
जिल्ह्यातील राजकारण व राजकीय दृष्टीने डीसीसी बँक निवडणुकीतून चन्नराज हट्टीहोळी यांची उमेदवारी मागे ; पालकमंत्री सतीश जारकीहोळी.
बेळगाव ; बेळगाव जिल्हा मध्यवर्ती सहकारी (डीसीसी) बँकेच्या निवडणुकीतून विधान परिषद सदस्य चन्नराज हट्टीहोळी यांची उमेदवारी मागे घेण्यात आली असल्याची माहिती जिल्ह्याचे पालकमंत्री सतीश जारकीहोळी यांनी दिली आहे.
एका व्हिडिओ संदेशातून बोलताना पालकमंत्री जारकीहोळी म्हणाले,
“डीसीसी बँकेची निवडणूक ऑक्टोबर महिन्यात होणार आहे. काही ठिकाणी निवडणूक होत असून, काही ठिकाणी बिनविरोध निवडणुकीसाठी प्रयत्न सुरू आहेत. ही निवडणूक कोणत्याही पक्षाच्या वतीने लढविण्यात येत नाही, ती पक्षविरहित आहे.”
खानापूरमधून या निवडणुकीसाठी विधान परिषद सदस्य चन्नराज हट्टीहोळी गेल्या काही महिन्यांपासून तयारीत होते. तालुक्यातील विविध पीकेपीएस सोसायट्यांच्या संचालकांशी त्यांनी संपर्क साधून चांगला प्रतिसाद मिळवला होता. मात्र, जिल्ह्यातील एकंदर राजकीय परिस्थिती व राजकारणाच्या पार्श्वभूमीवर त्यांची उमेदवारी मागे घेण्याचा निर्णय घेण्यात आल्याचे जारकीहोळी यांनी स्पष्ट केले.
“डीसीसी बँक निवडणुकीबाबत हट्टीहोळी यांच्याशी आम्ही सविस्तर चर्चा केली. त्यातूनच त्यांच्या उमेदवारीबाबत मागे घेण्याचा निर्णय घेतला आहे. येत्या काही दिवसांत याबाबत सविस्तर खुलासा करून माहिती देण्यात येईल,” असेही पालकमंत्र्यांनी सांगितले.
👉 या निर्णयामुळे खानापूर तसेच जिल्ह्यातील राजकीय घडामोडींना नवे वळण मिळाले आहे.
ಜಿಲ್ಲಾ ರಾಜಕೀಯ ಮತ್ತು ರಾಜಕೀಯ ದೃಷ್ಟಿಯ ಕಾರಣದಿಂದಾಗಿ, ಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧೆಯಿಂದ ಚನ್ನರಾಜ್ ಹಟ್ಟಿಹೊಳಿ ಉಮೇದುವಾರಿಕೆ ಹಿಂದಕ್ಕೆ; ಸಚಿವ ಸತೀಶ್ ಜಾರಕಿಹೊಳಿ.
ಬೆಳಗಾವಿ ; ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ಚುನಾವಣೆಯಿಂದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಸ್ಪರ್ಧೆಯನ್ನು ಹಿಂಪಡೆಯಲಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೀಡಿದ್ದಾರೆ.
ವೀಡಿಯೊ ಸಂದೇಶದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಜಾರಕಿಹೊಳಿ ಅವರು ಈ ಸಂದರ್ಭದಲ್ಲಿ ಮಾಹಿತಿ ತಿಳಿಸಿದ್ದಾರೆ,
“ಡಿಸಿಸಿ ಬ್ಯಾಂಕ್ ಚುನಾವಣೆ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದ್ದು. ಕೆಲವು ಕಡೆ ಚುನಾವಣೆಯಾಗಲಿದ್ದು, ಕೆಲವು ಕಡೆ ಅವಿರೋಧ ಚುನಾವಣೆಗೆ ಪ್ರಯತ್ನಗಳು ನಡೆಯುತ್ತಿವೆ. ಈ ಚುನಾವಣೆ ಯಾವುದೇ ಪಕ್ಷದ ಪರವಾಗಿ ನಡೆಯುವುದಿಲ್ಲ, ಅದು ಪಕ್ಷರಹಿತವಾಗಿದೆ.” ಎಂದರು.
ಖಾನಾಪುರದಿಂದ ಈ ಚುನಾವಣೆಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕಳೆದ ಕೆಲವು ತಿಂಗಳಿಂದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು. ತಾಲ್ಲೂಕಿನ ವಿವಿಧ ಪಿಕೆಪಿಎಸ್ ಸೊಸೈಟಿಗಳ ನಿರ್ದೇಶಕರೊಂದಿಗೆ ಅವರು ಸಂಪರ್ಕ ಸಾಧಿಸಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದರು. ಆದರೆ, ಜಿಲ್ಲೆಯ ಒಟ್ಟಾರೆ ರಾಜಕೀಯ ಪರಿಸ್ಥಿತಿ ಹಾಗೂ ರಾಜಕಾರಣದ ಹಿನ್ನೆಲೆಯ ಮೇಲೆ ಅವರ ಅಭ್ಯರ್ಥಿತ್ವ ಹಿಂಪಡೆಯುವ ನಿರ್ಧಾರ ಕೈಗೊಂಡಿರುವುದಾಗಿ ಜಾರಕಿಹೊಳಿ ಸ್ಪಷ್ಟಪಡಿಸಿದರು.
“ಡಿಸಿಸಿ ಬ್ಯಾಂಕ್ ಚುನಾವಣೆಯ ಕುರಿತು ಹಟ್ಟಿಹೊಳಿ ಅವರೊಂದಿಗೆ ನಾವು ಸವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ. ಅದರಲ್ಲಿಯೇ ಅವರ ಸ್ಪರ್ಧೆಯನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಇದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನಿಡಲಾಗುವುದು,” ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
👉 ಈ ನಿರ್ಧಾರದಿಂದ ಖಾನಾಪುರ ಸೇರಿದಂತೆ ಜಿಲ್ಲೆಯ ರಾಜಕೀಯ ಬೆಳವಣಿಗೆಗಳಿಗೆ ಹೊಸ ತಿರುವು ದೊರೆತಿದೆ.
