माजी आमदार अरविंद चंद्रकांत पाटील यांचा वाढदिवस उत्साहात साजरा होत आहे; विविध स्तरातून शुभेच्छांचा वर्षाव.
खानापूर : खानापूर मतदारसंघाचे माजी आमदार तसेच बेळगाव जिल्हा मध्यवर्ती सहकारी बँकेचे संचालक अरविंद चंद्रकांत पाटील यांचा वाढदिवस मंगळवार दिनांक 17 मार्च रोजी खानापूर तालुक्यात उत्साहात साजरा होत असून विविध राजकीय, सामाजिक, शैक्षणिक व सहकार क्षेत्रातील मान्यवरांकडून त्यांच्यावर शुभेच्छांचा वर्षाव होत आहे.

खानापूर मतदारसंघात सक्रिय राजकीय नेतृत्व म्हणून ओळख असलेल्या अरविंद पाटील यांनी 2013 ते 2018 या कालावधीत खानापूर मतदारसंघाचे आमदार म्हणून काम पाहिले. 2013 च्या विधानसभा निवडणुकीत त्यांनी महाराष्ट्र एकीकरण समितीचे उमेदवार म्हणून विजय मिळवून विधानसभा गाठली होती. त्यानंतरच्या 2018 च्या विधानसभा निवडणुकीत त्यांना पराभवाचा सामना करावा लागला. पुढे 2022 साली त्यांनी भारतीय जनता पार्टीत प्रवेश करून आपली राजकीय वाटचाल पुढे सुरू ठेवली.
राजकारणाबरोबरच सहकार क्षेत्रातही त्यांचे योगदान उल्लेखनीय आहे. ते बेळगाव जिल्हा मध्यवर्ती सहकारी बँकेचे संचालक म्हणून गेल्या सुमारे वीस वर्षांपासून कार्यरत आहेत. तसेच नंदगड येथील मार्केटिंग सोसायटीत त्यांच्या पॅनलची अनेक वर्षांपासून सत्ता असून स्थानिक सहकार चळवळीत त्यांनी सक्रिय भूमिका बजावली आहे.
सामाजिक कार्यातही अरविंद पाटील यांचा सहभाग लक्षणीय राहिला आहे. 2021 साली खानापूरमधील दुर्गा नगर परिसरात आलेल्या पुरपरिस्थितीत त्यांनी कंबरभर पाण्यात उतरून नागरिकांच्या बचावकार्याला मदत केली. अनेक कुटुंबांची घरे पाण्यात बुडाल्याने अन्नधान्य, कपडे व घरातील साहित्य वाहून गेले होते. अशा वेळी त्यांनी अन्नधान्य व आवश्यक साहित्य देऊन नागरिकांना मदतीचा हात दिला. या कार्यामुळे तालुक्यातील नागरिकांनी त्यांचे मोठ्या प्रमाणावर कौतुक केले होते.
तसेच कोरोना महामारीच्या काळात नागरिक घराबाहेर पडण्यास घाबरत असताना अरविंद पाटील यांनी स्वतः पुढाकार घेत तालुक्यातील ग्रामीण भागासह खानापूर शहर व उपनगरांमध्ये घरोघरी जाऊन मास्क, सॅनिटायझरचे वितरण केले. लॉकडाऊनमुळे मजुरीवर अवलंबून असलेल्या गरीब कुटुंबांना रेशन किटचे वाटप करून त्यांनी मदत केली. कोरोना संसर्गामुळे मृत्युमुखी पडलेल्या काही व्यक्तींच्या अंत्यसंस्कारातही त्यांनी पुढाकार घेतला, ही बाब त्या काळात विशेष चर्चेत होती.
खानापूर तालुक्यातील जनतेच्या सुख-दुःखात सदैव धावून जाणारे माजी आमदार अरविंद पाटील यांचे कार्य सर्वदूर चर्चेचा विषय ठरले आहे.
