
मडवाळ गावानजीक दुचाकी व बसचा अपघात. प्रशासनाचं रस्त्याकडे दुर्लक्ष झाल्याने अपघात ; ग्रामस्थांचा आरोप.
खानापूर : तालुक्यातील हलशी भागातील मडवाळ गावाजवळ आज मंगळवार दिनांक 26 ऑगस्ट रोजी सायंकाळी 4.30 वाजेच्या दम्यान बस व दुचाकीचा अपघात झाला. या दुर्घटनेत दुचाकीस्वार गंभीर जखमी झाला असून त्याच्यावर तातडीने नंदगड येथे प्रथमोपचार करून पुढील उपचारासाठी बेळगावला हलविण्यात आले आहे.
जखमीची ओळख महादेव अर्जुन वीर (वय 45, रा. देवराई) अशी झाली आहे. त्यांच्या डोक्याला गंभीर मार बसल्याने ते बेशुद्धावस्थेत आहेत. दुचाकीवर मागे बसलेला त्यांचा मुलगा अभिजीत हा किरकोळ जखमी झाला आहे.
घटनास्थळी मिळालेल्या माहितीनुसार, महादेव वीर हे बाजाराच्या कामासाठी नंदगडकडे येत असताना मडवाळ गावाजवळ तळ्याजवळील रस्त्यावरील खड्डे चुकविताना त्यांची दुचाकी समोरून येणाऱ्या केएसआरटीसीच्या बसला धडकली. अपघातात गंभीर दुखापत झाल्याने त्यांना नंदगडच्या प्राथमिक आरोग्य केंद्रात दाखल करण्यात आले व नंतर बेळगावला हलविण्यात आले. त्यांची प्रकृती चिंताजनक असल्याचे सांगितले जात आहे.
या अपघातानंतर स्थानिक ग्रामस्थांनी प्रशासनाविरोधात तीव्र संताप व्यक्त केला आहे. “रस्त्यावर प्रचंड खड्डे असून दुरुस्ती न केल्यामुळेच हा अपघात घडला. जबाबदार सार्वजनिक बांधकाम विभागाच्या अधिकाऱ्यांवर गुन्हा दाखल करून कायदेशीर कारवाई करावी,” अशी मागणी ग्रामस्थांकडून करण्यात आली आहे.
दरम्यान, या प्रकरणी जखमींच्या नातेवाईकांकडून नंदगड पोलिस ठाण्यात तक्रार दाखल करण्याची प्रक्रिया सुरू आहे.
ಮಡವಾಳ ಗ್ರಾಮದ ಬಳಿ ಬೈಕ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತ. ರಸ್ತೆಯ ಬಗ್ಗೆ ಆಡಳಿತದ ನಿರ್ಲಕ್ಷ್ಯವೇ ಅಪಘಾತ ಕಾರಣ ಎಂದು ಗ್ರಾಮಸ್ಥರು ಆರೋಪ.
ಖಾನಾಪುರ : ತಾಲೂಕಿನ ಹಲಶಿ ಭಾಗದ ಮಡವಾಳ ಗ್ರಾಮದ ಬಳಿ ಇಂದು ಇಂದು ಮಂಗಳವಾರ, ಆಗಸ್ಟ್ 26, ಸಂಜೆ 4:30 ಕ್ಕೆ. ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದೆ. ಈ ಘಟನೆದಲ್ಲಿ ದ್ವಿಚಕ್ರ ವಾಹನ ಸವಾರ ಮಹಾದೇವ ಅರ್ಜುನ ವೀರ (45, ಸಾ. ದೇವರಾಯಿ) ಗಂಭೀರವಾಗಿ ಗಾಯಗೊಂಡಿದ್ದು, ನಂದಗಡದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮಗ ಅಭಿಜೀತಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಯ ವೇಳೆ ಮಹಾದೇವ ವೀರ ಅವರು ಮಾರುಕಟ್ಟೆ ಕೆಲಸಕ್ಕಾಗಿ ನಂದಗಡ ಕಡೆ ಬರುತ್ತಿದ್ದಾಗ, ಮಡವಾಳ ಗ್ರಾಮದ ಹಳ್ಳದ ಸಮೀಪದ ರಸ್ತೆಯಲ್ಲಿದ್ದ ಭಾರಿ ಗುಂಡಿಗಳನ್ನು ತಪ್ಪಿಸಲು ಹೋಗಿ ಎದುರು ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದ್ದಾರೆ. ತಲೆಗೆ ತೀವ್ರವಾದ ಪೆಟ್ಟಾಗಿರುವ ಕಾರಣ ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಈ ಅಪಘಾತದ ನಂತರ ಸ್ಥಳೀಯರು ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಸ್ತೆಯಲ್ಲಿ ಅನೇಕ ಗುಂಡಿಗಳು ಇದ್ದರೂ ದುರಸ್ತಿ ಕಾರ್ಯ ಮಾಡದಿರುವುದರಿಂದಲೇ ಈ ಅಪಘಾತ ಸಂಭವಿಸಿದೆ.ಇದರ ಜವಾಬ್ದಾರಿಯನ್ನು ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಗ್ರಾಮಸ್ಥರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗಾಯಾಳು ಕುಟುಂಬಸ್ಥರಿಂದ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಪ್ರಕ್ರಿಯೆ ಆರಂಭವಾಗಿದೆ.
