बिळकी-अवरोळी मठातील कार्यक्रमास सर्वांनी मोठ्या संख्येने उपस्थित राहावेत : चन्नबसव देवरू स्वामी.
खानापूर : तालुक्यातील बीळकी-आवरोळी मठात परमपूज्य श्री शांडिल्य महाराज यांच्या पुण्यतिथी निमित्त, 21 मार्च रोजी विविध कार्यक्रमांचे आयोजन करण्यात आले असून, कार्यक्रमास सर्वांनी मोठ्या संख्येने उपस्थित राहण्याचे आवाहन बीळकी आवरोळी मठाचे मठाधीश चन्नबसव देवरू स्वामी यांनी केले आहे.
21 मार्च रोजी वारकऱ्यांचे पारायण सोहळा आयोजित करण्यात आला असून त्या दिवशी वारकरी सांप्रदायाचे गोपाळ अण्णा वासकर महाराज उपस्थित राहणार आहेत. तसेच त्यादिवशी मेडिकल कॅम्प आयोजित करण्यात आले असून, वेग वेगळे वैद्य व नाडी तज्ञ आरोग्याची मोफत तपासणी करून मोफत औषध देण्यात येणार आहेत. याचा लाभ घेण्याची विनंती त्यांनी केली आहे.
ಬಿಲ್ಕಿ-ಅವ್ರೋಲಿ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು : ಚನ್ನಬಸವ ದೇವರು ಸ್ವಾಮಿ.
ಖಾನಾಪುರ: ಪರಮಪೂಜ್ಯ ಶ್ರೀ ಶಾಂಡಿಲ್ಯ ಮಹಾರಾಜರ ಪುಣ್ಯತಿಥಿ ನಿಮಿತ್ತ ಮಾ.21ರಂದು ತಾಲೂಕಿನ ಬೀಳ್ಕಿ-ಅವ್ರೋಲಿ ಮಠದಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಬಿಲ್ಕಿ ಅವರೋಲಿ ಮಠದ ಮಠಾಧೀಶ ಚನ್ನಬಸವ ದೇವರು ಸ್ವಾಮಿ ಮನವಿ ಮಾಡಿದ್ದಾರೆ.
ಮಾ.21ರಂದು ಮಠದಲ್ಲಿ ವಾರಕರ ಪಾರಾಯಣ ಸಮಾರಂಭ ಏರ್ಪಡಿಸಲಾಗಿದ್ದು, ಅಂದು ವಾರಕರಿ ಪಂಗಡದ ಗೋಪಾಲ್ ಅಣ್ಣಾ ವಸ್ಕರ್ ಮಹಾರಾಜ್ (ಪಂಢರಪುರ) ಸಾನ್ನಿಧ್ಯ ವಹಿಸಲಿದ್ದಾರೆ. ಅಲ್ಲದೆ ಅಂದು ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದ್ದು, ತಜ್ಞ ವೈದ್ಯರು ಹಾಗೂ ನಾಡಿ ತಜ್ಞರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ನೀಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳುವಂತೆ ಚನ್ನಬಸವ ದೇವರು ಸ್ವಾಮಿ ಕೋರಿದ್ದಾರೆ.