खानापूर तालुक्यात कुठेही अपघाताची घटना घडल्याची माहिती मिळताच सर्वप्रथम त्या ठिकाणी धाव घेणाऱ्या व्यक्तींमध्ये माजी आमदार अरविंद पाटील यांचे नाव अग्रक्रमाने घेतले जाते. अनेक वेळा अपघातग्रस्तांना रुग्णवाहिका येईपर्यंत वाट पाहण्याऐवजी त्यांनी स्वतःच्या वाहनातून जखमींना तातडीने खानापूर येथील प्राथमिक आरोग्य केंद्रात दाखल करून प्रथमोपचार मिळवून देण्याची व्यवस्था केली आहे. त्यानंतर गरज भासल्यास रुग्णाला पुढील उपचारासाठी रुग्णवाहिकेद्वारे बेळगाव येथील रुग्णालयात पाठविण्याची जबाबदारीही त्यांनी स्वतः पुढाकार घेऊन पार पाडली आहे. त्यामुळे अनेकांचे प्राण वाचल्याच्या घटना घडले आहेत.
राजकारण करत असताना देखील मानवतेला सर्वात मोठे स्थान देणारे नेते म्हणून अरविंद पाटील यांची ओळख निर्माण झाली आहे. एखादा व्यक्ती आपला समर्थक असो किंवा राजकीय विरोधक असो, संकटाच्या वेळी त्यांनी कधीही भेदभाव केलेला नाही. विरोधकांवरही वाईट प्रसंग ओढावल्यास राजकारण बाजूला ठेवून त्यांना मदतीचा हात देणारे नेते म्हणून संपूर्ण खानापूर तालुका त्यांना ओळखतो.
याशिवाय, तालुक्यातील अनेक कुटुंबे आर्थिक अडचणीत सापडल्यास किंवा अचानक वैद्यकीय खर्चाचा मोठा भार त्यांच्या समोर उभा राहिल्यास माजी आमदार अरविंद पाटील यांनी वेळोवेळी आर्थिक मदत करून त्यांना दिलासा दिला आहे. एखादा रुग्ण रुग्णालयात दाखल झाला असेल आणि तो ओळखीचा असो वा पूर्णपणे अनोळखी असो, त्याच्या उपचारासाठी शक्य ते सहकार्य करण्याची त्यांची तयारी कायम असते.
माणुसकी, सहकार्याची भावना आणि समाजसेवेची जाणीव या गुणांमुळे माजी आमदार अरविंद पाटील हे केवळ राजकारणी म्हणून नव्हे तर समाजातील गरजूंच्या मदतीला धावून जाणारे लोकनेते म्हणून खानापूर तालुक्यात त्यांची विशेष ओळख निर्माण झाली आहे. त्यामुळेच आजही अनेक नागरिक त्यांच्याकडे विश्वासाने मदतीसाठी धाव घेताना दिसतात.
आज त्यांच्या वाढदिवसानिमित्त खानापूरसह परिसरातील कार्यकर्ते, मित्रपरिवार, समर्थक व विविध संघटनांच्या प्रतिनिधींनी त्यांना दीर्घायुष्य, उत्तम आरोग्य आणि भविष्यातील कार्यासाठी भरभरून शुभेच्छा देत आहेत. मंगळवार दिनांक 17 मार्च रोजी अनेक ठिकाणी त्यांच्या वाढदिवसानिमित्त रक्तदान शिबिर, आरोग्य तपासणी शिबिरे व सामाजिक उपक्रमांचे आयोजन करण्यात आले आहे.
खानापूर तालुक्याच्या राजकीय व सामाजिक क्षेत्रात सक्रिय नेतृत्व म्हणून अरविंद पाटील यांचे नाव घेतले जाते आणि त्यांच्या कार्यामुळे अनेकांनी त्यांना भविष्यातील राजकीय वाटचालीसाठी शुभेच्छा दिल्या आहेत.
ಮಾಜಿ ಶಾಸಕರಾದ ಅರವಿಂದ ಚಂದ್ರಕಾಂತ ಪಾಟೀಲ್ ಅವರ ಜನ್ಮದಿನವನ್ನು ಉತ್ಸಾಹದಿಂದ ಆಚರಣೆ; ವಿವಿಧ ಕ್ಷೇತ್ರಗಳಿಂದ ಶುಭಾಶಯಗಳ ಸುರಿಮಳೆ.
