हारुरी येथील वृद्ध महिलेची नदीत उडी घेऊन आत्महत्या
खानापूर (ता. ५ ऑगस्ट): हारुरी (ता. खानापूर) येथील ६७ वर्षीय वृद्ध महिलेने मानसिक तणावातून नदीत उडी घेऊन आत्महत्या केल्याची घटना आज उघडकीस आली आहे. आत्महत्या केलेल्या महिलेचे नाव लक्ष्मी नारायण पाटील (वय ६७) असे आहे.
ग्रामस्थांकडून मिळालेल्या माहितीनुसार, लक्ष्मीबाई या गेल्या काही काळापासून आजारी होत्या. त्यांच्यावर औषधोपचार सुरू होते, मात्र सततच्या आजारामुळे त्या नैराश्यात होत्या. सोमवारी रात्री १२ वाजेपर्यंत त्या आपल्या कुटुंबीयांसोबत होत्या. मात्र, मंगळवारी सकाळी त्या घरी दिसून न आल्याने घरच्यांनी शोधाशोध सुरू केली.
शोध घेतल्यानंतर खानापूर-हेमाडगा रस्त्यावरील मणतुर्गा नजीक असलेल्या हलात्री नदीच्या पुलाजवळ त्यांच्या मृतदेहाचा एका लाकडामध्ये अडकलेल्या अवस्थेत शोध लागला. अग्निशामक दलाच्या मदतीने मृतदेह बाहेर काढण्यात आला असून, खानापूर येथील प्राथमिक आरोग्य केंद्रात उत्तरीय तपासणीसाठी पाठविण्यात आला आहे. उत्तरीय तपासणीनंतर मृतदेह नातेवाईकांच्या ताब्यात देण्यात येणार आहे.
या प्रकरणी खानापूर पोलीस स्थानकात नोंद करण्यात आली असून, पुढील तपास पोलिसांकडून सुरू आहे.
ಹಾರೂರಿ ಗ್ರಾಮದಲ್ಲಿ ವೃದ್ಧ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ
ಖಾನಾಪುರ (ಆ. ೫): ಖಾನಾಪುರ ತಾಲೂಕಿನ ಹಾರೂರಿ ಗ್ರಾಮದ ೬೭ ವರ್ಷದ ವೃದ್ಧ ಮಹಿಳೆಯೊಬ್ಬರು ಮಾನಸಿಕ ಒತ್ತಡದಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಹೆಸರು ಲಕ್ಷ್ಮೀ ನಾರಾಯಣ ಪಾಟೀಲ (ವಯಸ್ಸು ೬೭) ಎಂದು ಗುರುತಿಸಲಾಗಿದೆ.
ಗ್ರಾಮಸ್ಥರಿಂದ ಲಭಿಸಿರುವ ಮಾಹಿತಿ ಪ್ರಕಾರ, ಲಕ್ಷ್ಮೀಬಾಯಿ ಕಳೆದ ಕೆಲವು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆ. ಪಡೆಯುತ್ತಿದರು. ಆದರೆ, ನಿರಂತರವಾದ ಅನಾರೋಗ್ಯದ ಸಮಸ್ಯೆಯಿಂದ ಅವರು ಮನನೊಂದು ಖಿನ್ನತೆಗೆ ಒಳಗಾಗಿದ್ದರಂತೆ. ಸೋಮವಾರ ರಾತ್ರಿ ೧೨ ಗಂಟೆಯವರೆಗೆ ಅವರು ಕುಟುಂಬ ಜೋತೆ ಇದ್ದರು. ಆದರೆ ಮಂಗಳವಾರ ಬೆಳಿಗ್ಗೆ ಮನೆಯವರ ದೃಷ್ಟಿಗೆ ಕಾಣದ ಕಾರಣ ಶೋಧ ಕಾರ್ಯ ಆರಂಭಿಸಲಾಯಿತು.
ಶೋಧದ ನಂತರ ಖಾನಾಪುರ-ಹೆಮಾಡಗಾ ರಸ್ತೆಯ ಮಂತುರ್ಗ ಬಳಿ ಇರುವ ಹಾಲಾತ್ರಿ ನದಿಯ ಸೇತುವೆಯ ಬಳಿ ಅವರು ಮರಕ್ಕೆ ಅಂಟಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಮೃತದೇಹವನ್ನು ಹೊರತೆಗೆದು ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪೊಲೀಸರು ಕೈಗೊಂಡಿದ್ದಾರೆ.

