धर्मस्थळ प्रकरणावरून हिंदू धर्मीयांचा विराट मोर्चा ; तहसीलदारांना उद्या निवेदन.
खानापूर : धर्मस्थळ परिसरात मोठ्या प्रमाणात मृतदेह पुरल्याचे वृत्त हे पूर्णपणे खोटे असल्याचे तपासाअंती उघड झाले आहे. या प्रकरणातून जाणीवपूर्वक हिंदू धर्मियांचे पवित्र स्थान असलेल्या धर्मस्थळची बदनामी करण्याचा प्रयत्न झाल्याचे स्पष्ट झाले आहे. त्यामुळे या कटाचा सखोल तपास करून सूत्रधारांचा शोध घेऊन त्यांच्यावर कठोर कारवाई करण्याची मागणी भारतीय जनता पार्टीने केली आहे.
या मागणीसाठी उद्या सोमवार दिनांक 25 ऑगस्ट रोजी हिंदू धर्मीय समाजबांधवांच्या वतीने खानापूर तहसीलदार कार्यालयावर भव्य मोर्चा काढण्यात येणार आहे. या मोर्चाची सुरुवात शहरातील राम मंदिर व मलप्रभा नदी परिसरातून होणार असून, मोर्चा वीठ्ठल देव गल्ली, देसाई गल्ली, स्टेशन रोड मार्गे तहसीलदार कार्यालयाकडे जाईल. तहसीलदार कार्यालयात पोहोचल्यावर तहसीलदारांना निवेदन देण्यात येणार आहे. या मोर्चात हजारोंच्या संख्येने हिंदू बांधवांनी सहभागी व्हावे, असे आवाहन बैठकीतून करण्यात आले.
शनिवारी बांधकाम खात्याच्या विश्रामगृहात भारतीय जनता पार्टीची कार्यकारिणी बैठक घेण्यात आली. या बैठकीच्या अध्यक्षस्थानी जिल्हाध्यक्ष बसवराज सानिकोप होते. यावेळी खानापूरचे आमदार विठ्ठल हलगेकर, भाजपाचे जिल्हा उपाध्यक्ष प्रमोद कोचेरी, नेते संजय कुबल, महिला नेत्या धनश्री सरदेसाई यांनी मनोगत व्यक्त केले.
बैठकीत तालुका पंचायतीचे माजी उपसभापती सुरेश देसाई, माजी उपसभापती व भाजपाचे जनरल सेक्रेटरी मल्लाप्पा मारिहाळ, जनरल सेक्रेटरी गुंडू तोपिनकट्टी, भाजप युवा मोर्चाचे जिल्हा उपाध्यक्ष पंडित ओगले, ॲड. चेतन मनेरिकर, राजेंद्र रायका, मोहन पाटील, प्रकाश निलजकर, सुनील नाईक आदी पदाधिकारी व कार्यकर्ते उपस्थित होते.
भाजपने स्पष्ट केले की, धर्मस्थळाचे नाव बदनाम करणाऱ्यांना व त्यांच्या पाठीराख्यांना सोडले जाणार नाही. सरकारने तातडीने कारवाई करून हिंदू समाजाच्या भावना दुखावणाऱ्यांना शिक्षा करावी, अशी मागणी या मोर्चातून केली जाणार आहे.
ಧರ್ಮಸ್ಥಳ ಪ್ರಕರಣದ ವಿರುದ್ಧ ಹಿಂದೂ ಧಾರ್ಮಿಕ ರಿಂದ ಭವ್ಯ ಮೆರವಣಿಗೆ ; ನಾಳೆ ತಹಶೀಲ್ದಾರರಿಗೆ ಮನವಿ ಪತ್ರ.
ಖಾನಾಪುರ : ಧರ್ಮಸ್ಥಳ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಶವಗಳನ್ನು ಹೂತ್ತಲಾಗಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣದ ಮೂಲಕ ಹಿಂದೂ ಧರ್ಮೀಯರ ಪವಿತ್ರ ತೀರ್ಥಕ್ಷೇತ್ರವಾದ ಧರ್ಮಸ್ಥಳದ ಅಪಕೀರ್ತಿ ತರುವ ಪ್ರಯತ್ನ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಈ ಜಾಗದ ಸಂಪೂರ್ಣ ತನಿಖೆ ನಡೆಸಿ, ಇದರ ಹಿಂದೆ ಇರುವ ಸೂತ್ರಧಾರರನ್ನು ಪತ್ತೆಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಜನತಾ ಪಕ್ಷವು ಆಗ್ರಹಿಸಿದೆ.
