नंदगडमधील बस सेवेचा बोजवारा; विद्यार्थी आणि नागरिकांचा जीव धोक्यात घालून प्रवास
नंदगड (ता. खानापूर): खानापूर तालुक्यातील नंदगड गावात बससेवेच्या अभावामुळे विद्यार्थी आणि नागरिक त्रस्त झाले असून, दररोज जीव धोक्यात घालून प्रवास करण्याची वेळ त्यांच्यावर येत आहे. वाहतूक विभागाच्या दुर्लक्षामुळे ग्रामस्थांमध्ये तीव्र नाराजी आहे.
शालेय आणि महाविद्यालयीन शिक्षणासाठी खानापूर, बेळगाव आणि हल्याळकडे जाणाऱ्या विद्यार्थ्यांना वेळेवर पोहोचणे कठीण झाले आहे. बसमध्ये जागा मिळवण्यासाठी दररोज गर्दी करावी लागते. अनेकदा विद्यार्थी दारावर लटकून किंवा छपरावर बसून प्रवास करत असल्याची दृश्ये समोर आली आहेत. ही स्थिती त्यांच्या सुरक्षेला धोका पोहोचवणारी आहे.
सामान्य नागरिकांनाही या समस्येचा मोठा फटका बसत असून, नोकरी, व्यवसाय तसेच रुग्णालयीन कामांसाठी त्यांना वेळेवर बस मिळत नाही. त्यामुळे त्यांची कामे रखडत असून, उद्विग्नता वाढली आहे.
यात आणखी भर म्हणजे काही बस चालक ठराविक बस थांब्यांवर न थांबता पुढे किंवा मागे बस थांबवतात, त्यामुळे प्रवाशांमध्ये गोंधळ निर्माण होतो. अशा परिस्थितीत बससेवा अधिक नियमित, वेळेवर आणि सुरक्षित व्हावी यासाठी ग्रामस्थांकडून जोरदार मागणी केली जात आहे.
“निव्वळ बस मिळावी म्हणून नागरिक जीव धोक्यात घालून प्रवास करत आहेत, पण प्रशासन डोळेझाक करत आहे,” अशी भावना नागरिक व्यक्त करत आहेत. यावर वाहतूक विभागाने तातडीने उपाययोजना करून नंदगड परिसरातील बस सेवेचा प्रश्न सोडवावा, अशी मागणी जोर धरू लागली आहे.
ನಂದಗಡದ ಊರಿಗೆ ಬಸ್ ಸೇವೆಯಲ್ಲಿ ವ್ಯತ್ಯಯ; ವಿದ್ಯಾರ್ಥಿಗಳು ಹಾಗೂ ನಾಗರಿಕರು ಜೀವದ ಹಂಗಿಟ್ಟು ಪ್ರಯಾಣಿಸುವ ಪ್ರಸಂಗ.
ನಂದಗಡ (ಖಾನಾಪುರ ತಾ.): ಖಾನಾಪುರ ತಾಲೂಕಾದ ನಂದಗಡ ಗ್ರಾಮದಲ್ಲಿ ಬಸ್ ಸೇವೆಯ ಕೊರತೆಯಿಂದ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರು ತೀವ್ರ ಅನಾನುಕೂಲ ಅನುಭವಿಸುತ್ತಿದ್ದಾರೆ, ದಿನನಿತ್ಯ ಜೀವವನ್ನು ಪಣಕ್ಕಿಟ್ಟು ಪ್ರಯಾಣ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ. ಸಾರಿಗೆ ಇಲಾಖೆಯ ನಿರ್ಲಕ್ಷ್ಯದಿಂದ ಗ್ರಾಮಸ್ಥರಲ್ಲಿ ಆಕ್ರೋಶದ ವಾತಾವರಣ ಉಂಟಾಗಿದೆ.
ಶಾಲಾ ಹಾಗೂ ಮಹಾ ವಿದ್ಯಾಲಯದ ಶಿಕ್ಷಣಕ್ಕಾಗಿ ಖಾನಾಪುರ, ಬೆಳಗಾವಿ ಮತ್ತು ಹಳಿಯಾಳ ಕಡೆಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ತಲುಪುವುದು ಕಷ್ಟವಾಗಿದ್ದು, ಬಸ್ನಲ್ಲಿ ಸೀಟು ಪಡೆಯಲು ಪ್ರತಿದಿನವೂ ಭಾರಿ ಗುದ್ದಾಠ ಅನುಭವಿಸಬೇಕಾಗುತ್ತಿದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಬಸ್ನ ಬಾಗಿಲಿಗೆ ಜೋತ ಬಿದ್ದು ಅಥವಾ ಮೇಲ್ಛಾವಣಿಯಲ್ಲಿ ಕುಳಿತು ಪ್ರಯಾಣಿಸುವ ದೃಶ್ಯಗಳು ಕಂಡುಬಂದಿದ್ದು, ಇದರಿಂದ ಅವರ ಜೀವದ ಕುರಿತಾಗಿ ಭಾರೀ ಆತಂಕ ವ್ಯಕ್ತವಾಗಿದೆ.
ಸಾಮಾನ್ಯ ನಾಗರಿಕರೂ ಈ ಸಮಸ್ಯೆಯಿಂದ ತೀವ್ರವಾಗಿ ತೊಂದರೆಗೊಳಗಾಗಿದ್ದಾರೆ. ಉದ್ಯೋಗ, ವ್ಯವಹಾರ ಅಥವಾ ಆಸ್ಪತ್ರೆಗೆ ಹೋಗಬೇಕಾದ ಸಂದರ್ಭಗಳಲ್ಲಿ ಸಮಯಕ್ಕೆ ಬಸ್ ದೊರಕದ ಕಾರಣದಿಂದಾಗಿ ಅವರ ಕಾರ್ಯಗಳು ವಿಳಂಬವಾಗುತ್ತಿದ್ದು, ಪ್ರಯಾಣಿಕರಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದೆ.
ಇದಕ್ಕೆ ಇನ್ನೊಂದು ಸಮಸ್ಯೆ ಎಂಬಂತೆ ಕೆಲ ಬಸ್ ಚಾಲಕರು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲದೆ ಮುಂದೆ ಅಥವಾ ಹಿಂದೆ ನಿಲ್ಲಿಸುತ್ತಿರುವುದರಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬಸ್ ಸೇವೆ ನಿಯಮಿತವಾಗಿ, ಸಮಯಕ್ಕೆ ಮತ್ತು ಸುರಕ್ಷಿತವಾಗಿರಲೆಂದು ಗ್ರಾಮಸ್ಥರಿಂದ ಬಲವಾದ ಆಗ್ರಹ ವ್ಯಕ್ತವಾಗುತ್ತಿದೆ.
ಬಸ್ ಸಿಗಲೆಂಬ ಆಸೆಯಿಂದ ಜನರು ಜೀವದ ಹಂಗಿಟ್ಟು ಪ್ರಯಾಣಿಸುತ್ತಿದ್ದಾರೆ, ಆದರೆ ಆಡಳಿತ ಮಾತ್ರ ಕಣ್ಣಮುಚ್ಚಿಕೊಂಡಿದೆ,” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂದಗಡ ಪರಿಸರದ ಬಸ್ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕೆಂದು ಸಾರಿಗೆ ಇಲಾಖೆ ವಿರುದ್ಧ ಒತ್ತಾಯ ಜೋರಾಗಿದೆ.

