
बडेकोळळ मठ घाटात मंगळवारी सायंकाळी ढगफुटी सदृश्य पावसामुळे पुणे-बंगळुरू हायवेवर ट्राफिक जाम
हिरेबागेवाडी (ता. 5 ऑगस्ट): मंगळवारी सायंकाळच्या सुमारास बडेकोळळ मठ घाटात ढगफुटी सदृश्य पाऊस झाला. विजेच्या कडकडाटासह अवकाळी झालेल्या जोरदार पावसामुळे पुणे-बंगळुरू राष्ट्रीय महामार्गावर पावसाचे पाणी साचले आणि वाहतूक ठप्प झाली.
हायवेवर मोठ्या प्रमाणात पाणी साचल्यामुळे अनेक वाहनचालक अडकल्याचे दृश्य दिसून आले. यामुळे काही वेळ महामार्गावर मोठा ट्राफिक जाम झाला होता. घटनेची माहिती मिळताच हिरेबागेवाडी पोलिसांनी तातडीने घटनास्थळी धाव घेतली आणि वाहतूक सुरळीत करण्यासाठी उपाययोजना केली.
सुदैवाने या घटनेत कोणतीही जीवितहानी झाली नाही. मात्र, काही काळासाठी नागरिकांना मोठ्या गैरसोयींचा सामना करावा लागला. स्थानिक प्रशासनाने पावसामुळे अडथळा निर्माण होणाऱ्या ठिकाणी तातडीने उपाययोजना करण्याचे आवाहन करण्यात आले आहे.
ಬಡೇಕೊಳ್ಳ ಮಠ ಘಾಟಿಯಲ್ಲಿ ಮಂಗಳವಾರ ಸಂಜೆ ಮೇಘಸ್ಫೋಟ ದ್ರಷ.ಮಹಾ ಮಳೆಯ ಕಾರಣ ಪುಣೆ–ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ಹಿರೇಬಾಗೇವಾಡಿ (ತಾ. ೫ ಆಗಸ್ಟ್): ಮಂಗಳವಾರ ಸಂಜೆ ವೇಳೆ ಬಡೇಕೊಳ್ಳ ಮಠ ಘಾಟಿ ಭಾಗದಲ್ಲಿ ಮೇಘಸ್ಫೋಟದಂತ ಭಾರಿ ಮಳೆಯಾಗಿದ್ದು, ಇದರಿಂದಾಗಿ ಪುಣೆ–ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಟ್ರಾಫಿಕ್ ಸ್ಥಗಿತಗೊಂಡಿತು.
ಗುಡುಗು ಸಿಡಿಲು ಮಿಂಚು ಸಹಿತ ಭಾರಿ ಮಳೆ ಸುರಿದ ಪರಿಣಾಮ, ಹೆದ್ದಾರಿಯ ಮೇಲೆ ನೀರು ನಿಂತು ಹಲವು ವಾಹನಗಳು ನೀರಿನಲ್ಲಿ ಸಿಲುಕಿದ ದೃಶ್ಯ ಕಂಡುಬಂದಿತು. ಇದರಿಂದಾಗಿ ಕೆಲ ಸಮಯ ಹೆದ್ದಾರಿಯಲ್ಲಿ ಭಾರಿ ವಾಹನ ಸಂಚಾರ ಹಸ್ತವ್ಯಸ್ತ ಉಂಟಾಯಿತು.
ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಹಿರೇಬಾಗೇವಾಡಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಟ್ರಾಫಿಕ್ ಸರಾಗವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡರು.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೂ ಕೆಲ ಕಾಲ ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಉಂಟಾಯಿತು. ಸ್ಥಳೀಯ ಆಡಳಿತವು ಮಳೆಯಿಂದಾಗಿ ಅಡಚಣೆ ಉಂಟಾಗುವ ಸ್ಥಳಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
