कारची ट्रकला पाठीमागून भीषण धडक, 7 जणांचा जागीच मृत्यू ; कटरनं कापून, बाहेर काढले मृतदेह.
अहमदाबाद : गुजरातच्या साबरकांठा जिल्ह्यात भीषण अपघात झालाय. या अपघातात 7 जणांचा मृत्यू झाला आहे. कारमधील लोक श्यामलाजी मंदिरात दर्शन करून अहमदाबादला परतत होते. त्यावेळी त्यांची कार मागून एका ट्रकला धडकली. हा अपघात इतका भीषण होता की कारचा चक्काचूर झाला आहे. अपघातात 7 जण जागीच ठार झाले. तर एक जण गंभीर जखमी झाला आहे.
अपघातानंतर कारमधून मृतदेह बाहेर काढणं कठीण झालं होतं. कटरने कारचा पत्रा कापून, कारमधून मृतदेह बाहेर काढण्यात आले. एकूण आठजण प्रवास करत होते. त्यातला केवळ एक जण वाचला असून त्याची प्रकृती गंभीर आहे.
अपघातग्रस्त कारचे फोटो समोर आले असून, ते थरकाप उडवणारे आहेत. कारचा वेग जास्त होता, अशी माहिती स्थानिकांनी दिलीय. ट्रकला मागून धडक दिल्यानंतर कारचा चक्काचूर झाला. त्यामुळे कारमध्येच मृतदेह अडकून पडले. अग्निशमन विभागाने कटरने कार कापून मृतदेह बाहेर काढले.
अपघातात मृत्यू झालेले सर्वजण अहमदाबादचे आहेत. हा अपघात बुधवारी सकाळी सहा वाजता झाला. या अपघाताची माहिती मिळताच पोलीस घटनास्थळी दाखल झाले. पोलिसांनी पंचनामा केला असून, अपघाताची नोंद करण्यात आली आहे. आता अधिक तपास केला जात आहे. मृतांची ओळख पटलेली नाही. त्यांची ओळख पटवण्याचे काम सुरू आहे.
ಟ್ರಕ್ಗೆ ಹಿಂದಿನಿಂದ ಕಾರು ಡಿಕ್ಕಿ, 7 ಮಂದಿ ಸ್ಥಳದಲ್ಲೇ ಸಾವು; ಕಟ್ಟರ್ ನಿಂದ ಕತ್ತರಿಸಿ ದೇಹಗಳನ್ನು ಹೊರತೆಗೆದರು.
ಅಹಮದಾಬಾದ್ : ಗುಜರಾತ್ ನ ಸಬರಕಾಂತ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದವರು ಶ್ಯಾಮಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಅಹಮದಾಬಾದ್ಗೆ ಹಿಂತಿರುಗುತ್ತಿದ್ದರು. ಆ ವೇಳೆ ಅವರ ಕಾರು ಹಿಂದಿನಿಂದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತ ಎಷ್ಟು ತೀವ್ರವಾಗಿತ್ತು ಎಂದರೆ ಕಾರು ಪೂರ್ಣ ನುಚ್ಚುನೂರುಗೊಂಡಿದೆ. ಅಪಘಾತದಲ್ಲಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಪಘಾತದ ನಂತರ ಮೃತದೇಹವನ್ನು ಕಾರಿನಿಂದ ಹೊರತೆಗೆಯುವುದು ಕಷ್ಟಕರವಾಗಿತ್ತು. ಕಾರಿನ ಶೀಟ್ ಅನ್ನು ಕಟ್ಟರ್ ನಿಂದ ಕತ್ತರಿಸಿ ಕಾರಿನಿಂದ ಶವಗಳನ್ನು ಹೊರತೆಗೆದಿದ್ದಾರೆ. ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತಕ್ಕೀಡಾದ ಕಾರಿನ ಫೋಟೋಗಳು ಹೊರಬಿದ್ದಿದ್ದು, ಆಘಾತಕಾರಿಯಾಗಿದೆ. ಕಾರಿನ ವೇಗ ಹೆಚ್ಚಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಹಾಗಾಗಿ ಮೃತದೇಹಗಳು ಕಾರಿನಲ್ಲಿ ಸಿಲುಕಿಕೊಂಡಿವೆ. ಅಗ್ನಿಶಾಮಕ ದಳದವರು ಕಟರ್ನಿಂದ ಕಾರನ್ನು ಕಟ್ ಮಾಡಿ ಶವವನ್ನು ಹೊರ ತೆಗೆದಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಅಹಮದಾಬಾದ್ ಮೂಲದವರು. ಬುಧವಾರ ಬೆಳಗ್ಗೆ 6 ಗಂಟೆಗೆ ಅಪಘಾತ ಸಂಭವಿಸಿದೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಪಂಚನಾಮೆ ಮಾಡಿ ಅಪಘಾತ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಅವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.