
काँग्रेस सरकारच्या असंवैधानिक निर्णयाच्या विरोधात, भाजपा आणि जेडीएस पक्षाच्या शिष्टमंडळाची राज्यपालाकडे तक्रार.
बेंगलोर ; भाजप आणि जेडीएस पक्षांच्या शिष्टमंडळाने आज राज्यपाल श्री थावरचंद गेहलोत यांची भेट घेतली आणि हमी अंमलबजावणी समितीमध्ये तालुका, जिल्हा आणि राज्य पातळीवर काँग्रेस कार्यकर्त्यांची नियुक्ती करण्यांत आलेल्या काँग्रेस सरकारच्या असंवैधानिक निर्णयाचा आणि बेकायदेशीर हमी अंमलबजावणी समितीच्या नावाखाली लोकांच्या कराच्या पैशाचा गैरवापर करण्यात आल्याबद्दल निषेध करणारी तक्रार व निवेदन सादर केले.

या प्रसंगी, प्रदेशाध्यक्ष श्री विजयेंद्र येडियुरप्पा, विरोधी पक्षनेते श्री आर अशोक, विधान परिषदेतील विरोधी पक्षनेते श्री चलवादी नारायणस्वामी, जेडीएस विधिमंडळ पक्षाचे नेते श्री सुरेश बाबू, जेडीएस विधान परिषदेचे नेते श्री भोजे गौडा, खानापूरचे आमदार विठ्ठलराव हलगेकर तसेच भाजप आणि जेडीएसचे आमदार आणि विधान परिषदेचे सदस्य उपस्थित होते.
ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ನಿರ್ಧಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಿಯೋಗ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
ಗ್ಯಾರಂಟಿ ಅನುಷ್ಠಾನ ಸಮಿತಿಗೆ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಿರುವ ಕಾಂಗ್ರೆಸ್ ಸರ್ಕಾರದ ಅಸಂವಿಧಾನಿಕ ನಡೆಯನ್ನು ಖಂಡಿಸಿ ಮತ್ತು ಕಾನೂನುಬಾಹಿರವಾಗಿರುವ ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ದುರಪಯೋಗಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಿಯೋಗವು ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಪ್ರತಿಪಕ್ಷ ನಾಯಕರಾದ ಶ್ರೀ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್ ಬಾಬು, ಜೆಡಿಎಸ್ ವಿಧಾನ ಪರಿಷತ್ನ ನಾಯಕರಾದ ಶ್ರೀ ಭೋಜೆಗೌಡ, ಖಾನಾಪುರ ಶಾಸಕ ವಿಠ್ಠಲರಾವ್ ಹಲಗೆಕರ, ಬಿಜೆಪಿ ಮತ್ತು ಜೆಡಿಎಸ್ನ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
