नंदगड मार्केटिंग सोसायटीत गैरव्यवहार ; सहकारमंत्र्यांकडे तक्रार करणार – आमदार चन्नराज हट्टीहोळी यांची माहिती
खानापूर, ता. 8 ऑगस्ट – नंदगड येथील नामवंत मार्केटिंग सोसायटीमध्ये आर्थिक गैरव्यवहार झाल्याचा आरोप करत आमदार चन्नराज हट्टीहोळी यांनी संबंधितांवर कडक कारवाईची मागणी केली आहे. या प्रकरणी राज्याचे सहकारमंत्री आणि सहकार निबंधकांकडे लवकरच लेखी तक्रार करण्यात येणार असल्याची माहिती त्यांनी खानापूर येथे घेतलेल्या पत्रकार परिषदेत दिली.
हट्टीहोळी यांनी सांगितले की, नंदगड मार्केटिंग सोसायटीतील गेल्या तीन वर्षांचे लेखापरीक्षण करण्यात आले असून त्यामध्ये अनेक आर्थिक अनियमितता आढळून आल्या आहेत. संचालक मंडळाने अध्यक्ष व उपाध्यक्ष यांच्या नावे आगाऊ रक्कम उचलल्याचे तसेच अधिकृत मर्यादेपेक्षा जास्त रक्कम व्यवहारात वापरण्यात आल्याचे स्पष्ट झाले आहे. याशिवाय, रेशनधान्य पुरवठा, मंगल कार्यालय आणि गॅस एजन्सी यांसारख्या सेवांच्या व्यवहारातही पारदर्शकतेचा अभाव असल्याचे त्यांनी निदर्शनास आणले.
“मार्केटिंग सोसायटी अनेक वर्षांपासून तोट्यात चालू आहे, यामुळे सामान्य शेतकरी आणि सभासदांचे मोठे नुकसान झाले आहे. लेखापरीक्षण अहवालात स्पष्ट त्रुटी असूनही संबंधित खात्याकडून याकडे दुर्लक्ष करण्यात आले आहे. त्यामुळे हा विषय विधानसभेच्या अधिवेशनातही मांडणार आहोत,” असे हट्टीहोळी म्हणाले.
दरम्यान, या आरोपांवर नंदगड मार्केटिंग सोसायटीचे व्यवस्थापक ज्ञानेश्वर निलजकर यांनी प्रतिक्रिया दिली आहे. त्यांनी सांगितले की…
“नंदगड मार्केटिंग सोसायटी ही १९५८ पासून कार्यरत असून तालुक्यात अग्रगण्य म्हणून ओळखली जाते. सध्याच्या डीसीसी बँकेच्या निवडणुकीच्या पार्श्वभूमीवर विरोधकांकडे मुद्दा नसल्यामुळे हेतुपुरस्सर सोसायटीवर आरोप केले जात आहेत. हे सर्व आरोप राजकीय हेतूपोटी प्रेरित असून सोसायटी चौकशीला सामोरे जाण्यास पूर्णपणे तयार आहे.”
ನಂದಗಡ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಅವ್ಯವಹಾರ ; ಸಹಕಾರ ಸಚಿವರಿಗೆ ದೂರು ನೀಡುತ್ತೇನೆ – ಶಾಸಕ ಚನ್ನರಾಜ್ ಹಟ್ಟಿಹೊಳಿ ಅವರಿಂದ ಮಾಹಿತಿ.
ಖಾನಾಪುರ ; ನಂದಗಡದ ಪ್ರಸಿದ್ಧ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಆರ್ಥಿಕ ಅವ್ಯವಹಾರಗಳು ನಡೆದಿರುವ ಆರೋಪವನ್ನು ಶಾಸಕರಾದ ಚನ್ನರಾಜ ಹಟ್ಟಿಹೋಳಿ ಅವರು ಮುಂದಿಟ್ಟು, ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ರಾಜ್ಯದ ಸಹಕಾರ ಸಚಿವ ಹಾಗೂ ಸಹಕಾರ ನಿಬಂಧಕರಿಗೆ ಶೀಘ್ರದಲ್ಲೇ ಲಿಖಿತವಾಗಿ ದೂರು ಸಲ್ಲಿಸಲಾಗುವುದು ಎಂದು ಅವರು ಖಾನಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಟ್ಟಿಹೋಳಿ ಅವರು ಹೇಳಿದ ಪ್ರಕಾರ ನಂದಗಡ ಮಾರ್ಕೆಟಿಂಗ್ ಸೊಸೈಟಿಯ ಕಳೆದ ಮೂರು ವರ್ಷಗಳ ಲೆಕ್ಕಪರಿಶೋಧನೆಯು ಪೂರ್ಣಗೊಂಡಿದ್ದು, ಅದರಲ್ಲಿನಲ್ಲಿ ಹಲವಾರು ಆರ್ಥಿಕ ಅಕ್ರಮಗಳು ಬೆಳಕಿಗೆ ಬಂದಿವೆ. ಸಂಚಾಲಕ ಮಂಡಳಿಯು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹೆಸರಲ್ಲಿ ಮುಂಗಡ ಹಣವನ್ನು ತೆಗೆದುಕೊಂಡಿರುವುದು ಹಾಗೂ ಅಧಿಕೃತ ಮಿತಿ ಮೀರಿ ಹಣದ ವ್ಯವಹಾರ ನಡೆಸಿರುವುದು ದೃಢವಾಗಿದೆ. ಅಲ್ಲದೆ, ರೇಷನ್ ಧಾನ್ಯ ವಿತರಣೆ, ಮಂಗಲ ಕಾರ್ಯಾಲಯ ಹಾಗೂ ಗ್ಯಾಸ್ ಏಜೆನ್ಸಿಗಳ ವ್ಯವಹಾರಗಳಲ್ಲಿಯೂ ಪಾರದರ್ಶಕತೆಯ ಕೊರತೆ ಕಂಡುಬಂದಿದೆ.
