरिटेबल ट्रस्ट तर्फे राबविण्यात येत असून, “ओळख देशभक्तांची, शाळा तिथं क्रांतिमंदिर” या 948 दिवसांच्या परिक्रमेचा एक भाग आहे. या उपक्रमाला देशभक्त कोशकार चंद्रकांत शहासने तसेच ट्रस्टच्या विश्वस्थ मंजिरी व ॲड. नंदिनी शहासने यांचे मार्गदर्शन लाभणार आहे.
विद्यार्थी व शिक्षकांनी या छायाचित्र प्रदर्शनाचा लाभ घ्यावा, असे आवाहन आयोजकांनी केले आहे.
ಖಾನಾಪುರ: ಲೋಕಮಾನ್ಯ ಭವನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರ ಪ್ರದರ್ಶನ
ಖಾನಾಪುರ : ಲೋಕಮಾನ್ಯ ಎಜ್ಯುಕೇಶನ್ ಸೊಸೈಟಿಯ ವಿಠ್ಠಲರಾವ ಯಶವಂತರಾವ ಚವ್ಹಾಣ ಪಾಲಿಟೆಕ್ನಿಕ್, ಖಾನಾಪುರ ಹಾಗೂ ರಾವಸಾಹೇಬ ವಾಗಳೆ ಪಿ.ಯು. ಕಾಲೇಜ್, ಖಾನಾಪುರ ಇವರ ಸಂಯುಕ್ತಾಶ್ರಯದಲ್ಲಿ ೨,೦೦೦ ಕ್ರಾಂತಿಕಾರರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.
ಈ ಪ್ರದರ್ಶನವನ್ನು ೨೫ ಆಗಸ್ಟ್ರಿಂದ ೨೬ ಆಗಸ್ಟ್ ೨೦೨೫ರವರೆಗೆ, ಬೆಳಿಗ್ಗೆ ೧೦.೦೦ರಿಂದ ಸಂಜೆ ೪.೦೦ ಗಂಟೆಯವರೆಗೆ, ಖಾನಾಪುರದ ವಿದ್ಯಾನಗರದಲ್ಲಿರುವ ಲೋಕಮಾನ್ಯ ಭವನದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಉದ್ದೇಶ ಖಾನಾಪುರ ನಗರ ಹಾಗೂ ತಾಲೂಕಿನ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಮಹಾನ್ ನಾಯಕರುಗಳ ಕಾರ್ಯ ಹಾಗೂ ಬಲಿದಾನದ ಬಗ್ಗೆ ಮಾಹಿತಿ ನೀಡುವುದು ಮತ್ತು ಅವರ ಜೀವನದಿಂದ ಪ್ರೇರಣೆ ಪಡೆಯುವುದಾಗಿದೆ.
ಈ ಪ್ರದರ್ಶನವನ್ನು ಪುನೆಯ ಕರ್ಣಾಲಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದು, “ ದೇಶಭಕ್ತರ ಗುರುತು, ಎಲ್ಲಿ ಶಾಲೆ ಅಲ್ಲಿ ಕ್ರಾಂತಿಮಂದಿರ” ಎಂಬ 948 ದಿನಗಳ ಪರಿಕ್ರಮೆಯ ಒಂದು ಭಾಗವಾಗಿದೆ. ದೇಶಭಕ್ತ ಕೋಶಕಾರ ಚಂದ್ರಕಾಂತ ಶಹಾಸನೆ, ಟ್ರಸ್ಟಿನ ವಿಶ್ವಸ್ತೆ ಮಂಜಿರಿ ಹಾಗೂ ಅಡ್ವೊ. ನಂದಿನಿ ಶಹಾಸನೆ ಇವರ ಮಾರ್ಗದರ್ಶನ ಈ ಕಾರ್ಯಕ್ರಮಕ್ಕೆ ಲಭ್ಯವಾಗಿದೆ.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಛಾಯಾಚಿತ್ರ ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.