ಖಾನಾಪುರ : ಖಾನಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿರುವ ಹಾಗೂ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ನ ನಿರ್ದೇಶಕರಾಗಿರುವ ಅರವಿಂದ ಚಂದ್ರಕಾಂತ ಪಾಟೀಲ್ ಅವರ ಜನ್ಮದಿನವನ್ನು ಮಂಗಳವಾರ ಮಾರ್ಚ್ 17 ರಂದು ಖಾನಾಪುರ ತಾಲ್ಲೂಕಿನಲ್ಲಿ ಉತ್ಸಾಹದಿಂದ ಆಚರಿಸಲಾಗುತ್ತಿದ್ದು, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರ ಕ್ಷೇತ್ರಗಳ ಅನೇಕ ಗಣ್ಯರು ಅವರಿಗೆ ಹಾರೈಕೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಖಾನಾಪುರ ಕ್ಷೇತ್ರದಲ್ಲಿ ಸಕ್ರಿಯ ರಾಜಕೀಯ ನಾಯಕತ್ವಕ್ಕಾಗಿ ಪರಿಚಿತರಾಗಿರುವ ಅರವಿಂದ ಪಾಟೀಲ್ ಅವರು 2013 ರಿಂದ 2018ರವರೆಗೆ ಖಾನಾಪುರ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಅವರು ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ವಿಧಾನಸಭೆಗೆ ಪ್ರವೇಶಿಸಿದ್ದರು. ನಂತರ ನಡೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಸೋಲನ್ನು ಎದುರಿಸಬೇಕಾಯಿತು. ಅದರ ನಂತರ 2022ರಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು ತಮ್ಮ ರಾಜಕೀಯ ಪಯಣವನ್ನು ಮುಂದುವರಿಸಿದರು.
ರಾಜಕೀಯದ ಜೊತೆಗೆ ಸಹಕಾರ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಗಮನಾರ್ಹವಾಗಿದೆ. ಅವರು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ನ ನಿರ್ದೇಶಕರಾಗಿ ಸುಮಾರು ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ನಂದಗಡದ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಅವರ ಪ್ಯಾನೆಲ್ ಹಲವು ವರ್ಷಗಳಿಂದ ಅಧಿಕಾರದಲ್ಲಿದ್ದು, ಸ್ಥಳೀಯ ಸಹಕಾರಿ ಚಳುವಳಿಯಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದಾರೆ.
ಸಾಮಾಜಿಕ ಕಾರ್ಯಗಳಲ್ಲಿಯೂ ಅರವಿಂದ ಪಾಟೀಲ್ ಅವರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ. 2021ರಲ್ಲಿ ಖಾನಾಪುರದ ದುರ್ಗಾ ನಗರ ಪ್ರದೇಶದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ ಅವರು ಸೊಂಟದ ಮಟ್ಟದ ನೀರಿನಲ್ಲಿ ಇಳಿದು ನಾಗರಿಕರ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿ ಸಹಾಯ ಮಾಡಿದ್ದರು. ಅನೇಕ ಕುಟುಂಬಗಳ ಮನೆಗಳು ನೀರಿನಲ್ಲಿ ಮುಳುಗಿದ್ದರಿಂದ ಆಹಾರಧಾನ್ಯ, ಬಟ್ಟೆ ಹಾಗೂ ಮನೆಯ ಸಾಮಗ್ರಿಗಳು ಹರಿದು ಹೋಗಿದ್ದವು. ಆ ಸಂದರ್ಭದಲ್ಲಿ ಅವರು ಆಹಾರಧಾನ್ಯ ಹಾಗೂ ಅಗತ್ಯ ಸಾಮಗ್ರಿಗಳನ್ನು ನೀಡುವ ಮೂಲಕ ನಾಗರಿಕರಿಗೆ ನೆರವಾದರು. ಈ ಕಾರ್ಯಕ್ಕೆ ತಾಲ್ಲೂಕಿನ ಜನರಿಂದ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗಿತ್ತು.
