धनश्री के सरदेसाई यांची क्षत्रिय मराठा महासंघाच्या राज्य उपाध्यक्षपदी नियुक्ती; शंकर पाटील यांची भाजप तालुका प्रवक्तेपदी निवड-भाजपाकडून सत्कार.
खानापूर : कर्नाटक क्षत्रिय मराठा महासंघ (रि.), बेंगळुरूच्या राज्य घटकाच्या प्रशासकीय मंडळावर खानापूर येथील भारतीय जनता पक्षाच्या नेत्या तथा भाजपच्या बेळगाव जिल्हा प्रधान कार्यदर्शी सौ. धनश्री करणसिंह सरदेसाई यांचा समावेश करण्यात आला असून, त्यांची राज्य उपाध्यक्षपदी नियुक्ती करण्यात आली आहे. तसेच भाजपचे युवा नेते, खानापूर पीकेपीएसचे संचालक व सामाजिक कार्यकर्ते शंकर बाळाराम पाटील यांची खानापूर तालुका भाजपच्या प्रवक्तेपदी निवड करण्यात आली आहे.

या दोन्ही निवडीबद्दल खानापूर तालुका भाजपच्या वतीने विशेष सत्कार समारंभ आयोजित करण्यात आला. यावेळी खानापूर तालुक्याचे आमदार विठ्ठलराव हलगेकर, भाजप तालुका अध्यक्ष बसवराज सानिकोप, किसान मोर्चाचे जिल्हा उपाध्यक्ष तथा लैला शुगरचे एमडी सदानंद पाटील, भाजपा महिला खानापूर युनिटच्या अध्यक्षा सविता पाटील यांच्यासह पदाधिकाऱ्यांनी धनश्री सरदेसाई व शंकर पाटील यांचा हार व शाल घालून सत्कार केला.

यावेळी आमदार विठ्ठलराव हलगेकर यांनी दोघांच्याही निवडीबद्दल अभिनंदन करून शुभेच्छा दिल्या. पक्षसंघटना तसेच सामाजिक क्षेत्रात दोघांच्या माध्यमातून यापुढेही चांगले कार्य घडावे आणि त्यांच्या नेतृत्वाचा समाजाला व पक्षाला लाभ व्हावा, अशा सदिच्छा त्यांनी व्यक्त केल्या.
धनश्री करणसिंह सरदेसाई यांच्यावर क्षत्रिय मराठा महासंघाच्या राज्य पातळीवरील जबाबदारी सोपविण्यात आल्याने खानापूर तालुक्यातील सामाजिक व संघटनात्मक क्षेत्रातून त्यांचे अभिनंदन होत आहे. तर शंकर पाटील यांची भाजप तालुका प्रवक्तेपदी निवड झाल्याने पक्षाची भूमिका आणि विविध जनहिताच्या विषयांवर पक्षाची बाजू प्रभावीपणे मांडण्याची महत्त्वाची जबाबदारी त्यांच्यावर आली आहे.
यावेळी भाजपचे प्रधान कार्यदर्शी मल्लाप्पा मारिहाळ, गुंडू तोपिनकट्टी, उपाध्यक्ष अॅड. चेतन मनेरीकर, माजी नगरसेवक आप्पया कोडोळी, महालक्ष्मी ग्रुप व लैला शुगरचे संचालक चांगाप्पा निलंजकर, दत्ता कदम, भाजपा कार्यालय सेक्रेटरी रवी पाटील यांच्यासह भाजपचे पदाधिकारी, कार्यकर्ते व मोठ्या संख्येने उपस्थित होते.
ಸೌ.ಧನಶ್ರೀ ಕೆ. ಸರದೇಶಾಯಿ ಅವರಿಗೆ ಕ್ಷತ್ರಿಯ ಮರಾಠಾ ಮಹಾಸಂಘದ ರಾಜ್ಯ ಉಪಾಧ್ಯಕ್ಷೆ ಸ್ಥಾನ; ಶಂಕರ ಪಾಟೀಲರಿಗೆ ಬಿಜೆಪಿ ತಾಲ್ಲೂಕು ವಕ್ತಾರರಾಗಿ ಆಯ್ಕೆ ಯಾದ ಕಾರಣ – ಬಿಜೆಪಿಯಿಂದ ಸನ್ಮಾನ.
ಖಾನಾಪುರ : ಕರ್ನಾಟಕ ಕ್ಷತ್ರಿಯ ಮರಾಠಾ ಮಹಾಸಂಘ (ರಿ.), ಬೆಂಗಳೂರಿನ ರಾಜ್ಯ ಘಟಕದ ಆಡಳಿತ ಮಂಡಳಿಗೆ ಖಾನಾಪುರದ ಭಾರತೀಯ ಜನತಾ ಪಕ್ಷದ ನಾಯಕಿ ಹಾಗೂ ಬಿಜೆಪಿಯ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೌ. ಧನಶ್ರೀ ಕರಣಸಿಂಹ ಸರದೇಶಾಯಿ ಅವರನ್ನು ಸೇರ್ಪಡೆಗೊಳಿ, ಅವರನ್ನು ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅದೇ ರೀತಿ ಬಿಜೆಪಿಯ ಯುವ ನಾಯಕ, ಖಾನಾಪುರ ಪಿಕೆಪಿಎಸ್ನ ನಿರ್ದೇಶಕ ಹಾಗೂ ಸಾಮಾಜಿಕ ಕಾರ್ಯಕರ್ತ ಶಂಕರ ಬಾಳಾರಾಮ ಪಾಟೀಲ ಅವರನ್ನು ಖಾನಾಪುರ ತಾಲ್ಲೂಕು ಬಿಜೆಪಿಯ ವಕ್ತಾರರಾಗಿ ನೇಮಕ ಮಾಡಲಾಗಿದೆ.
