13 ऑक्टोबरला खानापूरात भाजपचे रक्तदान शिबिर; पूर्वतयारी बैठकीत नियोजन.
खानापूर : प्रतिनिधी
भारतीय जनता पार्टी, खानापूर तालुका यांच्या वतीने देशाचे पंतप्रधान नरेंद्र मोदी यांच्या वाढदिवसानिमित्त ‘सेवा संकल्प अभियान’ अंतर्गत मंगळवार, दिनांक 13 ऑक्टोबर 2026 रोजी रक्तदान शिबिराचे आयोजन करण्यात आले आहे. या शिबिराच्या पूर्वतयारीसाठी भाजपच्या तालुका मध्यवर्ती कार्यालयात पूर्वतयारी बैठक घेण्यात आली.
बैठकीच्या अध्यक्षस्थानी भाजप तालुका अध्यक्ष बसवराज सानीकोप होते. यावेळी भाजप राज्य कार्यकारिणी सदस्य प्रमोद कोचेरी, जिल्हा उपाध्यक्ष संजय कुबल, अभियानाचे तालुका संचालक ज्योतिबा रेमानी, भाजप सरचिटणीस मल्लाप्पा मारीहाळ, जिल्हा युवा मोर्चा उपाध्यक्ष पंडित ओगले, जिल्हा चिटणीस सुनील मड्डीमनी आणि तालुका उपाध्यक्ष मोहन पाटील यांची प्रमुख उपस्थिती होती.
याशिवाय भाजप नेते अजित पाटील, नारायण गुरव, बंटी बुवाजी, रवी पाटील यांच्यासह अनेक पदाधिकारी व कार्यकर्ते मोठ्या संख्येने उपस्थित होते.
यावेळी रक्तदान शिबिराचे नियोजन, कार्यकर्त्यांची जबाबदारी तसेच शिबिरात अधिकाधिक नागरिकांनी सहभागी होण्यासाठी करण्यात येणाऱ्या जनजागृतीबाबत चर्चा करण्यात आली. रक्तदान शिबिर यशस्वी करण्यासाठी सर्व पदाधिकारी व कार्यकर्त्यांनी मोलाचे योगदान द्यावे, असे आवाहन बैठकीत करण्यात आले.
ಅಕ್ಟೋಬರ್ 13ರಂದು ಖಾನಾಪುರದಲ್ಲಿ ಬಿಜೆಪಿ ವತಿಯಿಂದ ರಕ್ತದಾನ ಶಿಬಿರ; ಪೂರ್ವಸಿದ್ಧತಾ ಸಭೆಯಲ್ಲಿ ಯೋಜನೆ
ಖಾನಾಪುರ : ಪ್ರತಿನಿಧಿ
ಭಾರತೀಯ ಜನತಾ ಪಕ್ಷ, ಖಾನಾಪುರ ತಾಲೂಕು ಘಟಕದ ವತಿಯಿಂದ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ‘ಸೇವಾ ಸಂಕಲ್ಪ ಅಭಿಯಾನ’ದಡಿ ಮಂಗಳವಾರ, ದಿನಾಂಕ 13 ಅಕ್ಟೋಬರ್ 2026 ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ರಕ್ತದಾನ ಶಿಬಿರದ ಪೂರ್ವಸಿದ್ಧತೆಗಾಗಿ ಬಿಜೆಪಿ ತಾಲೂಕು ಮಧ್ಯವರ್ತಿ ಕಚೇರಿಯಲ್ಲಿ ಪೂರ್ವಸಿದ್ಧತಾ ಸಭೆಯನ್ನು ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಸಾನಿಕೋಪ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ ಅಣ್ಣಾ ಕೋಚೇರಿ, ಜಿಲ್ಲಾ ಉಪಾಧ್ಯಕ್ಷ ಸಂಜಯ ಕುಬಲ, ಅಭಿಯಾನದ ತಾಲೂಕು ಸಂಚಾಲಕ ಜ್ಯೋತಿಬಾ ರೇಮಾನಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪಂಡಿತ ಓಗಲೆ, ಜಿಲ್ಲಾ ಕಾರ್ಯದರ್ಶಿ ಸುನೀಲ ಮಡ್ಡಿಮನಿ ಹಾಗೂ ತಾಲೂಕು ಉಪಾಧ್ಯಕ್ಷ ಮೋಹನ್ ಪಾಟೀಲ ಅವರು ಪ್ರಮುಖವಾಗಿ ಉಪಸ್ಥಿತರಿದ್ದರು.
ಇದಲ್ಲದೆ ಬಿಜೆಪಿ ಮುಖಂಡರಾದ ಅಜಿತ್ ಪಾಟೀಲ, ನಾರಾಯಣ ಗುರುವ, ಬಂಟಿ ಬುವಾಜಿ, ರವಿ ಪಾಟೀಲ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಕ್ತದಾನ ಶಿಬಿರದ ಸಂಪೂರ್ಣ ಯೋಜನೆ, ಕಾರ್ಯಕರ್ತರಿಗೆ ವಹಿಸಬೇಕಾದ ಜವಾಬ್ದಾರಿಗಳು ಹಾಗೂ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕೈಗೊಳ್ಳಬೇಕಾದ ಜನಜಾಗೃತಿ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.
ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಪಕ್ಷದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಮ್ಮ ಅಮೂಲ್ಯ ಸಹಕಾರ ಮತ್ತು ಕೊಡುಗೆಯನ್ನು ನೀಡಬೇಕು ಎಂದು ಸಭೆಯಲ್ಲಿ ಕರೆ ನೀಡಲಾಯಿತು.

