कारच्या धडकेत दुचाकीस्वाराचा मृत्यू; चालकावर गुन्हा दाखल.
खानापूर : बेळगाव–पणजी राष्ट्रीय महामार्गावर खानापूर तालुक्यातील डुक्करवाडी क्रॉसजवळ कारने दुचाकीला मागून धडक दिल्याने दुचाकीस्वाराचा मृत्यू झाल्याची दुर्दैवी घटना घडली आहे. या अपघातात मृत्युमुखी पडलेल्या व्यक्तीचे नाव निंगाप्पा (उर्फ बळीराम) शेट्टुप्पा धबाले (वय 66 वर्षे), राहणार गणेबैल (ता. खानापूर) असे आहे.
पोलीस सूत्रांनी दिलेल्या माहितीनुसार, एम.एच-09/सी.व्ही-1888 क्रमांकाच्या कारचा चालक योगेश सैयाजी जाधव (वय 41), रा. आर.के. नगर, कोल्हापूर, महाराष्ट्र हा बेळगावकडून खानापूरकडे अतिवेग आणि निष्काळजीपणे कार चालवत होता. दिनांक 12 फेब्रुवारी 2026 रोजी सकाळी सुमारे 10.30 वाजता डुक्करवाडी क्रॉसजवळ पोहोचताच त्याने नियंत्रण गमावून समोर चाललेल्या केए-22/एचडब्ल्यू-5617 क्रमांकाच्या दुचाकीला मागून धडक दिली.
या धडकेत दुचाकीस्वार निंगप्पा धबाले यांच्या डोक्याला व शरीराला गंभीर दुखापत होऊन त्यांचा जागीच मृत्यू झाला.
या प्रकरणी खानापूर पोलीस ठाण्यात अपघाताचा गुन्हा दाखल करण्यात आला असून पुढील तपास सुरू आहे.
अपघातात मृत्यू पावलेल्या निंगाप्पा धबाले, यांच्या पश्चात पत्नी, एक विवाहित भाऊ, दोन विवाहित बहिणी असा मोठा परिवार आहे.
ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನ ಸಾವು; ಚಾಲಕನ ವಿರುದ್ಧ ಪ್ರಕರಣ ದಾಖಲು.
ಖಾನಾಪುರ : ಬೆಳಗಾವಿ–ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾನಾಪುರ ತಾಲ್ಲೂಕಿನ ಡುಕ್ಕರವಾಡಿ ಕ್ರಾಸ್ ಬಳಿ ಕಾರು ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ದುರ್ಘಟನೆ ನಡೆದಿದೆ. ಈ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರು ನಿಂಗಾಪಾ (ಅಲಿಯಾಸ್ ಬಲಿರಾಮ) ಶೆಟ್ಟಪ್ಪ ಧಬಾಲೆ (ವಯಸ್ಸು 66 ವರ್ಷ), ಸಾ. ಗಣೇಬೈಲ್ (ತಾ. ಖಾನಾಪುರ) ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಎಂ.ಎಚ್-09/ಸಿ.ವಿ-1888 ಸಂಖ್ಯೆಯ ಕಾರಿನ ಚಾಲಕ ಯೋಗೇಶ ಸಯಾಜಿ ಜಾಧವ (ವಯಸ್ಸು 41), ಸಾ ಆರ್.ಕೆ. ನಗರ, ಕೊಲ್ಹಾಪುರ, ಮಹಾರಾಷ್ಟ್ರ ಇವನು ಬೆಳಗಾವಿಯಿಂದ ಖಾನಾಪುರದ ಕಡೆಗೆ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಕಾರು ಚಾಲನೆ ಮಾಡುತ್ತಿದ್ದನು. ದಿನಾಂಕ 12 ಫೆಬ್ರವರಿ 2026 ರಂದು ಬೆಳಿಗ್ಗೆ ಸುಮಾರು 10.30 ಗಂಟೆಗೆ ಡುಕ್ಕರವಾಡಿ ಕ್ರಾಸ್ ಬಳಿ ನಿಯಂತ್ರಣ ಕಳೆದುಕೊಂಡು ಮುಂದೆ ಸಾಗುತ್ತಿದ್ದ ಕೆಎ-22/ಎಚ್ಡಬ್ಲ್ಯು-5617 ಸಂಖ್ಯೆಯ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದನು.
ಈ ಡಿಕ್ಕಿಯಿಂದ ದ್ವಿಚಕ್ರ ವಾಹನ ಸವಾರ ನಿಂಗಪ್ಪ ಧಬಾಲೆ ಅವರ ತಲೆಗೆ ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟರು.ಇದರ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಅಪಘಾತದಲ್ಲಿ ಮೃತಪಟ್ಟ ನಿಂಗಪ್ಪ ಧಬಾಲೆ ಅವರ ಹಿಂದೆ ಪತ್ನಿ, ಒಬ್ಬ ವಿವಾಹಿತ ಸಹೋದರ, ಇಬ್ಬರು ವಿವಾಹಿತ ಸಹೋದರಿಯರು ದೊಡ್ಡ ಕುಟುಂಬವನ್ನು ಅಗಲಿದ್ದಾರೆ.

