संगरगाळीत पाच हत्तींच्या कळपाचे थैमान; 120 पोती भाताच्या वळ्या विस्कटल्या – शेतकऱ्याचे मोठे आर्थिक नुकसान.
खानापूर, ता. 23 नोव्हेंबर :
संगरगाळी (ता. खानापूर) परिसरात गेल्या दोन दिवसांपासून पाच हत्तींचा कळप थैमान घालत असून ग्रामस्थांमध्ये भीतीचे वातावरण निर्माण झाले आहे. या हत्तींच्या कळपामुळे परिसरातील अनेक शेतकऱ्यांच्या भात पिकांचे मोठे नुकसान झाले आहे.
आज रविवारी 23 नोव्हेंबर रोजी रेल्वे ट्रॅकला लागून असलेल्या “मेलकी” नावाच्या शेतामध्ये नारायण चुडाप्पा पाटील (संगरगाळी) यांच्या शेतातील भात पिकावर हत्तींचा कळपाने हल्ला केला असून त्यांचे फार मोठे भात पिकाचे नुकसान केले आहे. नारायण पाटील यांनी अंदाजे 120 पोती भात कापणी करून वळ्या रचल्या होत्या, मात्र हत्तींच्या कळपाने त्या पूर्णपणे विस्कटून टाकल्याने जवळपास 20 पेक्षा जास्त पोती भात पिकाचे नुकसान झाल्याचे प्राथमिक अंदाज आहे.
घटनेची माहिती मिळताच वन खात्याचे अधिकारी राजू पवार घटनास्थळी दाखल झाले आहेत. सध्या परिसरातील ग्रामस्थ व युवक मोठ्या प्रमाणात उपस्थित असून फटाके व सुतळी बॉम्ब पेटवून हत्ती हुसकावण्याचे प्रयत्न सुरू आहेत.
हत्तींचा कळप वारंवार धाड घालत असल्याने ग्रामस्थांमधून तीव्र संताप व्यक्त केला जात आहे. वन विभागाने या हत्तींचा कायमस्वूपी बंदोबस्त करावा तसेच नुकसानीची योग्य नुकसानभरपाई द्यावी, अशी मागणी संगरगाळी व परिसरातील नागरिकांनी केली आहे.
सध्या घटनास्थळी ग्रामस्थ, युवा वर्ग आणि वन विभागाचे अधिकारी व कर्मचारी उपस्थित असून परिस्थितीवर नियंत्रण मिळवण्याचे प्रयत्न सुरू आहेत.

ಸಂಗರಗಾಳಿಯಲ್ಲಿ ಐದು ಆನೆಗಳ ಹಿಂಡು; 120 ಕು ಹೆಚ್ಚು ಭತ್ತದ ರಾಶಿಗಳನ್ನು ಚೆಲ್ಲಾಪಿಲ್ಲಿಯಾಗಿಸಿದ ಆನೆಗಳ ಹಿಂಡು – ರೈತನಿಗೆ ಭಾರೀ ಆರ್ಥಿಕ ನಷ್ಟ.
ಖಾನಾಪುರ, ತಾ. 23 ನವೆಂಬರ್ : ಸಂಗರಗಾಳಿ (ತಾ. ಖಾನಾಪುರ) ಭಾಗದಲ್ಲಿ ಕಳೆದ ಎರಡು ದಿನಗಳಿಂದ ಐದು ಆನೆಗಳ ಹಿಂಡು ಹಾವಳಿ ನಡೆಸುತ್ತಿದ್ದು ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಈ ಆನೆಗಳ ಹಿಂಡು ಆ ಭಾಗದ ಅನೇಕ ರೈತರ ಭತ್ತದ ಬೆಳೆಗೆ ಭಾರಿ ಹಾನಿ ಮಾಡಿವೆ.
ಇಂದು ಭಾನುವಾರ 23 ನವೆಂಬರ್ ರೈಲು ಹಳಿಗೆ ಅಂಟಿಕೊಂಡಿರುವ “ಮೇಲಕಿ” ಎಂಬ ಹೊಲದಲ್ಲಿ ಸಂಗರಗಾಳಿಯ ನಾರಾಯಣ ಚುಡಪ್ಪ ಪಾಟೀಲ ಅವರ ಭತ್ತದ ಬೆಳೆ ಮೇಲೆ ಆನೆಗಳ ಹಿಂಡು ಹಾವಳಿ ನಡೆಸಿದ್ದು, ಅವರ ಗದ್ದೆಯಲ್ಲಿದ್ದ ಬೆಳೆಗೆ ಭಾರೀ ಹಾನಿಯಾಗಿದೆ. ನಾರಾಯಣ ಪಾಟೀಲ ಅವರು ಅಂದಾಜು 120 ಗೊನಿ ಭತ್ತವನ್ನು ಕೊಯ್ದು ರಾಶಿಗೆ ಹಾಕಿದ್ದರು, ಆದರೆ ಆನೆಗಳ ಹಿಂಡು ಆ ರಾಶಿಗಳನ್ನು ಸಂಪೂರ್ಣವಾಗಿ ನಾಶ ಮಾಡಿದ ಪರಿಣಾಮ ಸುಮಾರು 120 ಕ್ಕಿಂತ ಹೆಚ್ಚು ಗೊನಿ ಭತ್ತದ ಬೆಳೆ ನಾಶವಾಗಿದೆ ಎಂಬುದು ಪ್ರಾಥಮಿಕ ಅಂದಾಜು.
ಘಟನೆಯ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿ ರಾಜು ಪವಾರ ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರಸ್ತುತ ಭಾಗದ ಗ್ರಾಮಸ್ಥರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಪಟಾಕಿಗಳು ಮತ್ತು ಸುತ್ತಳಿ ಬಾಂಬ್ಗಳನ್ನು ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನಗಳು ನಡೆಯುತ್ತಿವೆ.
ಆನೆಗಳ ಹಿಂಡು ಮೇಲಿಂದ ಮೇಲೆ ದಾಳಿ ನಡೆಸುತ್ತಿರುವುದರಿಂದ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಈ ಆನೆಗಳಿಗೆ ಶಾಶ್ವತವಾಗಿ ಬಂತೋಬಸ್ತು ಮಾಡಬೇಕು ಹಾಗೂ ರೈತರಿಗೆ ತಕ್ಕ ಪ್ರಮಾಣದ ಪರಿಹಾರದ ಹಣ ನೀಡಬೇಕು ಎಂಬ ಬೇಡಿಕೆಯನ್ನು ಸಂಗರಗಾಳಿ ಮತ್ತು ಸುತ್ತಮುತ್ತಲಿನ ನಾಗರಿಕರು ಮಾಡಿದ್ದಾರೆ.
ಪ್ರಸ್ತುತ ಸ್ಥಳದಲ್ಲೇ ಗ್ರಾಮಸ್ಥರು, ಯುವ ವರ್ಗ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಕಾರ್ಯ ಮುಂದುವರಿದಿದೆ.

