
राज्यातील सरकारी प्राथमिक आणि उच्च माध्यमिक शाळांमधील ५८००० शिक्षकांच्या रिक्त पदांवर लवकरच भरती प्रक्रिया राबविण्यात येणार आहे, अशी माहिती शालेय शिक्षण आणि साक्षरता मंत्री मधु बंगारप्पा यांनी दिली. बेंगळुरू येथे पत्रकारांशी बोलताना ते म्हणाले की, शिक्षक हे शिक्षण विभागाचे बलस्थान असून, अतिथी शिक्षकांना रिक्त पदांवर नियुक्त करणे हा तात्पुरता उपाय आहे. लवकरच राज्यातील सरकारी शाळांमधील रिक्त पदे भरण्यासाठी कार्यवाही केली जाणार असून प्राथमिक व उच्च माध्यमिक शाळांमधील शिक्षकांची ५८ हजार रिक्त पदे टप्प्याटप्प्याने भरण्यात येणार असल्याचे त्यांनी सांगितले. मागच्या सरकारच्या काळात १३३५१ उमेदवारांची अंतिम निवड यादी प्रसिद्ध झाली होती, मात्र त्यातील काहींनी न्यायालयात धाव घेतल्याने जागा वाटपाचा आदेश लांबला होता. याप्रकरणी कायदेशीर मदत घेऊन लवकरच भरती प्रक्रिया पूर्ण केली जाईल, असे बंगारप्पा म्हणाले.
58000 ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ : ಮಧು ಬಂಗಾರಪ್ಪ.
ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 58000 ಶಿಕ್ಷಕರ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಜಾರಿಯಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರೇ ಶಿಕ್ಷಣ ಇಲಾಖೆಯ ಶಕ್ತಿಯಾಗಿದ್ದು, ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸುವುದು ತಾತ್ಕಾಲಿಕ ಪರಿಹಾರವಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 58 ಸಾವಿರ ಶಿಕ್ಷಕರ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದರು. ಹಿಂದಿನ ಸರ್ಕಾರದ ಅವಧಿಯಲ್ಲಿ 13351 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು ಆದರೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಸೀಟು ಹಂಚಿಕೆ ಆದೇಶ ವಿಳಂಬವಾಗಿತ್ತು. ಈ ನಿಟ್ಟಿನಲ್ಲಿ ಕಾನೂನು ನೆರವು ಪಡೆದು ಶೀಘ್ರವೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಬಂಗಾರಪ್ಪ ತಿಳಿಸಿದರು.