“ಮಾರ್ಕೆಟಿಂಗ್ ಸೊಸೈಟಿ ಹಲವಾರು ವರ್ಷಗಳಿಂದ ನಷ್ಟದಲ್ಲಿಯೇ ನಡೆಯುತ್ತಿದೆ. ಇದರಿಂದ ಸಾಮಾನ್ಯ ರೈತರು ಹಾಗೂ ಸದಸ್ಯರಿಗೆ ಭಾರಿ ನಷ್ಟ ಉಂಟಾಗಿದೆ. ಲೆಕ್ಕಪರಿಶೋಧನಾ ವರದಿಯಲ್ಲಿ ಸ್ಪಷ್ಟವಾಗಿರುವ ದೋಷಗಳ ಬಗ್ಗೆ ಸಂಬಂಧಿತ ಇಲಾಖೆಗಳು ನಿರ್ಲಕ್ಷ್ಯ ತೋರಿರುವುದರಿಂದ ಈ ವಿಷಯವನ್ನು ವಿಧಾನಸಭೆಯ ಅಧಿವೇಶನದಲ್ಲೂ ಎತ್ತಿ ಹಿಡಿಯಲಿದ್ದೇವೆ,” ಎಂದು ಅವರು ಹೇಳಿದರು…
ಸೊಸೈಟಿಯ ವ್ಯವಸ್ಥಾಪಕರಿಂದ ಸ್ಪಷ್ಟಿಕರಣ
ಇದೇ ವೇಳೆ, ಈ ಆರೋಪಗಳ ಬಗ್ಗೆ ನಂದಗಡ ಮಾರ್ಕೆಟಿಂಗ್ ಸೊಸೈಟಿಯ ವ್ಯವಸ್ಥಾಪಕರಾದ ಜ್ಞಾನೇಶ್ವರ ನಿಲಜಕರ ಪ್ರತಿಕ್ರಿಯೆ ನೀಡುತ್ತಾ:
“ನಂದಗಡ ಮಾರ್ಕೆಟಿಂಗ್ ಸೊಸೈಟಿ 1958ರಿಂದ ಕಾರ್ಯನಿರ್ವಹಿಸುತ್ತಿದ್ದು, ತಾಲೂಕಿನಲ್ಲಿ ಹೆಸರಾಂತ ಸಂಸ್ಥೆಯಾಗಿದ್ದು, ಪ್ರಸ್ತುತ ನಡೆಯುತ್ತಿರುವ ಡಿಸಿಸಿಬಿ ಬ್ಯಾಂಕಿನ ಚುನಾವಣೆಯ ಹಿನ್ನೆಲೆಯಲ್ಲಿ ವಿರೋಧಿಗಳಿಗೆ ಯಾವದರೂ ವಿಷಯ ಬೇಕಾದ್ದರಿಂದ ರಾಜಕೀಯ ಪ್ರೇರಿತವಾಗಿ ಈ ಆರೋಪಗಳನ್ನು ಮಾಡಲಾಗುತ್ತಿದೆ. ಎಲ್ಲ ಆರೋಪಗಳು ರಾಜಕೀಯ ಹಿನ್ನಲೆಯಲ್ಲಿ ಮಾಡಲಾಗಿದೆ. ಸೊಸೈಟಿ ಯಾವುದೇ ತನಿಖೆಗೆ ತಯಾರಾಗಿ ನಿಂತಿದೆ.” ಎಂದು ಸ್ಪಷ್ಟಪಡಿಸಿದ್ದಾರೆ.

