
अपघातात शहीद झालेल्या जवानांना, मुख्यमंत्र्यांनी बेळगाव येथे वाहिली श्रद्धांजली.
बेळगाव : मुख्यमंत्री सिद्धरामय्या यांनी जम्मू-काश्मीरमधील अपघातातील शहीद जवानांच्या पार्थिवांना अखेरची श्रद्धांजली वाहिली. शहीद जवान सुभेदार दयानंद तीरकन्नावर, महेश मेरीगोंडा यांना बेळगाव येथील, आर्मी वॉर मेमोरियल येथे पुष्पहार अर्पण करून मुख्यमंत्र्यांनी श्रद्धांजली वाहिली.

प्रसारमाध्यमांशी संवाद साधल्यानंतर मुख्यमंत्री म्हणाले की, सैनिकांचे जीवन आणि कारकीर्द खूप उच्च आणि महान आहे.
आपल्या राज्यातील जवान अपघातात शहीद झालेले नजरेसमोर पाहणे खूप वेदनादायी आहे. चार जवानांच्या आत्म्याना शांती लाभो, अशी मनोकामना करताना, ते म्हणाले की. शहीद जवानांच्या कुटुंबीयांच्या दुःखात मी व माझे मंत्रिमंडळ सहभागी आहे. त्याचबरोबर शहीद जवानांच्या कुटुंबीयांना शासन नियमानुसार सर्वतोपरी मदत करेन, असे आश्वासन त्यांनी यावेळी दिलं. या अपघातात आमच्या राज्यातील चार जवान शहीद झाले आहेत. दयानंद तीरकन्नावर (बेळगाव), धनराज सुभाष (चिक्कोडी), महेश नागप्पा (बागलकोट) आणि अनूप पुजारी (कुंदापूर) यांच्या आत्म्यास शांती लाभो. व त्यांच्या कुटुंबाला राज्य सरकारकडून नुकसान भरपाई दिली जाईल, असे ते म्हणाले.
यावेळी मंत्री लक्ष्मी हेब्बाळकर, एच. सी. महादेवप्पा, जिल्हाधिकारी मोहम्मद रोशन, जिल्हा पोलीस अधीक्षक डॉ. भीमाशंकर गुळेद आदी उपस्थित होते.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅಪಘಾತದಲ್ಲಿ ಹುತಾತ್ಮರಾದ ಯೋಧರಿಗೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ನಮನ ಸಲ್ಲಿಸಿದರು.
ಬೆಳಗಾವಿ: ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಅಪಘಾತದಲ್ಲಿ ಹುತಾತ್ಮರಾದ ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು. ಬೆಳಗಾವಿಯ ಸೇನಾ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಾದ ಸುಭೇದಾರ್ ದಯಾನಂದ ತಿರಕಣ್ಣವರ್, ಮಹೇಶ ಮೇರಿಗೊಂಡ ಅವರಿಗೆ ಮುಖ್ಯಮಂತ್ರಿ ಶ್ರದ್ಧಾಂಜಲಿ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ಸೈನಿಕರ ಜೀವನ ಮತ್ತು ವೃತ್ತಿ ಅತ್ಯಂತ ಉನ್ನತ ಮತ್ತು ಶ್ರೇಷ್ಠವಾಗಿದೆ. ಜಮ್ಮುವಿನಲ್ಲಿ ಅಪಘಾತದಲ್ಲಿ ಮಡಿದ ಯೋಧರ ಅಂತ್ಯಕ್ರಿಯೆ
ನೋಡುವಾಗ ತುಂಬಾ ನೋವಾಗುತ್ತದೆ. ನಾಲ್ವರು ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು. ಹುತಾತ್ಮ ಯೋಧರ ಕುಟುಂಬಗಳ ದುಃಖದಲ್ಲಿ ನಾನು ಮತ್ತು ನನ್ನ ಸಂಪುಟ ಭಾಗಿ. ಇದೇ ವೇಳೆ ಹುತಾತ್ಮ ಯೋಧರ ಕುಟುಂಬಗಳಿಗೆ ಸರ್ಕಾರದ ನಿಯಮಾನುಸಾರ ಎಲ್ಲ ರೀತಿಯಲ್ಲೂ ನೆರವು ನೀಡುವುದಾಗಿ ಭರವಸೆ ನೀಡಿದರು. ಈ ಅಪಘಾತದಲ್ಲಿ ನಮ್ಮ ರಾಜ್ಯದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ದಯಾನಂದ ತಿರ್ಕಣ್ಣವರ್ (ಬೆಳಗಾವಿ), ಧನರಾಜ್ ಸುಭಾಷ್ (ಚಿಕ್ಕೋಡಿ), ಮಹೇಶ್ ನಾಗಪ್ಪ (ಬಾಗಲಕೋಟ) ಮತ್ತು ಅನೂಪ್ ಪೂಜಾರಿ (ಕುಂದಾಪುರ) ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಎಚ್. ಸಿ. ಮಹದೇವಪ್ಪ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಮತ್ತಿತರರು ಉಪಸ್ಥಿತರಿದ್ದರು.
