
प्रियकराने प्रेयसीचा गळा चिरूंन, आपण आत्महत्या केली.
बेळगाव ; लग्न करण्यास नकार देणाऱ्या प्रेयसीचा गळा चिरला व नंतर स्वतःचा गळा चिरून आत्महत्या केली, असल्याची, घटना, आज मंगळवार दिनांक 4 मार्च रोजी, बेळगाव शहरातील नाथ पै सर्कलजवळील एका घरात घडली आहे. या घटनेत प्रियकर व प्रियसीचा दोघांचाही मृत्यू झाला आहे.
याबाबत सविस्तर माहिती अशी की, बेळगाव तालुक्यातील येळूर गावातील रहिवासी 29 वर्षीय प्रशांत कुंडेकर याचे नाथ पै सर्कलमधील रहिवासी असलेली ऐश्वर्या महेश लोहार (वय 18 वर्षे) हिच्यावर प्रेम होते. चित्रकार म्हणून काम करणाऱ्या प्रशांत कुंडेकराने यापूर्वी ऐश्वर्याच्या आईला त्याच्या प्रेमाबद्दल सांगितले होते. यावेळी, तरुणीच्या आईने त्याला सल्ला दिला, “आत्ताच लग्न करू नकोस. चांगली नोकरी कर आणि चांगले आयुष्य जग.”
पण आज संध्याकाळी, दोघेही नाथ पै सर्कलजवळ ऐश्वर्याच्या मावशीच्या घरी आले. त्या ठिकाणी ऐश्वर्याच्या मावशीच्या घरी विषाची बाटली घेऊन आलेल्या प्रशांतने ऐश्वर्याला लग्न करण्यास नकार दिल्यानंतर तिला जबरदस्तीने विष पिण्यासाठी भाग पाडण्याचा प्रयत्न केला. त्या वेळेला तरुणीने नकार दिला म्हणून त्याने आपल्या खिशातून आणलेल्या चाकूने ऐश्वर्याचा गळा चिरला. त्यामुळे मोठ्या प्रमाणात रक्तस्त्राव झाल्याने ऐश्वर्याचा मृत्यू झाला. त्यानंतर तिचा प्रियकर प्रशांतनेही चाकूने आपला गळा चिरून आत्महत्या केली.
बेळगाव शहर पोलीस आयुक्त यादा मार्टिन, डीसीपी रोहन जगदीश आणि मार्केट डिव्हिजन एसीपी संतोष सत्यनायक यांनी घटनास्थळी भेट देऊन पाहणी केली. याबाबत बेळगावमधील शहापूर पोलीस ठाण्यात गुन्ह्याची नोंद करण्यात आली आहे.
ಪ್ರೇಯಸಿ ಕತ್ತು ಸೀಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ
ಬೆಳಗಾವಿ, ಮಾ.4 – ಮದುವೆ ಆಗಲು ನಿರಾಕರಿಸಿದ ಪ್ರೇಯಸಿಯ ಕುತ್ತಿಗೆ ಕೋಯ್ದು, ಬಳಿಕ ತಾನೂ ಕುತ್ತಿಗೆ ಕೊಯ್ದುಕೊಂಡ ಪಾಗಲ್ ಪ್ರೇಮಿ ಸಾವನ್ನಪ್ಪಿದ ಘಟನೆ ಬೆಳಗಾವಿ ನಗರಸ ನಾಥ್ ಪೈ ವೃತ್ತದ ಬಳಿಯ ಮನೆಯೊಂದರಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ನಿವಾಸಿ 29 ವರ್ಷದ ಪ್ರಶಾಂತ ಕುಂಡೇಕರ್ ಎಂಬಾತ ನಾಥ್ ಪೈ ವೃತ್ತದ ನಿವಾಸಿ 18 ವರ್ಷದ ಐಶ್ವರ್ಯ ಮಹೇಶ ಲೋಹಾರ್ ಎಂಬ ಯುವತಿ ಪ್ರೀತಿಸುತ್ತಿದ್ದನಂತೆ.
ಪೇಂಟರ್ ಆಗಿ ಕೆಲಸ ಮಾಡಿಕೊಂಡಿದ್ದ ಪ್ರಶಾಂತ ಕುಂಡೇಕರ ತಮ್ಮ ಪ್ರೀತಿಯ ವಿಚಾರವನ್ನು ಐಶ್ವರ್ಯ ತಾಯಿ ಮುಂದೆ ಹೇಳಿದ್ದನಂತೆ. ಈ ವೇಳೆ ಯುವತಿ ತಾಯಿ ‘ಮದುವೆ ಈಗಲೇ ಬೇಡ, ನೀನು ಒಳ್ಳೆಯ ಕೆಲಸ ಹಿಡಿದು ಒಳ್ಳೆಯ ಜೀವನ ರೂಪಿಸಿಕೊಳ್ಳು ಎಂದು ಬುದ್ಧಿವಾದ ಹೇಳಿದ್ದರಂತೆ.
ಆದ್ರೆ ಇಂದು ಸಂಜೆ ನಾಥ್ ಪೈ ವೃತ್ತದ ಬಳಿಯ ಐಶ್ವರ್ಯ ಚಿಕ್ಕಮ್ಮಳ ಮನೆಯಲ್ಲಿ ಇಬ್ಬರೂ ಸೇರಿದ್ದಾರೆ. ವಿಷದ ಬಾಟಲಿ ಸಮೇತ ಐಶ್ವರ್ಯ ಚಿಕ್ಕಮ್ಮನ ಮನೆಗೆ ಬಂದಿದ್ದ ಪ್ರಶಾಂತ್, ಮದುವೆಗೆ ನಿರಾಕರಿಸಿದ ಐಶ್ವರ್ಯಗೆ ಒತ್ತಾಯಪೂರ್ವಕವಾಗಿ ವಿಷ ಕುಡಿಸಲು ಮುಂದಾಗಿದ್ದಾನೆ. ಯಾವಾಗ ಯುವತಿ ನಿರಾಕರಿಸಿದ್ದಾಳೋ ಜೇಬಿನಲ್ಲಿದ್ದ ಚೂರಿಯಿಂದ ಐಶ್ವರ್ಯ ಕತ್ತು ಕೊಯ್ದಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಐಶ್ವರ್ಯ ಸಾವನಪ್ಪುತ್ತಿದ್ದಂತೆ ತೀವ್ರ ವಿಚಲಿತನಾದ ಪಾಗಲ್ ಪ್ರೇಮಿ ಪ್ರಶಾಂತ್ ತಾನೂ ಚೂರಿಯಿಂದ ಕುತ್ತಿಗೆ ಕೊಯ್ದುಕೊಂಡು ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್, ಮಾರ್ಕೆಟ್ ವಿಭಾಗದ ಎಸಿಪಿ ಸಂತೋಷ ಸತ್ಯನಾಯಿಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬೆಳಗಾವಿಯ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
