50 लाखाच्या विम्याच्या रकमेसाठी सख्ख्या भावाची निघृण हत्या.
बेळगाव : 50 लाख रुपयांच्या विम्याच्या रक्कमेकरिता सख्ख्या भावाने, आपल्या मोठ्या भावाची हत्या केल्याची धक्कादायक घटना बेळगाव जिल्ह्यात उघडकीस आली आहे. ही घटना मूडलगी तालुक्यातील कागल गावाजवळ घडली असून, पोलिसांनी चार आरोपींना अटक केली आहे.
मृत व्यक्तीचे नाव हणमंत गोपाळ तळवार (वय 35) असून, त्याचा सख्खा भाऊ बसवराज तळवार याने आपल्या तीन मित्रांसोबत मिळून, या हत्येची कटकारस्थाने रचली होती. बसवराजने हणमंतच्या नावाने 50 लाख रुपयांचा विमा काढला होता. ज्यामध्ये तो नॉमिनी होता. या रकमेवर हक्क मिळवण्यासाठी बसवराजने आपल्या भावाला संपवण्याचा क्रूर डाव आखला. घटनेच्या दिवशी, बसवराजने हणमंतला चंदनाची लाकडे आणण्यासाठी सोबतीला येण्याचे सांगत विश्वासात घेतले. त्यानंतर बसवराज आणि त्याच्या तीन मित्रांनी, हणमंतला भरपूर मद्यप्राशन करवले. व त्यानंतर त्याची हत्या केली.
लोखंडी रॉडने हणमंतच्या डोक्यावर प्रहार करून त्याला ठार करण्यात आले. या गुन्ह्यात बसवराज तळवारसोबतच बापू शेख, ईरप्पा हडगिणाळ आणि सचिन कंटेण्णावर या तिघांचा सहभाग असल्याचे तपासात उघडकीस आले आहे. हत्येनंतर सर्व आरोपी घटनास्थळावरून फरार झाले होते.
मात्र, काही कालावधीतच पोलिसांनी त्यांना अटक केली. पोलिसांनी दिलेल्या माहितीनुसार, या प्रकरणात मृत व्यक्तीच्या विम्याची रक्कम मिळवण्यासाठी आरोपींनी अत्यंत निर्दयीपणे हा कट रचला होता. सर्व आरोपींना अटक करण्यात आली असून त्यांची चौकशी सुरू आहे.
बेळगाव जिल्ह्यात घडलेल्या, या अमानवी हत्याकांडाने परिसरात खळबळ उडवून दिली आहे. पैशाच्या लोभापोटी सख्ख्या भावानेच आपल्या भावाचा जीव घेतल्याची घटना माणुसकीला काळिमा फासणारी आहे. पोलिसांच्या वेगवान तपासामुळे गुन्हेगारांना पकडण्यात यश आले आहे, मात्र या घटनेने अनेकांना हादरवले आहे.
50 ಲಕ್ಷ ವಿಮಾ ಮೊತ್ತ ಪಡೆಯಲು ಅಣ್ಣನನ್ನು ಬರ್ಬರವಾಗಿ ಹತ್ಯೆ ಮಾಡಿದ ತಮ್ಮ.
ಬೆಳಗಾವಿ: 50 ಲಕ್ಷ ವಿಮಾ ಮೊತ್ತಕ್ಕಾಗಿ ಅಣ್ಣನನ್ನೇ ಕೊಂದಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೂಡಲಗಿ ತಾಲೂಕಿನ ಕಾಗಲ್ ಗ್ರಾಮದ ಬಳಿ ಘಟನೆ ನಡೆದಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತನನ್ನು ಹನ್ಮಂತ ಗೋಪಾಲ್ ತಳವಾರ (ವಯಸ್ಸು 35) ಎಂದು ಗುರುತಿಸಲಾಗಿದ್ದು, ಆತನ ಸಹೋದರ ಬಸವರಾಜ ತಳವಾರ ತನ್ನ ಮೂವರು ಸ್ನೇಹಿತರ ಜೊತೆ ಸೇರಿ ಸಂಚು ರೂಪಿಸಿದ್ದರು. ಬಸವರಾಜ್ ಹನ್ಮಂತ್ ತಮ್ಮ ಹೆಸರಿನಲ್ಲಿ 50 ಲಕ್ಷ ರೂಪಾಯಿ ವಿಮೆ ಮಾಡಿಸಿಕೊಂಡಿದ್ದರು. ಇದರಲ್ಲಿ ಅವರು ನಾಮಿನಿಯಾಗಿ ತಮ್ಮನ ಹೇಸರು ಇದ್ಧ ಕಾರಣ ಈ ಮೊತ್ತವನ್ನು ಪಡೆಯಲು ಬಸವರಾಜ್ ತನ್ನ ಸಹೋದರನನ್ನು ಕೊಲ್ಲಲು ಕ್ರೂರ ಯೋಜನೆ ರೂಪಿಸಿದ್ದ. ಘಟನೆಯ ದಿನ ಶ್ರೀಗಂಧ ತರಲು ಬರುವಂತೆ ತನ್ನ ಸಹಚರನನ್ನು ಹಣಮಂತ್ಗೆ ಬಸವರಾಜ್ ಹೇಳಿದ್ದ. ಆಗ ಬಸವರಾಜ ಮತ್ತು ಆತನ ಮೂವರು ಸ್ನೇಹಿತರು ಹಣಮಂತಗೆ ಕಂಠಪೂರ್ತಿ ಕುಡಿಸಿದ್ದರು. ತದನಂತರ ಅವನನ್ನು ಕೊಂದರು.
ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಹಣಮಂತ್ ಹತ್ಯೆ ಮಾಡಿದ್ದಾರೆ. ಈ ಕೃತ್ಯದಲ್ಲಿ ಬಸವರಾಜ ತಳವಾರ ಜತೆಗೆ ಬಾಪು ಶೇಖ್, ಈರಪ್ಪ ಹಡಗಿನಾಳ್ ಮತ್ತು ಸಚಿನ್ ಕಂಟೆಣ್ಣವರ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹತ್ಯೆಯ ನಂತರ ಆರೋಪಿಗಳೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.
ಆದರೆ, ಕೆಲ ಹೊತ್ತಿನಲ್ಲೇ ಪೊಲೀಸರು ಆವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮೃತರ ವಿಮಾ ಮೊತ್ತವನ್ನು ಪಡೆಯಲು ಆರೋಪಿಗಳು ಅತ್ಯಂತ ನಿರ್ದಯವಾಗಿ ಈ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವ ಈ ಅಮಾನವೀಯ ಹತ್ಯಾಕಾಂಡ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಸಹೋದರ ಹಣದ ದುರಾಸೆಗೆ ಸ್ವಂತ ಅಣ್ಣನ ಪ್ರಾಣವನ್ನೇ ತೆಗೆದಿರುವ ಘಟನೆ ಮಾನವೀಯತೆಗೆ ಕಳಂಕ ತಂದಿದೆ. ಪೊಲೀಸರು ಕ್ಷಿಪ್ರ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಕಾರಣವಾಗಿದ್ದರೂ ಈ ಘಟನೆ ಹಲವರನ್ನು ಬೆಚ್ಚಿ ಬೀಳಿಸಿದೆ.