
घरांची पडझड झालेल्या कुटुंबीयांना जिल्हा पालकमंत्री श्री सतीश जारकीहोळी यांच्या हस्ते परिहारनिधी धनादेश सुपूर्द
खानापूर : खानापूर तालुक्यातील भुरूणकी गावात पावसाच्या अतिवृष्टीमुळे पडझड झालेल्या घरांची पाहणी करून जिल्हा पालकमंत्री सतीश जारकीहोळी यांनी घरांची पडझड झालेल्या दोन कुटुंबीयांना परिहार निधीचा धनादेश सुपूर्द केला.
ಮನೆ ಕುಸಿದ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪರಿಹಾರನಿಧಿ ಚೆಕ್ ವಿತರಿಸಿದರು.
ಖಾನಾಪುರ: ಖಾನಾಪುರ ತಾಲೂಕಿನ ಭುರುಂಕಿ ಗ್ರಾಮದಲ್ಲಿ ಭಾರೀ ಮಳೆಗೆ ಮನೆ ಕುಸಿದು ಬಿದ್ದ ಎರಡು ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪರಿಹಾರ ನಿಧಿಯ ಚೆಕ್ ವಿತರಿಸಿದರು.ಭುರುಂಕಿ ಗ್ರಾಮದ ಶ್ರೀ ಮನೋಹರ ಗೋಪಾಲ್ ತಾರೋಡ್ಕರ್ ಮತ್ತು ಖೈರುನೀಸಾ ಹೆರೇಕರ್ ಅವರ ಮನೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಮನೆಯನ್ನು ಪರಿಶೀಲಿಸಿ ತಲಾ ಲಕ್ಷದ ಇಪ್ಪತ್ತು ಸಾವಿರ ಪರಿಹಾರ ನಿಧಿ ಚೆಕ್ ನೀಡಿದರು. ಈ ಸಂದರ್ಭದಲ್ಲಿ ಖಾನಾಪುರ ತಾಲೂಕು ಶಾಸಕ ಶ್ರೀ ವಿಠ್ಠಲ ಹಲಗೇಕರ, ಮಾಜಿ ಶಾಸಕಿ ಡಾ.ಅಂಜಲಿತಾಯಿ ನಿಂಬಾಳ್ಕರ್, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಖಾನಾಪುರ ತಹಸೀಲ್ದಾರ ಪ್ರಕಾಶ ಗಾಯಕವಾಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