ಈ ಎರಡೂ ಆಯ್ಕೆಗಳ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕು ಬಿಜೆಪಿ ಪಕ್ಷದ ವತಿಯಿಂದ ವಿಶೇಷ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಖಾನಾಪುರ ತಾಲ್ಲೂಕಿನ ಜನ ಪ್ರಿಯ ಶಾಸಕ ವಿಠ್ಠಲರಾವ್ ಹಲಗೇಕರ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಸವರಾಜ ಸಾನಿಕೊಪ್ಪ, ಕಿಸಾನ್ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರು ಹಾಗೂ ಲೈಲಾ ಸಕ್ಕರೆ ಕಾರ್ಖಾನೆಯ ಎಂಡಿ ಸದಾನಂದ ಪಾಟೀಲ, ಬಿಜೆಪಿ ಮಹಿಳಾ ಖಾನಾಪುರ ಘಟಕದ ಅಧ್ಯಕ್ಷೆ ಸವಿತಾ ಪಾಟೀಲ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಸೌ.ಧನಶ್ರೀ ಸರದೇಶಾಯಿ ಹಾಗೂ ಶಂಕರ ಪಾಟೀಲ ಅವರನ್ನು ಹಾರ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ ಅವರು ಇಬ್ಬರ ಆಯ್ಕೆಯನ್ನೂ ಅಭಿನಂದಿಸಿ ಶುಭಾಶಯಗಳನ್ನು ಕೋರಿದರು. ಪಕ್ಷದ ಸಂಘಟನೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಇವರಿಬ್ಬರ ಮೂಲಕ ಮುಂದೆಯೂ ಉತ್ತಮ ಕಾರ್ಯಗಳು ನಡೆಯಬೇಕು ಹಾಗೂ ಇವರ ನಾಯಕತ್ವದ ಪ್ರಯೋಜನೆ ಸಮಾಜಕ್ಕೆ ಮತ್ತು ಪಕ್ಷಕ್ಕೆ ದೊರೆಯಬೇಕು ಎಂದು ಅವರು ಶುಭ ಹಾರೈಸಿದರು.
ಸೌ.ಧನಶ್ರೀ ಕರಣಸಿಂಹ ಸರದೇಶಾಯಿ ಅವರಿಗೆ ಕ್ಷತ್ರಿಯ ಮರಾಠಾ ಮಹಾಸಂಘದ ರಾಜ್ಯಮಟ್ಟದ ಜವಾಬ್ದಾರಿ ವಹಿಸಿರುವ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕಿನ ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಅದೇ ರೀತಿ ಶಂಕರ ಪಾಟೀಲ ಅವರು ಬಿಜೆಪಿ ತಾಲ್ಲೂಕು ವಕ್ತಾರರಾಗಿ ಆಯ್ಕೆಯಾಗಿರುವುದರಿಂದ ಪಕ್ಷದ ನಿಲುವು ಹಾಗೂ ವಿವಿಧ ಜನಹಿತದ ವಿಷಯಗಳ ಕುರಿತು ಪಕ್ಷದ ಪರವಾಗಿ ಪರಿಣಾಮಕಾರಿಯಾಗಿ ಅಭಿಪ್ರಾಯ ಮಂಡಿಸುವ ಮಹತ್ವದ ಜವಾಬ್ದಾರಿ ಅವರ ಮೇಲೆ ಬಂದಿದೆ.
ಈ ಸಂದರ್ಭದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮರಿಹಾಳ, ಗುಂಡು ತೋಪಿನಕಟ್ಟಿ, ಉಪಾಧ್ಯಕ್ಷ ಅಡ್ವೊಕೇಟ್ ಚೇತನ ಮನೇರಿಕರ್, ಮಾಜಿ ನಗರಸಭಾ ಸದಸ್ಯ ಅಪ್ಪಯ್ಯ ಕೊಡೋಳಿ, ಮಹಾಲಕ್ಷ್ಮಿ ಗ್ರೂಪ್ ಹಾಗೂ ಲೈಲಾ ಶುಗರ್ನ ನಿರ್ದೇಶಕ ಚಾಂಗಪ್ಪ ನಿಲಂಜಕರ, ದತ್ತಾ ಕದಮ, ಬಿಜೆಪಿ ಕಚೇರಿ ಕಾರ್ಯದರ್ಶಿ ರವಿ ಪಾಟೀಲ ಸೇರಿದಂತೆ ಬಿಜೆಪಿಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಉಪಸ್ಥಿತರಿದ್ದರು.



