अपार्टमेंटमध्ये कारची धडक बसून सिक्युरिटी गार्डचा मृत्यू.
बेळगाव : न्यू गुड्सशेड रोड परिसरातील एका अपार्टमेंटमध्ये घडलेल्या दुर्दैवी घटनेमध्ये कारच्या धडकेत सेक्युरिटी गार्डचा मृत्यू झाला आहे. ही घटना रविवारी सकाळी घडली असून, या प्रकरणी वाहतूक दक्षिण विभाग पोलीस स्थानकात नोंद झाली आहे.
मृत सिक्युरिटी गार्डाचे नाव नागेश शटुप्पा देवजी (वय 56, रा. माळी गल्ली, बेळगाव) असे आहे. रविवारी दिनांक 12 ऑक्टोबर रोजी सकाळी सुमारे 10.30 वाजता अपार्टमेंटच्या पार्किंगमधून कार बाहेर काढताना नागेश यांना तीव्र धडक बसली. या अपघातात ते गंभीर जखमी झाले होते. तत्काळ त्यांना उपचारासाठी खासगी रुग्णालयात दाखल करण्यात आले, मात्र उपचारादरम्यान त्यांचा मृत्यू झाला.
घटनेची माहिती मिळताच वाहतूक दक्षिण विभागाचे पोलीस निरीक्षक बसगौडा पाटील आणि त्यांच्या सहकाऱ्यांनी घटनास्थळी भेट देऊन पाहणी केली.
नागेश देवजी यांच्या पश्चात आई, पत्नी, मुलगा, मुलगी, दोन भाऊ आणि बहीण असा परिवार आहे.
या दुर्दैवी घटनेमुळे परिसरात हळहळ व्यक्त केली जात आहे.
ಬೆಳಗಾವಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕಾರು ಡಿಕ್ಕಿ ಹೊಡೆದು –ಸೆಕ್ಯೂರಿಟಿ ಗಾರ್ಡ್ ಸಿಬ್ಬಂದಿಯ ದುರ್ಮರಣ
ಬೆಳಗಾವಿ : ನಗರದ ನ್ಯೂ ಗುಡ್ಶೆಡ್ ರಸ್ತೆಯ ಬಳಿಯ ಅಪಾರ್ಟ್ಮೆಂಟ್ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಕಾರು ಡಿಕ್ಕಿ ಹೊಡೆದು ಸೆಕ್ಯೂರಿಟಿ ಗಾರ್ಡ್ ಭದ್ರತಾ ಸಿಬ್ಬಂದಿ ಮೃತಪಟ್ಟಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಈ ಕುರಿತು ಬೆಳಗಾವಿ ಟ್ರಾಫಿಕ್ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಭದ್ರತಾ ಸಿಬ್ಬಂದಿಯ ಹೆಸರು ನಾಗೇಶ ಶಟಪ್ಪ ದೇವಜಿ (ವಯಸ್ಸು 56, ನಿವಾಸಿ ಮಾಳಿ ಗಲ್ಲಿ, ಬೆಳಗಾವಿ) ಎಂದು ತಿಳಿದುಬಂದಿದೆ. ಭಾನುವಾರ (ಅ. 12) ಬೆಳಿಗ್ಗೆ ಸುಮಾರು 10.30ರ ಸುಮಾರಿಗೆ ಅಪಾರ್ಟ್ಮೆಂಟ್ನ ಪಾರ್ಕಿಂಗ್ ಪ್ರದೇಶದಿಂದ ಕಾರನ್ನು ಹೊರ ತೆಗೆಯುವ ವೇಳೆ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡ ಕಾರಣ ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಟ್ರಾಫಿಕ್ ದಕ್ಷಿಣ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಬಸಗೌಡ ಪಾಟೀಲ ಹಾಗೂ ಅವರ ಸಹೋದ್ಯೋಗಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ನಾಗೇಶ ದೇವಜಿ ಅವರ ಹಿಂದೆ ತಾಯಿ, ಪತ್ನಿ, ಮಗ, ಮಗಳು, ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇಂತಹ ಕುಟುಂಬವನ್ನು ಅಗಲಿದ್ದಾರೆ.
ಈ ದುರ್ಘಟನೆಯಿಂದ ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

