भिमगड वन्यजीव अभयारण्यात वाघांची वाढ; कृष्णापूर गाव स्थलांतराबाबत प्रशासनाची ग्रामस्थांशी चर्चा.
खानापूर : अलीकडेच झालेल्या वाघांच्या गणनेनुसार भिमगड वन्यजीव अभयारण्य येथे वाघांची संख्या वाढल्याची माहिती समोर आली आहे. त्याचप्रमाणे दांडेली अरण्य, काली टायगर रिझर्व्ह आणि अणशी राष्ट्रीय उद्यान येथेही वाघांची संख्या वाढत असल्याची नोंद झाली आहे. या पार्श्वभूमीवर वाघांच्या संवर्धनासाठी या अरण्य परिसरात मानवी हस्तक्षेप कमी करण्याच्या दृष्टीने केंद्र सरकार पुढील काळात तयारी सुरू करणार असल्याची माहिती जिल्हाधिकारी मोहम्मद रोशन यांनी दिली.

रविवारी जिल्हाधिकारी रोशन यांनी अरण्य विभागाच्या अधिकाऱ्यांसह भिमगड वनक्षेत्रातील कृष्णापूर गावाला भेट देऊन दाट अरण्यात असलेल्या या गावाचे अन्यत्र स्थलांतर करण्याबाबत ग्रामस्थांशी चर्चा केली.
यावेळी बोलताना त्यांनी सांगितले की, वाघांच्या संरक्षणासाठी केंद्र सरकार पुढील काळात कठोर भूमिका घेण्याची शक्यता आहे. कृष्णापूर गावाच्या आसपास वाघांचा वावर असल्याचे अरण्य विभागाच्या नोंदींमध्ये स्पष्ट झाले आहे. त्यामुळे भिमगड अभयारण्यातील रहिवाशांसाठी राज्य सरकारने अरण्य विभागामार्फत विशेष पॅकेज जाहीर केले आहे. हे पॅकेज स्वीकारून कृष्णापूर गावातील नागरिकांनी अरण्य क्षेत्रातून मुख्य प्रवाहात यावे, अशी विभागाची अपेक्षा असल्याचे त्यांनी सांगितले.

विशेष पॅकेजबरोबरच ग्रामस्थांच्या इतर मागण्याही चर्चेतून पूर्ण करण्यासाठी जिल्हा प्रशासन प्रयत्न करेल, असेही त्यांनी स्पष्ट केले. मात्र स्थलांतराच्या बाबतीत सरकारकडून कोणताही दबाव किंवा सक्ती केली जाणार नाही. ग्रामस्थांनी स्वेच्छेने स्थलांतरास संमती दिल्यास त्यांना अरण्य विभागाने जाहीर केलेले कायमस्वरूपी पुनर्वसन व इतर सुविधा देण्यासाठी प्रशासन कटिबद्ध असल्याचे त्यांनी नमूद केले.
यावेळी भीमगड विभाग वनाधिकारी सैय्यद नदाफ यांनी स्थलांतराची नियमावली, प्रक्रिया, भरपाईची पद्धत तसेच आवश्यक कागदपत्रांची माहिती ग्रामस्थांना दिली.
या बैठकीस कृष्णापूर गावातील नागरिक तसेच अरण्य विभागाचे कर्मचारी उपस्थित होते.
ಭೀಮಗಡ ವನ್ಯಜೀವಿ ಅಭಯಾರಣದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ; ಕೃಷ್ಣಾಪುರ ಗ್ರಾಮ ಸ್ಥಳಾಂತರ ಕುರಿತು ಆಡಳಿತದಿಂದ ಗ್ರಾಮಸ್ಥರೊಂದಿಗೆ ಚರ್ಚೆ.
