कंदाय नोंदी व इतर दस्तऐवज तहसील कार्यालयातूनच मिळावेत – सामाजिक कार्यकर्ते जोतिबा भेंडिगेरी यांची मागणी.
खानापूर (ता. ३० जुलै): खानापूर तालुक्याच्या तहसील कार्यालयात भूमी महसूल नोंदी तसेच इतर आवश्यक दस्तऐवज ऑनलाईन पद्धतीने मिळवण्याचे आदेश असले तरी प्रत्यक्षात नागरिकांना यामुळे मोठ्या अडचणींचा सामना करावा लागत आहे. संबंधित अधिकाऱ्यांना विचारणा केली असता “कॅशमध्ये पैसे स्वीकारण्यास वरिष्ठ अधिकाऱ्यांनी मनाई केली आहे, त्यामुळे आम्ही दस्तऐवज देऊ शकत नाही; तुम्ही ऑनलाईनच मिळवा” असे सांगण्यात येत आहे.

अशा प्रकारच्या उत्तरामुळे नागरिकांमध्ये संभ्रम निर्माण झाला असून, दस्तऐवज कुठून, कशा पद्धतीने मिळवायचे याची माहिती नसल्यामुळे त्यांना आर्थिक व मानसिक त्रास होत आहे. त्यामुळे तहसील कार्यालयातच ‘पहाणी प्रत प्रमाणे’ दस्तऐवज (कागदपत्रे) मिळवण्यासाठी स्वतंत्र काउंटरची व्यवस्था करावी, अशी मागणी समाजसेवक ज्योतिबा भेंडिगेरी यांनी केली आहे.
खानापूर तालुक्यात बहुतांश लोक मराठी भाषिक असून, अनेकजण अशिक्षित आहेत. तसेच जंगल लगतच्या भागातून येणाऱ्या नागरिकांना सार्वजनिक वाहतूक व्यवस्था नसल्यामुळे तहसील कार्यालयात येण्यासाठीही मोठा त्रास होतो. अशा परिस्थितीत खाजगी व्यक्तीकडून दस्तऐवज घेतल्यास नागरिकांना अधिक पैसे द्यावे लागत आहेत. त्यामुळे गरजू आणि गरीब नागरिकांचे आर्थिक शोषण होत आहे.
या मागणीसाठी समाजसेवक ज्योतिबा भेंडिगेरी यांच्यासोबत सामाजिक कार्यकर्ते दशरथ बनोशी, यशवंत बिर्जे, जयवंत निडगलकर, रामचंद्र पाटील, पत्रकार शशिकांत तळवार आणि इतर कार्यकर्ते उपस्थित होते.
ಕಂದಾಯ ದಾಖಲೆಗಳು ಮತ್ತು ಇನ್ನಿತರ ದಾಖಲೆಗಳನ್ನ ತಹಸೀಲ್ದಾರ ಕಛೇರಿಯಲ್ಲಿಯೆ ಸಿಗುವಂತೆ ಕ್ರಮ ಕೈಗೋಳ್ಳಲು ಸಮಾಜ ಸೇವಕ. ಜ್ಯೋತಿಬಾ ಬೆಂಡಿಗೇರಿ ಅವರಿಂದ ಮನವಿ
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಭೂ ಕಂದಾಯ ದಾಖಲೆಗಳು ಮತ್ತು ಇನ್ನಿತರ ವಿವಿಧ ದಾಖಲೆಗಳು ಆನಲೈನಲ್ಲಿ ಪಡೆಯಬೆಕೆಂಬ ಆದೇಶದಿಂದ ಸಾರ್ವಜನಿಕರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ ಸಂಭಂದ ಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರೆ
ಕ್ಯಾಶ ರೂಪದಲ್ಲಿ ಹಣ ಪಡಿಯಬಾರದೆಂಬ ಮೇಲದಿಕಾರಿಗಳ ನಿರ್ದೇಶನ ಇರುವುದರಿಂದ ನಾವು ನಿಮಗೆ ದಾಖಲಾತಿಗಳನ್ನು ಕೂಡುಲಿಕ್ಕೆ ಆಗುವುದಿಲ್ಲ ಅದರಿಂದ ಹೊರಗಡೆ ಆನಲೈನಲ್ಲಿ ಪಡೆದುಕೊಳ್ಳಲು ಸೂಚಿಸುತ್ತಿದ್ದೇವೆ ಎನ್ನುತ್ತಾರೆ
ಹೀಗೆ ಹೇಳುವದರಿಂದ ಸಾರ್ವಜನಿಕರಿಗೆ ಎಲ್ಲಿಗೆ ಹೋಗಿ ದಾಖಲೆಗಳನ್ನು ಪಡೆಯಬೇಕು ಹಾಗೂ ಅದರ ಮೊತ್ತ ಎಷ್ಟು ಅಂತ ಮಾಹಿತಿ ಇಲ್ಲದೆ ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಸಾರ್ವಜನಿಕರಿಗೆ ಅನಾನುಕೂಲ ಮತ್ತು ಆರ್ಥಿಕ ನಷ್ಟ ಉಂಟಾಗುತ್ತಿದೆ ಪರ್ಯಾಯ ವ್ಯವಸ್ಥೆಯಾಗಿ ತಹಸೀಲ್ದಾರ್ ಕಚೇರಿಯಲ್ಲಿಯೆ ಪಹಣಿ ಪತ್ರಿಕೆಯನ್ನು ನೀಡುವ ಕೌಂಟರನ ಮಾದರಿಯಂತೆ ಭೂ ದಾಖಲೆಗಳು ಮತ್ತು ಇನ್ನಿತರ ವಿವಿಧ ದಾಖಲೆಗಳು ಸಾರ್ವಜನಿಕರ ಕೈ ಗೆಟಕುವಂತೆ ಸಿಗಬೇಕು
ಖಾನಾಪೂರ ತಾಲೂಕಿನಲ್ಲಿ ಹೆಚ್ಚು ಮರಾಠಿ ಬಾಷಿಕರಿದ್ದು ಅವಿದ್ಯಾವಂತರಿದ್ದಾರೆ ಕಾಡಿನಂಚಿನಿಂದ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಕಷ್ಟ ಪಟ್ಟು ಪಟ್ಟಣಕ್ಕೆ ಬರುತ್ತಾರೆ ಅಂತಹದರಲ್ಲಿ ಖಾಸಗಿ ವ್ಯಕ್ತಿಗಳಲ್ಲಿ ದಾಖಲೆಗಳನ್ನ ಪಡೆಯಲು ಹೋದರೆ ಸಾಕಷ್ಟು ಹಣ ಸುಲಿಗೆಯಿಂದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ ಎಂದು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು
ಈ ಸಂಧರ್ಭದಲ್ಲಿ ಸಮಾಜ ಸೇವಕ ಜ್ಯೋತಿಭಾ ಬೆಂಡಿಗೇರಿ ಹೋರಾಟಗಾರರಾದ ಧಶರಥ ಬನೊಶಿ. ಯಶವಂತ ಬಿರ್ಜೆ. ಜಯವಂತ ನಿಡೆಗಲಕರ. ರಾಮಚಂದ್ರ ಪಾಟೀಲ. ಪತ್ರಕರ್ತ ಶಶಿಕಾಂತ್ ತಳವಾರ ಇನ್ನಿತರರು ಉಪಸ್ಥಿತರಿದ್ದರು

