
डीसीसी बँकेच्या अध्यक्ष, उपाध्यक्ष पदाची आज निवडणूक.
बेळगाव ; बेळगाव जिल्ह्यातील प्रतिष्ठेच्या डीसीसी बँकेच्या अध्यक्ष व उपाध्यक्षपदाची निवडणूक आज बुधवारी 13 नोव्हेंबर रोजी, होणार आहे. बेळगावचे जिल्ह्यातील सहकार क्षेत्रातील सर्व ज्येष्ठ नेते, आज सकाळी 10 वाजता नवनिर्वाचित अध्यक्ष व उपाध्यक्षांची नावे जाहीर करतील. त्यानंतर ज्येष्ठ नेत्यांनी नामनिर्देशित केलेले दोघेजण, अकरा वाजता नामांकन अर्ज दाखल करतील आणि बिनविरोध निवड प्रक्रिया पार पडणार असल्याचे समजते.
माजी खासदार रमेश कत्ती यांच्या राजीनाम्यामुळे रिक्त झालेल्या अध्यक्ष आणि उपाध्यक्ष या दोन्ही पदांसाठी आज निवडणूक प्रक्रिया होणार आहे. माजी मंत्री भालचंद्र जारकीहोळी, प्रभाकर कोरे, रमेश जारकीहोळी यांच्यासह बेळगाव जिल्ह्यातील सहकार क्षेत्रातील नेते चर्चा करून सर्वसंमतीने निर्णय घेणार असून, त्यांच्या निर्णयानुसार अध्यक्ष व उपाध्यक्षांची निवडणूक होणार असल्याचे सांगण्यात येत आहे.
बेळगावच्या डीसीसी बँकेचा नवा अध्यक्ष कोण होणार याची सर्वांनाच उत्सुकता आहे. अध्यक्षस्थानी माजी खासदार अण्णासाहेब जोल्ले यांचे नाव आघाडीवर असल्याचे समजते. तसेच माजी आमदार अरविंद पाटील, यांचे नाव उपाध्यक्षपदासाठी सुचवले जाणार असल्याची बातमी पसरली आहे. परंतु ज्येष्ठ नेते यावर निर्णय जाहीर केल्यानंतरच यावर शिक्का मोर्तब होणार आहे.
चिक्कोडीच्या भागाला अध्यक्षपद मिळाले तर उपाध्यक्षपदाची जागा, बेळगावच्या भागाला मिळेल, असा सर्वसाधारण हिशोब आहे, मात्र नेत्यांची गणिते काय, हे जाणून घेण्यासाठी आणखी दोन तास वाट पाहावी लागणार आहे.
ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇಂದು.
ಬೆಳಗಾವಿ; ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಬುಧವಾರ ನವೆಂಬರ್ 13 ರಂದು ಚುನಾವಣೆ ನಡೆಯಲಿದೆ. ಬೆಳಗಾವಿ ಜಿಲ್ಲೆಯ ಸಹಕಾರಿ ಕ್ಷೇತ್ರದ ಎಲ್ಲ ಹಿರಿಯ ಮುಖಂಡರು ಇಂದು ಬೆಳಗ್ಗೆ 10 ಗಂಟೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರ ಹೆಸರನ್ನು ಪ್ರಕಟಿಸಲಿದ್ದಾರೆ. ಹಿರಿಯ ನಾಯಕರು ಸೂಚಿಸಿದ ಇಬ್ಬರು ವ್ಯಕ್ತಿಗಳು ಇಂದು ಬೆಳಗ್ಗೆ 11.00 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದು, ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆಯಲಿದೆ ಎಂದು ತಿಳಿದುಬಂದಿದೆ.
ಮಾಜಿ ಸಂಸದ ರಮೇಶ ಕತ್ತಿ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳಿಗೆ ಇಂದು ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಬೆಳಗಾವಿ ಜಿಲ್ಲೆಯ ಸಹಕಾರಿ ಕ್ಷೇತ್ರದ ಮುಖಂಡರೊಂದಿಗೆ ಮಾಜಿ ಸಚಿವರಾದ ಭಾಲಚಂದ್ರ ಜಾರಕಿಹೊಳಿ, ಪ್ರಭಾಕರ ಕೋರೆ, ರಮೇಶ ಜಾರಕಿಹೊಳಿ ಸೇರಿ ಚರ್ಚಿಸಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗುವುದು. ಅವರ ತೀರ್ಮಾನದಂತೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ ಎನ್ನಲಾಗಿದೆ.
ಬೆಳಗಾವಿಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೆಸರು ಮುಂಚೂಣಿಯಲ್ಲಿದೆ. ಅಲ್ಲದೇ ಉಪಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಅರವಿಂದ ಪಾಟೀಲ ಅವರ ಹೆಸರನ್ನು ಸೂಚಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಹಿರಿಯ ನಾಯಕರು ನಿರ್ಧಾರ ಪ್ರಕಟಿಸಿದ ನಂತರವೇ ಮುದ್ರೆ ಬೀಳಲಿದೆ.
ಚಿಕ್ಕೋಡಿ ಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕರೆ ಬೆಳಗಾವಿ ಕ್ಷೇತ್ರಕ್ಕೆ ಉಪಾಧ್ಯಕ್ಷ ಸ್ಥಾನ ಸಿಗಲಿದೆ ಎಂಬುದು ಸಾಮಾನ್ಯ ಲೆಕ್ಕಾಚಾರ ಆದರೆ ನಾಯಕರ ಲೆಕ್ಕಾಚಾರ ಏನಾಗಿದೆ ಎಂಬುದು ತಿಳಿಯಬೇಕಾದರೆ ಇನ್ನೂ 1 ಗಂಟೆ ಕಾಯಬೇಕು.