ಈ ಬೇಡಿಕೆಯನ್ನು ಒತ್ತಾಯಿಸಲು ನಾಳೆ (ಸೋಮವಾರ) ಹಿಂದೂ ಸಮಾಜಬಾಂಧವರಿಂಧ ಖಾನಾಪುರ ತಹಶೀಲ್ದಾರ್ ಕಚೇರಿಗೆ ಭವ್ಯ ಮೋರಚಾ (ಮೆರವಣಿಗೆ) ಆಯೋಜಿಸಲಾಗಿದೆ. ಈ ಮೆರವಣಿಗೆ ನಗರದಲ್ಲಿರುವ ರಾಮಮಂದಿರ ಹಾಗೂ ಮಲಪ್ರಭಾ ನದಿ ಘಟ್ ದಿಂದ ಆರಂಭವಾಗಿ, ವಿಠ್ಠಲ್ ದೇವ ಗಲ್ಲಿ, ದೇಸಾಯಿ ಗಲ್ಲಿ, ಸ್ಟೇಷನ್ ರಸ್ತೆ ಮಾರ್ಗವಾಗಿ ತಹಶೀಲ್ದಾರ್ ಕಚೇರಿಯವರೆಗೆ ಸಾಗಲಿದೆ. ಕಚೇರಿಗೆ ತಲುಪಿದ ನಂತರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಸಾವಿರಾರು ಹಿಂದೂ ಬಾಂಧವರು ಈ ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಸಭೆಯಲ್ಲಿ ಕೋರಲಾಗಿದೆ.
ಶನಿವಾರ ಸರ್ಕಾರದ ಪಿಡಬ್ಲ್ಯೂಡಿ ಕಟ್ಟಡ ಖಾತೆಯ ವಿಶ್ರಾಂತಿ ಗೃಹದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಬಸವರಾಜ ಸಾನಿಕೊಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ಖಾನಾಪುರ ಶಾಸಕರಾದ ವಿಠ್ಠಲ್ ಹಲಗೆಕರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೊದ್ ಕೋಚೇರಿ, ನಾಯಕ ಸಂಜಯ ಕುಬಲ, ಮಹಿಳಾ ನಾಯಕಿ ಧನಶ್ರೀ ಸರದೇಶಾಯಿ ತಮ್ಮ ಮನೋಭಾವ ವ್ಯಕ್ತಪಡಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ್ ದೇಸಾಯಿ, ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ಜನರಲ್ ಸೆಕ್ರಟರಿ ಮಲ್ಲಪ್ಪ ಮಾರಿಹಾಳ, ಜನರಲ್ ಸೆಕ್ರಟರಿ ಗುಂಡು ತೊಪಿನಕಟ್ಟಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ ಓಗಲೆ, ಅಡ್ವ. ಚೇತನ ಮನೇರಿಕರ್, ರಾಜೇಂದ್ರ ರೈಕಾ, ಮೋಹನ್ ಪಾಟೀಲ್, ಪ್ರಕಾಶ ನಿಲಜ್ಕರ್, ಸುನೀಲ ನಾಯಕ ಪ್ರಶಾಂತ್ ಲಕ್ಕೆಬೈಲಕರ ರ್ಹಾಗೂ ಇತರೆ ಹುದ್ದೆಯವರು ಮತ್ತು ಕಾರ್ಯಕರ್ತರು ಹಾಜರಿದ್ದರು.
ಬಿಜೆಪಿಯು ಸ್ಪಷ್ಟಪಡಿಸಿದ್ದು, ಧರ್ಮಸ್ಥಳದ ಹೆಸರನ್ನು ಅಪಕೀರ್ತಿ ಮಾಡಿದವರನ್ನೂ ಅವರ ಬೆಂಬಲಿಗರನ್ನೂ ಬಿಡುವುದಿಲ್ಲ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತಂದವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂಬ ಬೇಡಿಕೆಯನ್ನು ಈ ಮನವಿ ಮುಲಕ ಕೂರಲಾಗಿದೆ.



