“आपलं खानापूर” वृत्ताची दखल : चापोली शाळेला तालुका गटशिक्षणाधिकारी पी. रामाप्पा यांची भेट व पाहणी.
खानापूर ; “चापोली शाळेची जीर्ण अवस्था; विद्यार्थ्यांच्या सुरक्षेसाठी आमदारांकडे तातडीच्या हस्तक्षेपाची मागणी,” या मथळ्याखाली 8 सप्टेंबर 2025 रोजी आपलं खानापूर न्यूज पोर्टलवर प्रसारित झालेल्या वृत्ताची दखल तालुका गटशिक्षणाधिकारी पी. रामाप्पा यांनी घेतली आहे.
या अनुषंगाने त्यांनी अतिदुर्गम व जंगल परिसरातील चापोली येथील शासकीय उच्च प्राथमिक शाळेला मंगळवार दिनांक 9 सप्टेंबर रोजी, भेट देऊन पाहणी केली. सदर वृत्तामध्ये शाळेची अवस्था अत्यंत जीर्ण व धोकादायक झाल्याने विद्यार्थ्यांचे प्राण धोक्यात आल्याबद्दल चिंताग्रस्त पालक, ग्रामस्थ व माजी विद्यार्थी संघटनेकडून आमदार विठ्ठल हलगेकर यांच्याकडे तातडीने हस्तक्षेप करण्याची मागणी करण्यात आली होती.
गटशिक्षणाधिकारी रामाप्पा यांनी पाहणी दरम्यान शाळा दुरुस्तीसाठी लवकरात लवकर आवश्यक ती पावले उचलली जातील, असे आश्वासन दिले. तसेच तालुका पंचायत अधिकारी, ग्रामपंचायत अधिकारी आणि आमदार विठ्ठल हलगेकर यांना शाळेच्या जीर्ण अवस्थेबद्दल माहिती देऊन दुरुस्तीबाबत लवकरच क्रम घेण्यात येईल, असेही त्यांनी स्पष्ट केले.
यावेळी त्यांनी उपस्थित शिक्षकवर्ग तसेच एसडीएमसी समिती सदस्यांशी संवाद साधून शाळा सुधारणा कार्यासाठी प्रशासनाकडून सहकार्य मिळेल, असे सांगितले. गटशिक्षणाधिकारी यांच्या या तात्काळ प्रतिसादामुळे चापोली ग्रामस्थ, माजी विद्यार्थी संघटना व एसडीएमसी शाळा सुधारणा समितीकडून समाधान व्यक्त करण्यात आले आहे.
“ನಮ್ಮ ಖಾನಾಪುರ” ವರದಿಗೆ ಪ್ರತಿಕ್ರಿಯೆ : ಚಾಪೋಲಿ ಶಾಲೆಗೆ ತಾಲೂಕು ಗುಟಶಿಕ್ಷಣಾಧಿಕಾರಿ ಪಿ.ರಾಮಪ್ಪ ಭೇಟಿ ಮತ್ತು ಪರಿಶೀಲನೆ.
ಖಾನಾಪುರ : “ಚಾಪೋಲಿ ಶಾಲೆಯ ಜೀರ್ಣಾವಸ್ಥೆ; ವಿದ್ಯಾರ್ಥಿಗಳ ಸುರಕ್ಷತೆಗೆ ಶಾಸಕರ ತುರ್ತು ಹಸ್ತಕ್ಷೇಪದ ಬೇಡಿಕೆ” ಎಂಬ ಶೀರ್ಷಿಕೆಯೊಂದಿಗೆ 2025ರ ಸೆಪ್ಟೆಂಬರ್ 8ರಂದು ನಮ್ಮ ಖಾನಾಪುರ ನ್ಯೂಸ್ ಪೋರ್ಟಲ್ನಲ್ಲಿ ಪ್ರಸಾರವಾದ ವರದಿಗೆ ತಾಲೂಕಾ ಶಿಕ್ಷಣಾಧಿಕಾರಿ ಪಿ.ರಾಮಪ್ಪ ಅವರಿಂದ ಅವಲೋಕನ.
ಈ ಹಿನ್ನೆಲೆಯಲ್ಲಿ ಅವರು ಅತಿ ದೂರದ ಹಾಗೂ ಅರಣ್ಯ ಪ್ರದೇಶದಲ್ಲಿರುವ ಚಾಪೋಲಿ ಗ್ರಾಮದ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆ ವರದಿಯಲ್ಲಿ ಶಾಲೆಯ ಕಟ್ಟಡದ ಜೀರ್ಣ ಮತ್ತು ಅಪಾಯಕಾರ ಸ್ಥಿತಿಯಿಂದ ವಿದ್ಯಾರ್ಥಿಗಳ ಜೀವ ಭಯದಲ್ಲಿ ಸಿಲುಕಿರುವ ಬಗ್ಗೆ ಪೋಷಕರು, ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘಟನೆಯವರು ಚಿಂತೆ ವ್ಯಕ್ತಪಡಿಸಿ, ಶಾಸಕರಾದ ವಿಠ್ಠಲ ಹಲಗೇಕರ್ ತಕ್ಷಣವೇ ಹಸ್ತಕ್ಷೇಪಿಸಬೇಕು ಎಂದು ಆಗ್ರಹಿಸಿದ್ದರು.
ಪರಿಶೀಲನೆಯ ವೇಳೆ ತಾಲೂಕ ಶಿಕ್ಷಣಾಧಿಕಾರಿ ರಾಮಪ್ಪ ಅವರು ಶಾಲೆಯ ದುರಸ್ತಿ ಕಾರ್ಯಕ್ಕಾಗಿ ಸಾಧ್ಯವಾದಷ್ಟು ಬೇಗ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ತಾಲೂಕು ಪಂಚಾಯಿತಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಶಾಸಕರಾದ ವಿಠ್ಠಲ ಹಲಗೇಕರ್ ಅವರಿಗೆ ಶಾಲೆಯ ಜೀರ್ಣಾವಸ್ಥೆಯ ಬಗ್ಗೆ ಮಾಹಿತಿ ನೀಡಿ, ದುರಸ್ತಿ ಕಾರ್ಯಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರು ಹಾಜರಿದ್ದ ಶಿಕ್ಷಕರ ಜೊತೆಗೂಡಿ ಎಸ್ಡಿಎಂಸಿ ಸಮಿತಿಯ ಸದಸ್ಯರೊಂದಿಗೆ ಸಂವಾದ ನಡೆಸಿ, ಶಾಲಾ ಸುಧಾರಣೆಗೆ ಆಡಳಿತದಿಂದ ಪೂರ್ಣ ಸಹಕಾರ ದೊರೆಯುತ್ತದೆ ಎಂದರು. ಶಿಕ್ಷಣಾಧಿಕಾರಿಗಳ ಈ ತಕ್ಷಣದ ಪ್ರತಿಕ್ರಿಯೆಯಿಂದ ಚಾಪೋಲಿ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳ ಸಂಘಟನೆ ಹಾಗೂ ಎಸ್ಡಿಎಂಸಿ ಶಾಲಾ ಸುಧಾರಣಾ ಸಮಿತಿಯಿಂದ ತೃಪ್ತಿ ವ್ಯಕ್ತವಾಯಿತು.

