डीसीसी बँक निवडणुकीसाठी अरविंद पाटील यांचा शक्ती प्रदर्शनाने उमेदवारी अर्ज दाखल.
बेळगाव : संपूर्ण जिल्ह्याचेच नव्हे तर कर्नाटक राज्याचे लक्ष वेधून घेतलेल्या बेळगाव जिल्हा मध्यवर्ती सहकारी बँकेच्या (DCC Bank) निवडणुकीसाठी आज गुरुवार, दिनांक 9 ऑक्टोबर रोजी जिल्ह्यातील अनेक नेते मंडळींनी आपला उमेदवारी अर्ज दाखल केला.
या पार्श्वभूमीवर खानापूर तालुक्याचे माजी आमदार व डीसीसी बँकेचे विद्यमान संचालक श्री. अरविंद पाटील यांनी आज मोठ्या शक्तीप्रदर्शनासह आपला उमेदवारी अर्ज दाखल केला. अर्ज दाखल करताना तालुक्यातील विविध सोसायट्यांचे अध्यक्ष, कार्यकर्ते, समर्थक, ग्रामपंचायतींचे सदस्य आणि नागरिक मोठ्या संख्येने उपस्थित होते. उमेदवारी दाखल करण्यापूर्वी समर्थकांनी घोषणाबाजी करून उत्साहाचे वातावरण निर्माण केले.
दरम्यान, दोन दिवसांपूर्वी गर्लगुंजी पीकेपीएसचे चेअरमन आणि सामाजिक कार्यकर्ते श्री. राजू सिद्धांनी यांनीही आपल्या उमेदवारीचा अर्ज दाखल केला होता. त्यामुळे या निवडणुकीत खानापूर तालुक्यातील दोन प्रमुख नेत्यांमध्ये रस्सीखेच होण्याची शक्यता होती. मात्र सध्याच्या परिस्थितीनुसार अरविंद पाटील यांना 54 पैकी तब्बल 48 कृषी पतसंस्थांचा ठाम पाठिंबा मिळाल्याचे वृत्त आहे. त्यामुळे ही निवडणूक जवळपास एकतर्फी होण्याची चिन्हे दिसत आहेत.
डीसीसी बँकेच्या संचालक मंडळासाठीची ही महत्त्वाची निवडणूक 19 ऑक्टोबर रोजी पार पडणार आहे. त्यानंतरच या स्पर्धेवर अंतिम शिक्कामोर्तब होणार आहे. जिल्ह्यातील सहकार क्षेत्रातील ही निवडणूक अत्यंत प्रतिष्ठेची मानली जात असून, त्याकडे राजकीय व सहकार क्षेत्रातील सर्वांचे लक्ष लागले आहे.
ಡಿ.ಸಿ.ಸಿ. ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಲು ಅರವಿಂದ ಪಾಟೀಲರ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ
ಬೆಳಗಾವಿ : ಸಂಪೂರ್ಣ ಜಿಲ್ಲೆ ಮಾತ್ರವಲ್ಲದೆ, ಕರ್ನಾಟಕ ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (DCC Bank) ಚುನಾವಣೆಗೆ ಇಂದು ಗುರುವಾರ, ಅಕ್ಟೋಬರ್ 9ರಂದು, ವಿವಿಧ ನಾಯಕರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ಖಾನಾಪೂರ ತಾಲ್ಲೂಕಿನ ಮಾಜಿ ಶಾಸಕರು ಹಾಗೂ ಡಿ.ಸಿ.ಸಿ. ಬ್ಯಾಂಕ್ನ ಹಾಲಿ ನಿರ್ದೇಶಕರಾದ ಶ್ರೀ ಅರವಿಂದ ಪಾಟೀಲ ಅವರು ಇಂದು ಭರ್ಜರಿ ಶಕ್ತಿ ಪ್ರದರ್ಶನದೊಂದಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ತಾಲ್ಲೂಕಿನ ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು, ಕಾರ್ಯಕರ್ತರು, ಬೆಂಬಲಿಗರು, ಗ್ರಾಮಪಂಚಾಯತ್ ಸದಸ್ಯರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ನಾಮಪತ್ರ ಸಲ್ಲಿಕೆಗೆ ಮುನ್ನ ಬೆಂಬಲಿಗರು ಘೋಷಣೆಗಳೊಂದಿಗೆ ಉತ್ಸಾಹಭರಿತ ವಾತಾವರಣ ನಿರ್ಮಿಸಿದರು.
ಇದರ ಎರಡು ದಿನಗಳ ಹಿಂದೆ ಗರ್ಲಗುಂಜಿ ಪಿಕೆಪಿಎಸ್ ಅಧ್ಯಕ್ಷ ಹಾಗೂ ಸಮಾಜಸೇವಕ ಶ್ರೀ ರಾಜು ಸಿದ್ದಣ್ಣಿಯವರು ಕೂಡ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು. ಇದರಿಂದ ಖಾನಾಪೂರ ತಾಲ್ಲೂಕಿನ ಇಬ್ಬರು ಪ್ರಮುಖ ನಾಯಕರ ಮಧ್ಯೆ ಸ್ಪರ್ಧೆ ನಡೆಯುವುದು ಬಹುತೇಕ ಖಚಿತವಾಗಿದೆ.
ಆದರೆ ಪ್ರಸ್ತುತ ಪರಿಸ್ಥಿತಿಯ ಪ್ರಕಾರ ಅರವಿಂದ ಪಾಟೀಲ ಅವರಿಗೆ ಒಟ್ಟು 54 ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಲ್ಲಿ 48 ಸಂಸ್ಥೆಗಳ ಪ್ರಬಲವಾದ ಬೆಂಬಲ ದೊರೆತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಚುನಾವಣೆ ಏಕಪಕ್ಷೀಯವಾಗಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ಡಿ.ಸಿ.ಸಿ. ಬ್ಯಾಂಕ್ನ ನಿರ್ದೇಶಕ ಮಂಡಳಿ ಚುನಾವಣೆಯು ಅಕ್ಟೋಬರ್ 19ರಂದು ನಡೆಯಲಿದ್ದು, ಆ ದಿನ ಅಂತಿಮವಾಗಿ ಸ್ಪರ್ಧೆಯ ಚಿತ್ರ ಸ್ಪಷ್ಟವಾಗಲಿದೆ. ಬೆಳಗಾವಿ ಜಿಲ್ಲೆಯ ಸಹಕಾರ ಕ್ಷೇತ್ರದ ಈ ಚುನಾವಣೆ ಅತ್ಯಂತ ಪ್ರತಿಷ್ಠಿತವಾಗಿದ್ದು, ರಾಜಕೀಯ ಮತ್ತು ಸಹಕಾರ ಕ್ಷೇತ್ರದಲ್ಲಿನ ಎಲ್ಲರ ಗಮನ ಇದರತ್ತ ನೆಟ್ಟಿದೆ.