ಅದೇ ರೀತಿ ಕೊರೋನಾ ಮಹಾಮಾರಿ ಕಾಲದಲ್ಲಿ ಜನರು ಮನೆಬಿಟ್ಟು ಹೊರಬರಲು ಹೆದರಿದ ಸಂದರ್ಭದಲ್ಲೂ ಅರವಿಂದ ಪಾಟೀಲ್ ಸ್ವತಃ ಮುಂದಾಗಿ ತಾಲ್ಲೂಕಿನ ಗ್ರಾಮೀಣ ಭಾಗಗಳ ಜೊತೆಗೆ ಖಾನಾಪುರ ನಗರ ಹಾಗೂ ಉಪನಗರಗಳಲ್ಲಿ ಮನೆ ಮನೆಗೆ ತೆರಳಿ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ವಿತರಿಸಿದರು. ಲಾಕ್ಡೌನ್ನಿಂದ ಕೂಲಿ ಕೆಲಸದ ಮೇಲೆ ಅವಲಂಬಿತವಾಗಿದ್ದ ಬಡ ಕುಟುಂಬಗಳಿಗೆ ರೇಷನ್ ಕಿಟ್ಗಳನ್ನು ಹಂಚಿ ಸಹಾಯ ಮಾಡಿದರು. ಕೊರೋನಾ ಸೋಂಕಿನಿಂದ ಮೃತಪಟ್ಟ ಕೆಲವು ವ್ಯಕ್ತಿಗಳ ಅಂತ್ಯಕ್ರಿಯೆಗಳಲ್ಲಿಯೂ ಅವರು ಮುಂದಾಗಿ ಭಾಗವಹಿಸಿದ್ದರು, ಇದು ಆ ಸಮಯದಲ್ಲಿ ವಿಶೇಷವಾಗಿ ಚರ್ಚೆಗೆ ಕಾರಣವಾಗಿತ್ತು.
ಖಾನಾಪುರ ತಾಲ್ಲೂಕಿನ ಜನರ ಸುಖ–ದುಃಖಗಳಲ್ಲಿ ಸದಾ ಧಾವಿಸುವ ಮಾಜಿ ಶಾಸಕ ಅರವಿಂದ ಪಾಟೀಲ್ ಅವರ ಕಾರ್ಯ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.
ಖಾನಾಪುರ ತಾಲ್ಲೂಕು ಸೆರಿದಂತೆ ಯಾವುದೇ ಮೂಲೆಯಲ್ಲಿ ಅಪಘಾತ ಸಂಭವಿಸಿದ ಮಾಹಿತಿ ಸಿಕ್ಕ ತಕ್ಷಣವೇ ಅಲ್ಲಿ ಮೊದಲು ಧಾವಿಸುವವರಲ್ಲಿ ಅರವಿಂದ ಪಾಟೀಲ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ಅನೇಕ ಬಾರಿ ಅಪಘಾತಕ್ಕೊಳಗಾದವರನ್ನು ಆಂಬುಲೆನ್ಸ್ ಬರುವವರೆಗೆ ಕಾಯದೇ ತಮ್ಮದೇ ವಾಹನದಲ್ಲಿ ತಕ್ಷಣವೇ ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಮೊದಲ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಿದ್ದಾರೆ. ನಂತರ ಅಗತ್ಯವಿದ್ದರೆ ಮುಂದಿನ ಚಿಕಿತ್ಸೆಗೆ ರೋಗಿಯನ್ನು ಆಂಬುಲೆನ್ಸ್ ಮೂಲಕ ಬೆಳಗಾವಿಯ ಆಸ್ಪತ್ರೆಗೆ ಕಳುಹಿಸುವ ಜವಾಬ್ದಾರಿಯನ್ನೂ ಅವರು ಸ್ವತಃ ಹೊತ್ತುಕೊಂಡಿದ್ದಾರೆ. ಇದರ ಮೂಲಕ ಅನೇಕ ಜನರ ಪ್ರಾಣಗಳು ಉಳಿದ ಘಟನೆಗಳು ನಡೆದಿವೆ.
ರಾಜಕೀಯದಲ್ಲಿ ಇದ್ದರೂ ಮಾನವೀಯತೆಯನ್ನು ಅತ್ಯಂತ ಮಹತ್ವ ನೀಡುವ ನಾಯಕರಾಗಿ ಅರವಿಂದ ಪಾಟೀಲ್ ಅವರ ಹೆಸರು ಪ್ರಸಿದ್ಧವಾಗಿದೆ. ವ್ಯಕ್ತಿ ತಮ್ಮ ಬೆಂಬಲಿಗರಾಗಿರಲಿ ಅಥವಾ ರಾಜಕೀಯ ವಿರೋಧಿಗಳಾಗಿರಲಿ, ಸಂಕಷ್ಟದ ಸಮಯದಲ್ಲಿ ಅವರು ಯಾವತ್ತೂ ಭೇದಭಾವ ತೋರಿಸದೆ. ವಿರೋಧಿಗಳಿಗೆ ಸಹ ಕಷ್ಟದ ಸಮಯದಲ್ಲಿ ರಾಜಕೀಯವನ್ನು ಬದಿಗಿರಿಸಿ ನೆರವಾಗುವ ನಾಯಕರಾಗಿ ಸಂಪೂರ್ಣ ಖಾನಾಪುರ ತಾಲ್ಲೂಕಿನಲ್ಲಿ ಅವರನ್ನು ಗುರುತಿಸುತ್ತದೆ.