ಖಾನಾಪುರ : ಇತ್ತೀಚೆಗೆ ನಡೆದ ಹುಲಿಗಳ ಗಣತಿಯಲ್ಲಿ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವ ಮಾಹಿತಿ ಲಭ್ಯವಾಗಿದೆ. ಅದೇ ರೀತಿ ದಾಂಡೇಲಿ ಅರಣ್ಯ, ಕಾಳಿ ಟೈಗರ್ ರಿಸರ್ವ್ ಹಾಗೂ ಅಣಶಿ ರಾಷ್ಟ್ರೀಯ ಉದ್ಯಾನವನಗಳಲ್ಲಿ ಕೂಡ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಹುಲಿಗಳ ಸಂರಕ್ಷಣೆಯ ದೃಷ್ಟಿಯಿಂದ ಈ ಅರಣ್ಯ ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಸಿದ್ಧತೆ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ತಿಳಿಸಿದ್ದಾರೆ.
ಭಾನುವಾರ ಜಿಲ್ಲಾಧಿಕಾರಿ ಮಮ್ಮದ್ ರೋಶನ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೀಮಗಡ ಅರಣ್ಯ ವ್ಯಾಪ್ತಿಯ ಕೃಷ್ಣಾಪುರ ಗ್ರಾಮಕ್ಕೆ ಭೇಟಿ ನೀಡಿ, ದಟ್ಟ ಅರಣ್ಯದಲ್ಲಿರುವ ಈ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಹುಲಿಗಳ ಸಂರಕ್ಷಣೆಗೆ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಕಠಿಣ ನಿಲುವು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು. ಕೃಷ್ಣಾಪುರ ಗ್ರಾಮದ ಸುತ್ತಮುತ್ತ ಹುಲಿಗಳ ಸಂಚಾರ ಇರುವುದನ್ನು ಅರಣ್ಯ ಇಲಾಖೆಯ ದಾಖಲೆಗಳು ಸ್ಪಷ್ಟಪಡಿಸುತ್ತವೆ.
ಆದ್ದರಿಂದ ಭೀಮಗಡ ಅಭಯಾರಣ್ಯದ ನಿವಾಸಿಗಳಿಗಾಗಿ ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ಮೂಲಕ ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್ ಅನ್ನು ಸ್ವೀಕರಿಸಿ ಕೃಷ್ಣಾಪುರ ಗ್ರಾಮದ ನಾಗರಿಕರು ಅರಣ್ಯ ಪ್ರದೇಶದಿಂದ ಮುಖ್ಯ ಪ್ರವಾಹಕ್ಕೆ ಬರಬೇಕು ಎಂಬುದು ಇಲಾಖೆಯ ನಿರೀಕ್ಷೆಯಾಗಿದೆ ಎಂದು ಅವರು ಹೇಳಿದರು.
ವಿಶೇಷ ಪ್ಯಾಕೇಜ್ ಜೊತೆಗೆ ಗ್ರಾಮಸ್ಥರ ಇತರ ಬೇಡಿಕೆಗಳನ್ನೂ ಚರ್ಚೆಯ ಮೂಲಕ ಈಡೇರಿಸಲು ಜಿಲ್ಲಾಡಳಿತ ಪ್ರಯತ್ನ ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಆದರೆ ಸ್ಥಳಾಂತರದ ವಿಷಯದಲ್ಲಿ ಸರ್ಕಾರದಿಂದ ಯಾವುದೇ ಒತ್ತಡ ಅಥವಾ ಬಲವಂತ ಮಾಡಲಾಗುವುದಿಲ್ಲ. ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದರೆ, ಅರಣ್ಯ ಇಲಾಖೆ ಘೋಷಿಸಿರುವ ಶಾಶ್ವತ ಪುನರ್ವಸತಿ ಹಾಗೂ ಇತರೆ ಸೌಲಭ್ಯಗಳನ್ನು ನೀಡಲು ಆಡಳಿತ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭೀಮಗಡ ವಿಭಾಗ ಅರಣ್ಯಾಧಿಕಾರಿ ಸಯ್ಯಿದ್ ನದಾಫ್ ಅವರು ಸ್ಥಳಾಂತರದ ನಿಯಮಾವಳಿ, ಪ್ರಕ್ರಿಯೆ, ಪರಿಹಾರದ ವಿಧಾನ ಹಾಗೂ ಅಗತ್ಯ ದಾಖಲೆಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಈ ಸಭೆಯಲ್ಲಿ ಕೃಷ್ಣಾಪುರ ಗ್ರಾಮದ ನಾಗರಿಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.



