साखर कारखान्यात बॉयलर स्फोट; दोन कामगारांचा मृत्यू, सहा जखमी.
बेळगाव : बेळगाव जिल्ह्यातील बैलहोंगल तालुक्यातील मरकुंबी येथील इनामदार शुगर्स साखर कारखान्यात आज बुधवारी दुपारी भीषण बॉयलर स्फोट झाला. या दुर्घटनेत तीन कामगारांचा जागीच मृत्यू झाला असून सहा कामगार गंभीर जखमी झाले आहेत.
स्फोट इतका भीषण होता की परिसरात एकच खळबळ उडाली. जखमी कामगारांना तातडीने बेळगाव येथील खासगी रुग्णालयात दाखल करण्यात आले असून त्यांची प्रकृती चिंताजनक असल्याचे सांगण्यात येत आहे.
घटनेची माहिती मिळताच पोलीस आणि कामगार विभागाचे अधिकारी घटनास्थळी दाखल झाले असून त्यांनी पाहणी करून तपास सुरू केला आहे. स्फोटाचे नेमके कारण अद्याप स्पष्ट झालेले नाही. या प्रकरणी पुढील तपास सुरू असून अपघातामागील कारणांचा शोध घेतला जात आहे.
या दुर्घटनेमुळे परिसरात शोककळा पसरली आहे.
ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ಇಬ್ಬರು ಕಾರ್ಮಿಕರ ಸಾವು, ಆರು ಮಂದಿಗೆ ಗಂಭೀರ ಗಾಯ.
ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮರಕುಂಬಿ ಗ್ರಾಮದ ಇನಾಮ್ದಾರ್ ಶುಗರ್ಸ್ ಸಕ್ಕರೆ ಕಾರ್ಖಾನೆಯಲ್ಲಿ ಇಂದು ಬುಧವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಭೀಕರ ಬಾಯ್ಲರ್ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ 3 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಫೋಟವು ಅತ್ಯಂತ ಭೀಕರವಾಗಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಆತಂಕ ಮೂಡಿತು. ಗಾಯಗೊಂಡ ಕಾರ್ಮಿಕರನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಪೊಲೀಸರು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತನಿಖೆಯನ್ನು ಆರಂಭಿಸಿದ್ದಾರೆ. ಸ್ಫೋಟದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಕರಣದಲ್ಲಿ ಮುಂದಿನ ತನಿಖೆ ನಡೆಯುತ್ತಿದ್ದು, ಅಪಘಾತದ ಹಿಂದೆ ಇರುವ ಕಾರಣಗಳನ್ನು ಪತ್ತೆಹಚ್ಚಲಾಗುತ್ತಿದೆ. ಈ ದುರ್ಘಟನೆಯಿಂದ ಪ್ರದೇಶದಲ್ಲಿ ಶೋಕವ್ಯಾಪ್ತಿಯಾಗಿದೆ.