ಇದರ ಜೊತೆಗೆ, ತಾಲ್ಲೂಕಿನ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ತುರ್ತು ವೈದ್ಯಕೀಯ ಖರ್ಚಿನ ದೊಡ್ಡ ಹೊರೆ ಎದುರಾದಾಗ ಮಾಜಿ ಶಾಸಕ ಅರವಿಂದ ಪಾಟೀಲ್ ಸಮಯೋಚಿತವಾಗಿ ಆರ್ಥಿಕ ಸಹಾಯ ನೀಡಿ ಅವರಿಗೆ ಧೈರ್ಯ ನೀಡಿದ್ದಾರೆ. ಯಾವುದೇ ರೋಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಅವರು ಪರಿಚಿತರಾಗಿರಲಿ ಅಥವಾ ಸಂಪೂರ್ಣ ಅಪರಿಚಿತರಾಗಿರಲಿ, ಅವರ ಚಿಕಿತ್ಸೆಗೆ ಸಾಧ್ಯವಾದ ಸಹಾಯ ಮಾಡಲು ಅವರು ಸದಾ ಸಿದ್ಧರಾಗಿರುತ್ತಾರೆ.
ಮಾನವೀಯತೆ, ಸಹಕಾರದ ಮನೋಭಾವ ಮತ್ತು ಸಮಾಜಸೇವೆಯ ಅರಿವು ಎಂಬ ಗುಣಗಳಿಂದ ಅರವಿಂದ ಪಾಟೀಲ್ ಅವರು ಕೇವಲ ರಾಜಕಾರಣಿಯಾಗಿ ಮಾತ್ರವಲ್ಲದೆ, ಸಮಾಜದ ಅಗತ್ಯವಿರುವವರಿಗೆ ಧಾವಿಸಿ ನೆರವಾಗುವ ಜನನಾಯಕರಾಗಿ ಖಾನಾಪುರ ತಾಲ್ಲೂಕಿನಲ್ಲಿ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದ್ದಾರೆ. ಅದಕ್ಕಾಗಿ ಇಂದಿಗೂ ಅನೇಕ ನಾಗರಿಕರು ನಂಬಿಕೆಯಿಂದ ಅವರ ಬಳಿಗೆ ಸಹಾಯಕ್ಕಾಗಿ ಧಾವಿಸುತ್ತಾರೆ.
ಇಂದು ಅವರ ಜನ್ಮದಿನದ ಪ್ರಯುಕ್ತ ಖಾನಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಕಾರ್ಯಕರ್ತರು, ಸ್ನೇಹಿತರು, ಬೆಂಬಲಿಗರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಅವರಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ಭವಿಷ್ಯದ ಕಾರ್ಯಗಳಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಮಂಗಳವಾರ ಮಾರ್ಚ್ 17 ರಂದು ಅನೇಕ ಕಡೆಗಳಲ್ಲಿ ಅವರ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳು ಮತ್ತು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಖಾನಾಪುರ ತಾಲ್ಲೂಕಿನ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯ ನಾಯಕತ್ವವಾಗಿ ಅರವಿಂದ ಪಾಟೀಲ್ ಅವರ ಹೆಸರು ಗೌರವದಿಂದ ಉಚ್ಚರಿಸಲಾಗುತ್ತಿದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಹಲವರು ಅವರ ಮುಂದಿನ ರಾಜಕೀಯ ಪಯಣಕ್ಕೂ ಶುಭ ಹಾರೈಸಿದ್ದಾರೆ.
ಅದೇ ರೀತಿ ಮಾಜಿ ಶಾಸಕ ಅರವಿಂದ ಪಾಟೀಲ ಅವರಿಗೆ ಅಪಲ ಖಾನಾಪುರ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.



